‘ಲುಂಗಿ’ ತೊಟ್ಟ ರಕ್ಷಿತ್; ಹೊಸಬರಿಗೆ ಸಾಥ್!

Published : Sep 02, 2019, 10:52 AM ISTUpdated : Sep 02, 2019, 03:52 PM IST
‘ಲುಂಗಿ’ ತೊಟ್ಟ ರಕ್ಷಿತ್; ಹೊಸಬರಿಗೆ ಸಾಥ್!

ಸಾರಾಂಶ

ತುಳು ಚಿತ್ರಗಳ ನಿರ್ಮಾಪಕ ಮುಖೇಶ್ ಹೆಗಡೆ ನಿರ್ಮಾಣದ ಮೊದಲ ಕನ್ನಡ ಚಿತ್ರ‘ಲುಂಗಿ’ ರಿಲೀಸ್‌ಗೆ ರೆಡಿ ಆಗಿದೆ. ಈ ಚಿತ್ರದ ಮೂಲಕ ಅವರು, ತಮ್ಮ ಪುತ್ರ ಪ್ರಣವ್ ಹೆಗಡೆ ಅವರನ್ನು ಹೀರೋ ಆಗಿ ಬೆಳ್ಳಿತೆರೆಗೆ ಪರಿಚಯಿಸುತ್ತಿದ್ದಾರೆ .

ಈ ಚಿತ್ರಕ್ಕೀಗ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಬೆಂಬಲವಾಗಿ ನಿಂತಿದ್ದಾರೆ. ಅವರ ಪ್ರಯತ್ನದಿಂದಾಗಿಯೇ ಈಗ ‘ಲುಂಗಿ’ ಚಿತ್ರದ ವಿತರಣೆಯ ಹಕ್ಕು ಜಯಣ್ಣ ಕಂಬೈನ್ಸ್ ಪಾಲಾಗಿದೆ. ಇದು ನಿರ್ಮಾಪಕ ಮುಖೇಶ್ ಹೆಗಡೆ
ಸೇರಿದಂತೆ ಇಡೀ ಚಿತ್ರತಂಡಕ್ಕೆ ಖುಷಿ ತಂದಿದೆ.

ಬಾಹುಬಲಿ ನಂತರ ಅತಿ ಹೆಚ್ಚು ದಿನ ಶೂಟಿಂಗ್‌ ಮಾಡಿದ ಶ್ರೀಮನ್ನಾರಾಯಣ!

ಚಿತ್ರದ ನಿರ್ಮಾಪಕ ಮುಖೇಶ್ ಹೆಗಡೆ ಈ ವಿಚಾರ ಹಂಚಿಕೊಂಡರು.‘ಸಿನಿಮಾ ಮಾಡುವುದು ಸುಲಭ, ಆದರೆ ಅದನ್ನು ಬಿಡುಗಡೆ ಮಾಡುವುದು ತೀರಾ ಕಷ್ಟ. ನಾವು ಅಂತಹ ಕಷ್ಟದಲ್ಲಿದ್ದಾಗ ನಮ್ಮಗೆ ಬೆಂಬಲವಾಗಿ ನಿಂತವರು ನಟ ರಕ್ಷಿತ್ ಶೆಟ್ಟಿ. ಅವರ ಬೆಂಬಲದಿಂದಲೇ ಈಗ ನಮ್ಮ ಚಿತ್ರ ಜಯಣ್ಣ ಕಂಬೈನ್ಸ್ ಮೂಲಕ ರಿಲೀಸ್ ಆಗುತ್ತಿದೆ’ ಎಂದು ಸಂತಸ ವ್ಯಕ್ತಪಡಿಸಿದರು.

ರಕ್ಷಿತ್ ಶೆಟ್ಟಿ ಹೈಬಜೆಟ್ ಚಿತ್ರಕ್ಕೆ 200 ದಿನ ಚಿತ್ರೀಕರಣ!

ಟ್ರೇಲರ್ ಲಾಂಚ್‌ಗೆ ಅತಿಥಿಯಾಗಿ ಬಂದಿದ್ದ ನಟ ರಕ್ಷಿತ್ ಶೆಟ್ಟಿ ಹೊಸಬರ ಪ್ರಯತ್ನವನ್ನು ಮುಕ್ತ ಕಂಠದಿಂದ ಬಣ್ಣಿಸಿದರು. ‘ಒಂದು ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿನ ಭಾಷೆಯ ಸೊಗಡು ಸಿನಿಮಾಗಳಲ್ಲಿ ಹಾಸ್ಯಕ್ಕೆ ಮಾತ್ರ ಸೀಮಿತ ಎನ್ನುವಂತಿತ್ತು. ಕರಾವಳಿ ಭಾಷೆ ಕೂಡ ಹಾಗೆಯೇ ಇತ್ತು. ಈಗ ಆಯಾ ಪ್ರಾದೇಶಿಕ ಭಾಷಾ ಸೊಗಡಿನಲ್ಲೇ ಸಿನಿಮಾಗಳು ಬರುತ್ತಿರುವುದು ಒಳ್ಳೆಯ ಬೆಳವಣಿಗೆ. ಈ ಸಿನಿಮಾ ಪೂರ್ಣ ಪ್ರಮಾಣದಲ್ಲಿ ಕರಾವಳಿ ಕನ್ನಡದಲ್ಲಿದೆ. ಇದೇ ರೀತಿ ಕುಂದಾಪುರ ಕನ್ನಡ, ಉತ್ತರ ಕರ್ನಾಟಕದ ಕನ್ನಡಗಳಲ್ಲೂ ಸಿನಿಮಾಗಳು ಬರಬೇಕು. ಆ ಸಿನಿಮಾಗಳು ಗೆಲ್ಲಬೇಕು’ ಎನ್ನುವ ಅಭಿಪ್ರಾಯ ರಕ್ಷಿತ್ ಶೆಟ್ಟಿ ಅವರದ್ದು.

 

"

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

'ನನ್ನ ಸಂತೋಷ ಅಮೂಲ್ಯ, ಕರ್ಮದಲ್ಲಿ ನನಗೆ ನಂಬಿಕೆ ಇದೆ..' ದಿಲೀಪ್‌ ಖುಲಾಸೆ ಬೆನ್ನಲ್ಲೇ ವೈರಲ್‌ ಆದ ಜಾಕಿ ಭಾವನಾ ಮಾತು!
ಎಲ್ಲಾ ಸೀರಿಯಲ್​ ಜ್ಯೋತಿಷಿಗಳೇಕೇ ಮಹಾ ವಂಚಕರು? ಕರ್ಣ- ನಿಧಿ ಮದ್ವೆ ಮುಹೂರ್ತಕ್ಕೆ ಜಾಲತಾಣದಲ್ಲಿ ಭಾರಿ ಆಕ್ರೋಶ!