ಮದ್ವೆ ಆದ್ಮೇಲೆ ಜೀವನ ಬದಲಾಗಿದ್ಯಾ? ಮದ್ವೆ ಆದ್ಮೇಲೆ ಗಂಡನ ಮನೆ ಹೇಗಿದೆ? ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟ ಶತ್ರುಘ್ನ ಸಿನ್ಹಾ ಪುತ್ರಿ.
ಬಾಲಿವುಡ್ ಸ್ಟಾರ್ ನಟ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಮದುವೆ ದೊಡ್ಡ ಸುದ್ದಿಯಾಗಿತ್ತು. ಪೋಷಕರಿಗೆ ಮಗಳ ಮದುವೆನೇ ಇಷ್ಟವಿಲ್ಲ, ಮಗಳು ಅಂತರ್ಜಾತಿ ಆಗುತ್ತಿರುವುದಕ್ಕೆ ದೊಡ್ಡ ಜಗಳವಾಗುತ್ತಿದೆ, ಮನೆಯವರು ಸಹಾಯವಿಲ್ಲ ಎಂದು ಮನೆಯಲ್ಲಿ ಸರಳ ಮದುವೆ ಮಾಡಿಕೊಂಡಳು ಎಂದು ಸಿಕ್ಕಾಪಟ್ಟೆ ಗಾಸಿಪ್ ಹಬ್ಬಿತ್ತು. ಈಗ ಮದುವೆ ಆಗಿ ಸಮಯ ಕಳೆದಿದೆ. ಅತ್ತೆ ಮಾವ ಹೇಗ್ ನೋಡಿಕೊಳ್ಳುತ್ತಿದ್ದಾರೆ? ಫ್ಯಾಮಿಲಿ ಹೇಗಿದೆ ಎಂದು ಅಭಿಮಾನಿ ಪ್ರಶ್ನೆ ಮಾಡಿದ್ದಕ್ಕೆ ಉತ್ತರ ನೀಡಿದ್ದಾರೆ.
'ಮಗಳೆಂದು ನಮ್ಮ ಮನೆಯಲ್ಲಿ ಸಿಕ್ಕಾಪಟ್ಟೆ ಮುದ್ದು ಮಾಡುತ್ತಿದ್ದರು ಆದರೆ ನನ್ನ ಅತ್ತೆ ಮಾವ ಮಗಳಿಗಿಂತ ಹೆಚ್ಚಾಗಿ ನನ್ನನ್ನು ನೋಡಿಕೊಳ್ಳುತ್ತಾರೆ. ಅವರಂಥ ಅತ್ತೆ ಮಾವ ಪಡೆಯುವುದಕ್ಕೆ ನಾನು ನಿಜಕ್ಕೂ ಪುಣ್ಯ ಮಾಡಿದ್ದೀನಿ. ಮತ್ತೊಬ್ಬರ ಮನೆ ಮಗಳು ನಮ್ಮ ಮನೆಗೆ ಬಂದಿದ್ದಾಳೆ ಎಂದು ಈ ರೀತಿ ಜವಾಬ್ದಾರಿಯನ್ನು ಕೂಡ ಅವರೇ ತೆಗೆದುಕೊಂಡಿದ್ದಾರೆ. ಪ್ರತಿ ಸಲವೂ ಸ್ವಲ್ಪ ಜಾಸ್ತಿ ಶ್ರಮ ಹಾಕಿ ನನಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಾರೆ. ಹೀಗಾಗಿ ನಾನು ಈ ಮನೆಯಲ್ಲಿ ಹುಟ್ಟಿರುವ ಹುಡುಗಿ ಇದು ನನ್ನ ಮನೆ ಅನಿಸಲು ಶುರುವಾಗಿದೆ' ಎಂದು ಸೋನಾಕ್ಷಿ ಉತ್ತರಿಸಿದ್ದಾರೆ.
ಚಿಕಿತ್ಸೆಗೆ 16 ಕೋಟಿ ರೂ. ಅಂತ ಕೇಳಿ ಶಾಕ್ ಆಯ್ತು, ದಯವಿಟ್ಟು ಸಹಾಯ ಮಾಡಿ; ಪುಟಾಣಿ ಪರ ನಿಂತ ಸುದೀಪ್
ಹಲವು ವರ್ಷಗಳ ಹಿಂದೆ ಸಲ್ಮಾನ್ ಖಾನ್ ಮನೆಯಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ಸೋನಾಕ್ಷಿ ಭಾಗಿಯಾಗಿದ್ದು. ಈ ಪಾರ್ಟಿಯಲ್ಲಿ ಸಲ್ಮಾನ್ ಖಾನ್ ಜೊತೆ ನೋಟ್‌ಬಕ್ ಸಿನಿಮಾದಲ್ಲಿ ನಟಿಸಿರುವ ಝಹೀರ್ ಕೂಡ ಭಾಗಿಯಾಗಿದ್ದರು. ಅಲ್ಲಿಂದ ಇಬ್ಬರು ಸ್ನೇಹಿತರಾದರು ಅದಾದ ಮೇಲೆ ಒಟ್ಟಿಗೆ ಡಬಲ್ ಎಕ್ಸ್‌ಎಲ್ ಸಿನಿಮಾದಲ್ಲಿ ನಟಿಸಿದ್ದಾರೆ ಹಾಗೂ ವಿಡಿಯೋ ಮ್ಯೂಸಿಕ್ ಕ್ರಿಯೇಟ್ ಮಾಡಿದ್ದರು. ಇಬ್ಬರು ಕಲಾವಿದರು ಒಟ್ಟಿಗೆ ಇದ್ದಾರೆ ಎಂದು ಜನರು ಗೆಸ್ ಮಾಡಿದರು ಇವರು ಮಾತ್ರ ವರ್ಷಗಳ ಕಾಲ ಸೀಕ್ರೆಟ್ ರಿಲೇಷನ್‌ಶಿಪ್‌ನಲ್ಲಿದ್ದರು. ಮದುವೆ ಅನೌನ್ಸ್ ಮಾಡುವ ದಿನವರೆಗೂ ಯಾರಿಗೂ ಇಬರಿಬ್ಬರ ಕುಚುಕುಚು ಗೊತ್ತಿರಲಿಲ್ಲ. ಅಭಿಮಾನಿ ಈ ಪ್ರಶ್ನೆ ಕೇಳಿದಾಗ ಸೋನಾಕ್ಷಿ ಖುಷಿಯಿಂದ ಉತ್ತರಿಸಿದರು ಆಗ ಪಕ್ಕದಲ್ಲಿದ್ದ ಪತಿ 'ಸದ್ಯ ನಮ್ಮ ಮನೆಯಲ್ಲಿ ಅಷ್ಟು ಖುಷಿಯಾಗಿ ಇದ್ದಾಳೆ ಇಲ್ಲದಿದ್ದರೆ ಕಷ್ಟ ಆಗುತ್ತಿತ್ತು' ಎಂದಿದ್ದಾರೆ. ಆಗ ಪತಿ ಕಡೆ ಮುಖ ಮಾಡಿ 'ಅಪ್ಪ ನೀನು ಸುಮ್ಮನೆ ಇರು ಎಲ್ಲಾ ಕಡೆ ನಿನ್ನ ಲಾಜಿಕ್ ಮುಂದಿಡಲು ಹೋಗಬೇಡ' ಎಂದು ಸೋನಾಕ್ಷಿ ತಿದ್ದಿದ್ದಾರೆ.
ಬಿಗ್ ಬಾಸ್ ನನ್ನ ಯಶಸ್ಸಿಗೆ ಬ್ರೇಕ್ ಹಾಕಿಬಿಟ್ಟರು: ರಂಜಿತ್ ಕುಮಾರ್ ಗರಂ