ಮತ್ತೆ ಲಾಂಗ್ ಹಿಡಿದ ದುನಿಯಾ ವಿಜಯ್!

By Web Desk  |  First Published Sep 2, 2019, 10:35 AM IST

ದುನಿಯಾ ವಿಜಯ್ ಅಭಿನಯದ ‘ಸಲಗ’ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಲಾಂಚ್ ಆಗಿದೆ


ಪುನೀತ್ ರಾಜ್‌ಕುಮಾರ್ ಪೋಸ್ಟರ್ ಲಾಂಚ್ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಗಣೇಶ್ ಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡ ಈ ಪೋಸ್ಟರ್ ಹೊರ ತಂದಿದೆ. ಕಡು ಕಪ್ಪು ಉಡುಗೆ, ಕೈಯಲ್ಲಿ ಮಚ್ಚು, ಕಣ್ಣುಗಳಲ್ಲಿ ತುಂಬಿಕೊಂಡ ದ್ವೇಷದ ಕಿಚ್ಚಿನೊಂದಿಗೆ ಭೇಟೆಗಾಗಿ ಹೊಂಚು ಹಾಕಿ ಕುಳಿತ ವ್ಯಾಘ್ರದಂತಿರುವ ವಿಜಯ್ ಅವರ ಫಸ್ಟ್ ಲುಕ್, ತೀವ್ರ ಕುತೂಹಲ ಹುಟ್ಟಿಸುವಂತಿದೆ.

ಡಾಲಿ ಧನಂಜಯ್ ಇದೀಗ ಪೊಲೀಸ್ ; ಖಡಕ್ ಲುಕ್‌ ಆಯ್ತು ವೈರಲ್

Tap to resize

Latest Videos

ಕೆ.ಪಿ. ಶ್ರೀಕಾಂತ್ ನಿರ್ಮಾಣದ ಈ ಚಿತ್ರಕ್ಕೆ ದುನಿಯಾ ವಿಜಯ್ ಆ್ಯಕ್ಷನ್ ಕಟ್ ಹೇಳುವುದರ ಜತೆಗೆ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಡಾಲಿ ಧನಂಜಯ್, ಸಂಜನಾ ಆನಂದ್, ತ್ರಿವೇಣಿ ರಾವ್, ಕಾಕ್ರೋಚ್ ಖ್ಯಾತಿಯ ಸುಧೀ, ಯಶ್ ಶೆಟ್ಟಿ ಹಾಗೂ ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಈ ಚಿತ್ರದಲ್ಲಿದೆ.

 

 

click me!