ಪೈಲ್ವಾನ್‌ ಗೆಲ್ಲಿಸುವ ತೂಕ ದೊಡ್ಮಗ ಸುದೀಪ್‌ಗೆ ಇದೆ: ರವಿಚಂದ್ರನ್‌

By Web DeskFirst Published Sep 12, 2019, 7:48 AM IST
Highlights

ಇಡೀ ಇಂಡಿಯಾವನ್ನೇ ಒಂದು ಸುತ್ತು ಹಾಕಿ ಬರುವಷ್ಟುಎತ್ತರಕ್ಕೆ ಕನ್ನಡ ಚಿತ್ರರಂಗ ಬೆಳೆಯುತ್ತಿದೆ. ಇಲ್ಲಿ ನೂರು ಕೋಟಿ ಹಾಕಿ ಸಿನಿಮಾ ಮಾಡುವುದು ಕಷ್ಟವೇನು ಅಲ್ಲ ಅಂತ ಹಲವರು ತೋರಿಸುತ್ತಿದ್ದಾರೆ. ಅವರ ಸಾಲಿನಲ್ಲಿ ನನ್ನ ದೊಡ್ಮಗ ಸುದೀಪ್‌ ಕೂಡ ಇದ್ದಾರೆಂದರೆ, ನನಗಿಂತ ಖುಷಿ ಪಡುವವರು ಇನ್ಯಾರು ಇಲ್ಲ...

- ಕಿಚ್ಚ ಸುದೀಪ್‌ ಮತ್ತು ಅವರು ಅಭಿನಯಿಸಿದ ‘ಪೈಲ್ವಾನ್‌’ ಚಿತ್ರ ನಿರ್ಮಾಣದ ಸಾಹಸವನ್ನು ಈ ಮಾತುಗಳ ಮೂಲಕ ಹರ್ಷದಿಂದ ಗುಣಗಾನ ಮಾಡಿದ್ದು ಕ್ರೇಜಿಸ್ಟಾರ್‌ ರವಿಚಂದ್ರನ್‌. ‘ಪೈಲ್ವಾನ್‌’ ನಾಳೆ(ಸೆ.12) ವಲ್‌ರ್‍್ಡ ವೈಡ್‌ ರಿಲೀಸ್‌ ಆಗುತ್ತಿದೆ. ಇದರ ಪೂರ್ವಭಾವಿಯಾಗಿ ಚಿತ್ರತಂಡ ಆಯೋಜಿಸಿದ್ದ ಔಪಚಾರಿಕ ಕಾರ್ಯಕ್ರಮಕ್ಕೆ ಬಂದಿದ್ದ ನಟ ರವಿಚಂದ್ರನ್‌ ಚಿತ್ರದ ಟ್ರೇಲರ್‌ ಹಾಗೂ ಮೇಕಿಂಗ್‌ ವಿಡಿಯೋ ವೀಕ್ಷಿಸಿ ಮಾತನಾಡಿದರು. ಅಲ್ಲಿ ಅವರು ಹೇಳಿದ ಮೂರು ಮಾತು.

ಸುದೀಪ್‌ ಜತೆಗೆ ನಾನು..

ನಾನು ಯಾವಾಗಲೂ ಸುದೀಪ್‌ ಜತೆಗೆ ಇರ್ತೀನಿ ಅಂಥ ಸುದೀಪ್‌ಗೂ ಗೊತ್ತು, ಹಾಗೆಯೇ ಅದು ಎಲ್ಲರಿಗೂ ಗೊತ್ತು. ನಾನು ಇತ್ತೀಚೆಗೆ ‘ಕುರುಕ್ಷೇತ್ರ’ದಲ್ಲಿ ಕೃಷ್ಣನ ಗೆಟಪ್‌ ಹಾಕಿದ್ದೆ. ಕೃಷ್ಣನ ಪಾತ್ರ ನಿಭಾಯಿಸೋದಿಕ್ಕೆ ನನ್ನಿಂದ ಆಗುತ್ತಾ ಅಂತ ಯೋಚಿಸಿದ್ದೂ ಇತ್ತು. ಕೆಲವರಿಗೆ ಅನುಮಾನಗಳು ಇದ್ದವು. ಆದ್ರೆ ಆ ಕೃಷ್ಣ ಗೆದ್ದಾಯ್ತು. ಈಗ ಈ ‘ಪೈಲ್ವಾನ್‌’ ಕೃಷ್ಣ ಗೆಲ್ಲೋದ್ರಲ್ಲಿ ಸಂಶಯವೇ ಇಲ್ಲ. ಒಂದು ಸಿನೆಮಾದಲ್ಲಿ ಒಂದು ಫೈರ್‌ ಕಾಣಿಸಬೇಕು. ಅದು ಈ ಚಿತ್ರದ ಟ್ರೇಲರ್‌ನಲ್ಲಿದೆ. ಟ್ರೇಲರ್‌ ನೋಡಿದ ಮೇಲೆ ಸಿನಿಮಾ ನೋಡಬೇಕೆಂದೆನಿಸುತ್ತೆ. ‘ಪೈಲ್ವಾನ್‌’ ನಲ್ಲಿ ಗೆಲ್ಲುವ ಛಾಮ್‌ರ್‍ ಇದೆ. ಗೆಲ್ಲಿಸುವ ತೂಕ ಸುದೀಪ್‌ ಅವರಲ್ಲೂ ಇದೆ. ಅದು ನಿರ್ದೇಶಕರ ನಿರ್ದೇಶನದಲ್ಲೂ ಇದೆ. ಈ ಸಿನಿಮಾ ಗೆದ್ದೇ ಗೆಲ್ಲುತ್ತೆ .

ಸುದೀಪ್‌ ಪೈಲ್ವಾನ್‌ಗೆ U/A ಸರ್ಟಿಫಿಕೇಟ್‌!

ಸುದೀಪ್‌ಗೆ ಹ್ಯಾಟ್ಸಾಪ್‌...

ಸುದೀಪ್‌ ಯಾವಾಗ ಪೈಲ್ವಾನ್‌ ಆಗ್ತಾರೆ, ಹೇಗೆ ಮಾಡ್ತಾರೆ ಎನ್ನುವುದಿತ್ತು. ಆ ಕುತೂಹಲ ನಂಗೂ ಇತ್ತು. ಈಗ ಅಚ್ಚರಿ ಆಗುವ ಹಾಗೆ ಅವರು ಪೈಲ್ವಾನ್‌ ಆಗಿದ್ದಾರೆ. ‘ಪೈಲ್ವಾನ್‌’ ಆಗಲು ಸಾಕಷ್ಟುಶ್ರಮ ಹಾಕಿದ್ದಾರೆ. ಪಾತ್ರಕ್ಕೆ ಏನು ಬೇಕೋ ಆ ತರ ಬದಲಾಗಿದ್ದಾರೆ. ಹೀಗೆ ಬದಲಾಗುವುದು ಸುಲಭದ ಕೆಲ್ಸ ಅಲ್ಲ. ಒಂದು ಸಿನಿಮಾ ಮಾಡುವಾಗ ಮತ್ತೊಂದು ಸಿನಿಮಾದ ಪಾತ್ರಕ್ಕೆ ರೆಡಿ ಆಗುವುದು ತುಂಬಾ ಕಷ್ಟದ ಕೆಲಸ. ಸಿನಿಮಾಕ್ಕಾಗಿ ದಪ್ಪ ಆಗೋದು, ಸಣ್ಣ ಆಗೋದು ಸಣ್ಣ ವಿಷಯ ಅಲ್ಲ. ನನಗೆ ಅದರ ಅರಿವಿದೆ. ವರ್ಷಗಟ್ಟಲೇ ಪಾತ್ರಕ್ಕಾಗಿ ಕಷ್ಟಪಟ್ಟರೆ, ಆ ಕಷ್ಟಕ್ಕೆ ಉತ್ತರ ಸಿಗುತ್ತೆ. ಜನರಿಂದಲೂ ಅದಕ್ಕೆ ಫಲ ಸಿಗುತ್ತೆ. ಪಾತ್ರಕ್ಕಾಗಿ ನಾವು ನಮ್ಮನ್ನು ಅರ್ಪಿಸಿಕೊಂಡಾಗ ಇದು ಸಾಧ್ಯವಾಗುತ್ತೆ. ಸುದೀಪ್‌ ಇದರಲ್ಲಿ ಗೆದ್ದಿದ್ದಾರೆ. ಅವರಿಗೆ ನನ್ನ ಹ್ಯಾಟ್ಸಾಫ್‌.

ಸಿನಿಮಾ ಚೆನ್ನಾಗಿಲ್ಲ ಅಂದ್ರೆ ಮುಖದ ಮೇಲೆ ಹೊಡೆದಂತೆ ಹೇಳುತ್ತಾರೆ ಕಿಚ್ಚನ ಪುತ್ರಿ!

30 ವರ್ಷದಿಂದ ಹೇಳುತ್ತಾ ಬಂದಿದ್ದೆ..

ನಾವ್ಯಾರಿಗೂ ಕಮ್ಮಿ ಇಲ್ಲ ಅಂಥ 30 ವರ್ಷದಿಂದ ಹೇಳಿಕೊಂಡು ಬಂದಿದ್ದೆ. ಅಂತಹ ಕಾಲ ಈಗ ಬಂದಿದೆ. ನಾವೆಂತಹ ಸಿನಿಮಾ ಮಾಡುತ್ತಿದ್ದೇವೆ ಅಂತ ಪರಭಾಷಿಗರು ಇವತ್ತು ಇತ್ತ ತಿರುಗಿ ನೋಡುವಂತಾಗಿದೆ. ಕನಸುಗಳಿಗೆ ಮಿತಿ ಇಲ್ಲ. ಯಾರು ಬೇಕಾದರೂ ಏನು ಬೇಕಿದ್ದರೂ ಆಸೆ ಪಡಬಹುದು. ಯಾಕಂದ್ರೆ, ಕನ್ನಡ ಚಿತ್ರರಂಗದ ಮಾರುಕಟ್ಟೆಹೆಚ್ಚುತ್ತಿದೆ. ಚಿತ್ರರಂಗ ಬೆಳೆಯಬೇಕು. ಈ ರೀತಿ ಸಿನಿಮಾಗಳು ನಮಗೆ ಇನ್ನಷ್ಟುಸಿನಿಮಾ ಮಾಡಲು ಧೈರ್ಯ ಕೊಡುತ್ತವೆ. ನಾವೂ ಖರ್ಚು ಮಾಡಬಹುದು, ಕಷ್ಟಪಟ್ಟರೆ ಫಲ ಸಿಗುತ್ತದೆ ಅಂಥ ಉತ್ಸಾಹ ಕೊಟ್ಟವರು ನಿಜವಾದ ಹೀರೋಗಳು. ನಾವೆಲ್ಲ ಇಲ್ಲಿಗೆ ಬಂದಾಗ ಐದಡಿ ಹೀರೋಗಳು. ಇವತ್ತು ಆರಡಿ ಹೀರೋಗಳು. ಅವರೆಲ್ಲ ಚಿತ್ರರಂಗವನ್ನು ಎತ್ತರೆತ್ತರಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಆ ಲಿಸ್ಟ್‌ಗೆ ನನ್ನ ದೊಡ್ಡ ಮಗ ಸುದೀಪ್‌ ಸೇರುತ್ತಾನೆ. ಇದಕ್ಕಾಗಿ ಅತ್ಯಂತ ಖುಷಿ ಪಡುವವರಲ್ಲಿ ನಾನು ಒಬ್ಬ.

click me!