ನವರಸ ನಾಯಕ ಜಗ್ಗೇಶ್ ಅಭಿನಯದ ‘ತೋತಾಪುರಿ’ ಬಿಡುಗಡೆಗೂ ಮುನ್ನವೇ ಹೊಸ ದಾಖಲೆ ಮಾಡಿದೆ. ಮುಕ್ತಾಯದ ಹಂತಕ್ಕೆ ಬಂದಿರುವ ಈ ಚಿತ್ರ ಎರಡು ಪಾರ್ಟ್‌ಗಳಲ್ಲಿ ತೆರೆಗೆ ಬರಲಿರುವುದು ಎಲ್ಲರಿಗೂ ಗೊತ್ತಿದೆ.
ಸಾಮಾನ್ಯವಾಗಿ ಇಂಥ ಸಿನಿಮಾಗಳು ಎರಡು ಭಾಗಗಳಲ್ಲಿ ಬರುವುದು ಅಪರೂಪ. ಅಂಥ ಅಪರೂಪಕ್ಕೆ ಸಾಕ್ಷಿಯಾಗಿರುವ ‘ತೋತಾಪುರಿ’, ಎರಡೂ ಭಾಗಗಳನ್ನು ಏಕಕಾಲಕ್ಕೆ ಚಿತ್ರೀಕರಣ ಮಾಡುತ್ತಿದೆ. ಇದೇ ದಾಖಲೆ. ನಿರ್ದೇಶಕ ವಿಜಯ್ ಪ್ರಸಾದ್ ಹಾಗೂ ನಿರ್ಮಾಪಕ ಸುರೇಶ್ ಹೇಳುವಂತೆ ಭಾರತೀಯ ಚಿತ್ರರಂಗದಲ್ಲೇ ಇದು ಮೊದಲು.
ದೊಡ್ಡ ಮಟ್ಟದಲ್ಲಿ ಬರಲಿದೆ 'ತೋತಾಪುರಿ'!
undefined
ಸಾಮಾನ್ಯವಾಗಿ ಮೊದಲ ಭಾಗ ಹಿಟ್ ಆದ ನಂತರ ಮತ್ತೊಂದು ಭಾಗ ಸೆಟ್ಟೇರುತ್ತದೆ. ಅಲ್ಲದೆ ಎರಡು ಭಾಗಗಳನ್ನೂ ಪ್ರತ್ಯೇಕವಾಗಿಯೇ ಚಿತ್ರೀಕರಣ ಮಾಡುತ್ತಾರೆ. ಆದರೆ ತೋತಾಪುರಿ ಚಿತ್ರದ ಎರಡೂ ಭಾಗಗಳ ಕತೆಯನ್ನು ಬಿಡುಗಡೆಗೂ ಮೊದಲೇ ಚಿತ್ರೀಕರಿಸುತ್ತಿದ್ದೇವೆ. ಒಂದು ಭಾಗ ತೆರೆ ಮೇಲೆ ಮೂಡುವ ಮುನ್ನವೇ ಇನ್ನೊಂದು ಭಾಗದ ಚಿತ್ರೀಕರಣವನ್ನೂ ಮುಗಿಸುತ್ತಿರುವುದು ಕನ್ನಡದಿಂದಲೇ ಮೊದಲು. ಯಾಕೆಂದರೆ ತೆಲುಗು, ತಮಿಳು, ಹಿಂದಿ, ಮಲಯಾಳಂ, ಬೆಂಗಾಲಿ ಸೇರಿದಂತೆ ಭಾರತದ ಯಾವ ಭಾಷೆಯಲ್ಲೂ ಈ ಪ್ರಯೋಗ ಆಗಿಲ್ಲ.
ಜಗ್ಗೇಶ್ ‘ತೋತಾಪುರಿ’ ಫಸ್ಟ್ ಲುಕ್!
ಆ ಬಗ್ಗೆ ಎಲ್ಲ ರೀತಿಯ ಮಾಹಿತಿಯನ್ನು ಸಂಗ್ರಹಿಸಿದ ನಂತರವೇ ನಮ್ಮ ಚಿತ್ರವೇ ಹೊಸ ದಾಖಲೆ ಮಾಡುತ್ತಿದೆ ಎಂಬುದನ್ನು ಅಧಿಕೃತವಾಗಿ ಹೇಳಿಕೊಳ್ಳುತ್ತಿದ್ದೇವೆ’ ಎಂದು ನಿರ್ಮಾಪಕ ಸುರೇಶ್ ಹೇಳುತ್ತಾರೆ. ಬೆಂಗಳೂರು, ಮೈಸೂರು, ಊಟಿ, ಕೂರ್ಗ್, ಕೇರಳ ಹೀಗೆ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಶೇ.80 ಭಾಗ ಚಿತ್ರೀಕರಣ ಮುಗಿದಿದೆ. ಜಗ್ಗೇಶ್, ಧನಂಜಯ್, ಅದಿತಿ ಪ್ರಭುದೇವ, ಹೇಮಾ ದತ್, ದತ್ತಣ್ಣ, ಸುಮನ್ ರಂಗನಾಥ್ ಸೇರಿದಂತೆ ಹಲವು ಕಲಾವಿದರ ಪಾತ್ರಗಳೂ ಎರಡೂ ಪಾಟ್ಗರ್ಳಲ್ಲಿ ಬರಲಿವೆ. ಹೀಗಾಗಿ ನವರಸ ನಾಯಕನ ಕಾಮಿಡಿ ಕಿಕ್ ಎರಡೂ ಪಾರ್ಟ್‌ಗಳಲ್ಲಿ ಕೊಂಚ ಜೋರಾಗಿಯೇ ಇರಲಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರಕ್ಕಿದೆ.