ಕಿಚ್ಚನ ಬರ್ತಡೇಯನ್ನು ಸಾರ್ಥಕಗೊಳಿಸುತ್ತಿದ್ದಾರೆ ಅಭಿಮಾನಿಗಳು!

Published : Sep 02, 2019, 12:55 PM ISTUpdated : Sep 02, 2019, 12:59 PM IST
ಕಿಚ್ಚನ ಬರ್ತಡೇಯನ್ನು ಸಾರ್ಥಕಗೊಳಿಸುತ್ತಿದ್ದಾರೆ ಅಭಿಮಾನಿಗಳು!

ಸಾರಾಂಶ

  ಸ್ಯಾಂಡಲ್ ವುಡ್ ಮಾಣಿಕ್ಯ ಕಿಚ್ಚ ಸುದೀಪ್ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನಿಗಳು ಎಲ್ಲೆಡೆ ದಾನ ಧರ್ಮ ಮಾಡುವ ಮೂಲಕ ಆಚರಣೆ ಅದ್ಧೂರಿಯಾಗಿ ನಡೆಯುತ್ತಿದೆ.

ಅಭಿಮಾನಿಗಳನ್ನು ಸ್ನೇಹಿತರೆಂದು ಕರೆದು ಪ್ರೀತಿ ತೋರಿಸುವ ಸ್ಯಾಂಡಲ್ ವುಡ್ ಬಚ್ಚನ್ ಇಂದು 46 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಕಿಚ್ಚನ ಅಭಿಮಾನಿಗಳಿಗೆ ಇಂದು ಡಬಲ್ ಧಮಾಕ. ಒಂದೆಡೆ ಗೌರಿ-ಗಣೇಶ ಹಬ್ಬ ಮತ್ತೊಂದೆಡೆ ಕಿಚ್ಚ ಸುದೀಪ್ ಹುಟ್ಟು ಹಬ್ಬ. ಇನ್ನು ಉತ್ತರ ಕರ್ನಾಟಕ ಪ್ರವಾಹದ ಪ್ರಯುಕ್ತ ಸರಳವಾಗಿ ಹುಟ್ಟುಹಬ್ಬವನ್ನು ಆಚರಿಸಲು ಸುದೀಪ್ ನಿರ್ಧರಿಸಿದ್ದಾರೆ.

 

ಹುಟ್ಟು ಹಬ್ಬದ ಪ್ರಯುಕ್ತ ಹೆಚ್.ಡಿ. ಕೋಟೆಯಲ್ಲಿ ಸುದೀಪ್ ಅಭಿಮಾನಿಗಳು ಅನ್ನ ಸಂತರ್ಪಣೆಯನ್ನು ಮಾಡಿ ಸುದೀಪ್ ಗೆ ಆ ದೇವರು ಆಯುಷ್ಯ ಆರೋಗ್ಯ ಕೊಟ್ಟು ಕಾಪಾಡಲಿ ಎಂದು ಆಶಿಸಿದ್ದಾರೆ. ಇನ್ನು ಕೆಲವರು ಚಿಕ್ಕ ಕಿರುಕಾಣಿಕೆಯಾಗಿ ರಕ್ತದಾನ ಮಾಡಿದ್ದಾರೆ. ಒಟ್ಟಿನಲ್ಲಿ ಒಳ್ಳೊಳ್ಳೆ ಕೆಲಸಗಳ ಮೂಲಕ ಸುದೀಪ್ ಹುಟ್ಟುಹಬ್ಬವನ್ನು ಸಾರ್ಥಕಗೊಳಿಸುತ್ತಿದ್ದಾರೆ ಅಭಿಮಾನಿಗಳು.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ರಶ್ಮಿಕಾ -ವಿಜಯ್ ಮದುವೆಯಲ್ಲಿ ಸ್ವೀಟ್ ತಿನ್ನೋಕೂ ಜನರಿಲ್ವಾ? ಬೀದಿಗೆ ಬಂದು ಸಿಹಿತಿಂಡಿ ಹಂಚಿದ ಕುಟುಂಬ ಸದಸ್ಯರು!
Bhargavi LLB Serial ಮುಗಿಯಲಿದೆ ಎನ್ನುವಷ್ಟರಲ್ಲಿ ಹೊಸ ಅವತಾರದಲ್ಲಿ ಬಂದ ಭಾರ್ಗವಿ!