Kichcha Sudeep: ಇಂಥ ಲಾ ಫಾಲೋ ಮಾಡೋಕೆ ಹೈ ಎಜ್ಯಕೇಶನ್ ಬೇಡ, ಪಿಹೆಚ್‌ಡಿ ಮಾಡ್ಬೇಕಾಗಿಲ್ಲ!

ತೊಂದ್ರೆ ಕೊಟ್ಟಿರೋ ನೀವು ಬದುಕಿಬಿಡ್ಬಹುದು, ಆದ್ರೆ ಏನೂ ತಪ್ಪು ಮಾಡದೇ ನಿಯತ್ತಾಗಿ ಬರ್ತಾ ಇರೋ ಅವ್ರು ಸಾಯಲೂಬಹುದು. ಇಂಥ ಲಾಗಳನ್ನ ಫಾಲೋ ಮಾಡೋಕೆ ಹೈಲಿ ಎಜ್ಯಕೇಶನ್ ಏನೂ ಬೇಕಾಗಿಲ್ಲ.. ಡಿಗ್ರಿ, ಪಿಹೆಚ್‌ಡಿ ಮಾಡ್ಬೇಕಾಗಿಲ್ಲ..


ಕನ್ನಡದ ಸ್ಟಾರ್, ಪ್ಯಾನ್ ಇಂಡಿಯಾ ಸ್ಟಾರ್ ನಟ ಕಿಚ್ಚ ಸುದೀಪ್ (Kichcha Sudeep) ಅವರ ಸಂದರ್ಶನವೊಂದು ವೈರಲ್ ಆಗುತ್ತಿದೆ. ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗುತ್ತಿರೋ ಸುದೀಪ್ ಅವರ ಈ ಮಾತುಗಳು ಸತ್ಯಕ್ಕೆ ಹತ್ತಿರ ಎನ್ನಲೇಬೇಕು.. ಕಿಚ್ಚ ಸುದೀಪ್ ಅಭಿಮಾನಿಗಳೂ ಸೇರಿದಂತೆ ಎಲ್ಲರಿಗೂ ಇದು ಖಂಡಿತವಾಗಿಯೂ ಪಕ್ಕಾ ಮೋಟಿವೇಶನಲ್ ಟಾಕ್. ಹಾಗಿದ್ದರೆ ನಟ ಸುದೀಪ್ ಅದೇನು ಹೇಳಿದ್ದಾರೆ ಅನ್ನೋದಕ್ಕೆ ಮುಂದೆ ನೋಡಿ..

'ಸರ್ಕಾರದಿಂದ ಒಂದು ರೋಡ್ ಮಾಡಿಸಿರ್ತಾರೆ.. ಅದ್ರಲ್ಲಿ ಟ್ರಾಕ್ಸ್ ಹಾಕಿರ್ತಾರೆ, ಯಾರು ಎಲ್ಲಿ ಹೋಗ್ಬೇಕು ಅನ್ನೋ ಸೂಚನೆ ಕೂಡ ಸ್ಪಷ್ಟವಾಗಿ ಇರುತ್ತೆ.. ಯಾಕೆ ಅದೆಲ್ಲಾ ಮಾಡಿರ್ತಾರೆ? ಯಾರೂ ಕೂಡ ನಮ್ಮಪ್ಪನ ಮನೆ ರಸ್ತೆ ಅಂತ ಓಡಾಡ್ಬಾರ್ದು.. ಆದ್ರೆ ಆ ಟ್ರಾಕ್‌ಅನ್ನ ಬದಲಾಯ್ಸಕೊಂಡು, ಆ ಕಡೆ ಈ ಕಡೆ ಅಂತ ಹೋಗ್ತಾ ಇದ್ರೆ ನಿಮ್ ನಮ್ ಪಕ್ಕ ಬರ್ತಾ ಇರೋವ್ನಿಗೆ ತೊಂದ್ರೆ ಆಗುತ್ತೆ.. ನೀವು ಎರ್ರಾಬಿರ್ರಿ ಹೋಗಿ ನಿಮ್ ಹಿಂದೆ ಅತವಾ ಪಕ್ಕ ಬರ್ತಾ ಇರೋರಿಗೆ ಸಮಸ್ಯೆ ಮಾಡ್ತೀರ..

Latest Videos

Kichcha Sudeep: ಮಾಡೋದೆಲ್ಲಾ ಸರಿನೇ ಮಾಡ್ಬೇಕು ಅನ್ನೋ ಪ್ರೆಶರ್ ನಮ್ ಮೇಲೆ ಹಾಕ್ಬೇಡಿ.. 

ತೊಂದ್ರೆ ಕೊಟ್ಟಿರೋ ನೀವು ಬದುಕಿಬಿಡ್ಬಹುದು, ಆದ್ರೆ ಏನೂ ತಪ್ಪು ಮಾಡದೇ ನಿಯತ್ತಾಗಿ ಬರ್ತಾ ಇರೋ ಅವ್ರು ಸಾಯಲೂಬಹುದು. ಇಂಥ ಲಾಗಳನ್ನ ಫಾಲೋ ಮಾಡೋಕೆ ಹೈಲಿ ಎಜ್ಯಕೇಶನ್ ಏನೂ ಬೇಕಾಗಿಲ್ಲ.. ಡಿಗ್ರಿ, ಪಿಹೆಚ್‌ಡಿ ಮಾಡ್ಬೇಕಾಗಿಲ್ಲ.. ಬೇಕಾಗಿರೋದು ಸಿಂಪಲ್ ಕಾಮನ್‌ ಸೆನ್ಸ್ ಎಂದಿದ್ದಾರೆ ನಟ ಸುದೀಪ್. ಇಂಥ ಹಲವಾರು ಮಾತುಗಳನ್ನು ನಟ ಕಿಚ್ಚ ಸುದೀಪ್ ಹಲವು ವೇದಿಕೆಗಳಲ್ಲಿ ಹೇಳುತ್ತಲೇ ಇರುತ್ತಾರೆ. 

ಇನ್ನೊಂದು ಕಡೆ ನಟ ಸುದೀಪ್ ಅವರು ಮತ್ತೊಂದಿಷ್ಟು ಮಾತುಗಳನ್ನು ಹೇಳಿದ್ದು ಕೂಡ ವೈರಲ್ ಆಗ್ತಿದೆ. ಅಲ್ಲಿ 'ನಿಮ್ ಲೈಫ್ ಒಮ್ಮೆ ನೋಡಿ... ಏನ್ ಕೊರತೆ ಆಗಿದೆ? 'ದೇವರು ಆರೋಗ್ಯವಾಗಿ ಇಟ್ಟಿದಾನೆ. ಹಣಕಾಸಿಗೆ ಯಾರ ಹತ್ರನೂ ಕೈ ಚಾಚ್ತಿಲ್ಲ.. ಸಾಲಪೋಲ ಮಾಡಿಲ್ಲ, ಮನೆಯಿಂದ ಯಾರೂ ಹೊರಗಡೆ ಹಾಕೋ ಚಾನ್ಸ್ ಇಲ್ಲ.. ಬ್ಯಾಂಕ್‌ ಲೋನ್‌ನವ್ರು ಬಂದು ತಲೆಮೇಲೆ ಕೂತಿಲ್ಲ. ಅಡುಗೆ ಮಾಡೋದಕ್ಕೆ ಪದಾರ್ಥಗಳಿವೆ, ಸ್ನೇಹಿತರು ಮನೆಗೆ ಬರ್ತಾ ಇದಾರೆ.. ಅಂದ್ಮೆಲೆ ಎಲ್ಲಿ ಸರ್ ಸೋತಿದ್ದೇನೆ ನಾನು..? ಸ್ವಲ್ಪ ಸ್ಲೋ ಆಗಿದೆ ಲೈಫು.. ಯಾಕೆ ಅಂದ್ರೆ, ಬೇರೆಯವ್ರ ಸ್ಪೀಡಿಂದ ನಿಮ್ಗೆ ಹಾಗೆ ಅನ್ನಿಸ್ತಾ ಇರುತ್ತೆ ಲೈಫು.. 

ರಶ್ಮಿಕಾ ಮಂದಣ್ಣ ಇನ್ಮೇಲೆ ಟ್ರೋಲ್ ಆಗಲ್ಲ.. ಇರೋ ವಿಷ್ಯ ಎಲ್ಲಾ ಮುಂಬೈನಲ್ಲಿ ಹೇಳಿದಾರಲ್ಲ..!

ಯಾವ್ದೋ ಹಾರುತ್ತಾ ಇರೋ ವಿಮಾನದ ಬಗ್ಗೆ ತಲೆ ಕೆಡಿಸ್ಕೋಬಾರ್ದು.. ಅದೂ ಕೂಡ ಯಾವುದೋ ಒಂದು ಏರ್‌ಪೋರ್ಟ್‌ನಲ್ಲಿ ಲ್ಯಾಂಡ್ ಆಗುತ್ತೆ..' ಎಂದಿದ್ದಾರೆ ಕಿಚ್ಚ ಸುದೀಪ್. ಅವರಾಡಿರುವ ಮಾತುಗಳ ಬಗ್ಗೆ ಹಲವರು ಮೆಚ್ಚಿ ಕಾಮೆಂಟ್ ಮಾಡಿದ್ದಾರೆ. ಸುದೀಪ್ ಆಡಿರೋ ಮಾತುಗಳಲ್ಲಿ ಹಲವರಿಗೆ ಲೈಫ್ ಲೆಸನ್ ಗೋಚರಿಸಿದೆ ಎನ್ನಬಹುದು. ಕೆಲವರು ಬಗ್ಗೆ ಕಾಮೆಂಟ್ ಮಾಡಿ, 'ನೀವು ಎಲ್ಲವನ್ನೂ ಅಚೀವ್ ಮಾಡಿ ಆಗಿದೆ. ಹೀಗಾಗಿ ನಿಮಗೆ ಯಾವುದೂ ಗ್ರೇಟ್ ಅನ್ನಿಸಲ್ಲ' ಅಂತಲೂ ಕಾಮೆಂಟ್ ಮಾಡಿದ್ದಾರೆ. 

ಸದ್ಯ ನಟ ಸುದೀಪ್ ಅವರು ಸಿನಿಮಾ ಶೂಟಿಂಗ್ ಹಾಗೂ ಕ್ರಿಕೆಟ್‌ನಲ್ಲಿ ಬ್ಯುಸಿ ಆಗಿದ್ದಾರೆ. ಮ್ಯಾಕ್ಸ್ ಸಿನಿಮಾದ ಸಕ್ಸಸ್ ಸದ್ಯ ಸುದೀಪ್ ನಟನೆಯ ಮುಂದಿನ ಚಿತ್ರಗಳ ಮೇಲೆ ಅಪಾರ ನಿರೀಕ್ಷೆ ಹುಟ್ಟುಹಾಕಿದೆ. ಸುದೀಪ್ ನಟನೆಯಲ್ಲಿ ಮುಂಬರುವ ಸಿನಿಮಾಗಳನ್ನು ನೋಡಲು ಅವರ ಅಭಿಮಾನಿಗಳು ಕಾಯುತ್ತಲೇ ಇದ್ದಾರೆ. ಆದರೆ, ಸದ್ಯಕ್ಕೆ ಸುದೀಪ್ ನಟನೆಯ ಯಾವುದೇ ಸಿನಿಮಾ ತೆರೆಗೆ ಬರಲು ಅನೌನ್ಸ್ ಆಗಿಲ್ಲ. ಆದ್ರೂ ಬರುತ್ತೆ ಬಿಡಿ ಈ ವರ್ಷ, ಸ್ವಲ್ಪ ಕಾಯಬೇಕಷ್ಟೇ.

ಸಲ್ಮಾನ್ ಖಾನ್‌ ಪರಿಸ್ಥಿತಿ ಡಾ ರಾಜ್‌ಕುಮಾರ್‌ಗೂ ಬಂದಿತ್ತು; ಆದ್ರೆ ಅಣ್ಣಾವ್ರು ಕೊಟ್ಟ ಪ್ರತಿಕ್ರಿಯೆ ಹೇಗಿತ್ತು? 

click me!