
ಕೋಟ್ಯಧಿಪತಿಯಲ್ಲಿ ಕೋಟಿ ಗಳಿಸಿದವರಿದ್ದಾರೆ. ಅದಕ್ಕೀಗ ಮತ್ತೊಂದು ಸೇರ್ಪಡೆಯಾಗಿದೆ. ಆದರೆ, 7 ಕೋಟಿ ರೂ. ಗಳಿಸುವದ ತಪ್ಪಿಸಿಕೊಂಡಿದ್ದು ಮಾತ್ರ ದುಃಖದ ವಿಷಯ..
ಬಿಹಾರದ ಅನ್ನದಾತನ ಮಗ ಸನೋಜ್ ರಾಜ್ ಕೋಟ್ಯಧಿಪತಿಯ 11ನೇ ಆವೃತ್ತಿಯಲ್ಲಿ ಕೋಟಿ ಗೆದ್ದ ಧೀರ. ಗ್ರಾಮದ ಸನೋಜ್ ಸಾಧನೆಗೆ ಎಲ್ಲರೂ ಫುಲ್ ಖುಷಿಯಾಗಿದ್ದು, ಎಲ್ಲೆಡೆ ಸಂಭ್ರಮವೋ ಸಂಭ್ರಮ. ಗೆದ್ದ ಸನೋಜ್, ‘ನನ್ನ ತಂದೆ ರೈತ. ಅವರಿಗೆ ನಾನು ಹಣ ಕೊಡುವುದು ಮುಖ್ಯವಲ್ಲ. ಮನೆಯಲ್ಲಿ ಹಣದ ಸಮಸ್ಯೆಯಿದ್ದ ಕಾರಣ ಅವರಿಗೆ ಶಿಕ್ಷಣ ಮುಂದುವರಿಸಲು ಸಾಧ್ಯವಾಗಲಿಲ್ಲ. ಈ ಕಷ್ಟ ಮತ್ತೊಬ್ಬರಿಗೆ ಬರಬಾರದು. ನನ್ನ ಓದಿನೆಡೆಗೆ ಗಮನ ಕೊಡುವ ಜತೆಗೆ, ಕಷ್ಟದಲ್ಲಿರುವ ಮಂದಿಗೆ ಓದಲು ನೆರವಾಗುತ್ತೇನೆ,' ಎನ್ನುತ್ತಾರೆ ಐಎಎಸ್ ಆಕಾಂಕ್ಷಿ ಸನೋಜ್.
ಸನೋಜ್‌ಗೆ ಕೋಟಿ ತಂದು ಕೊಟ್ಟ ಪ್ರಶ್ನೆ...
ಭಾರತದ ಯಾವ ಮುಖ್ಯ ನ್ಯಾಯಾಧೀಶರ ತಂದೆ ಭಾರತದ ರಾಜ್ಯವೊಂದರಲ್ಲಿ ಮುಖ್ಯಮಂತ್ರಿಗಳಾಗಿದ್ದರು? ಎಂಬ ಪ್ರಶ್ನೆ
1. ಜಸ್ಟಿಸ್ ರಂಜನ್ ಗೋಗಾಯ್
2. ಜಸ್ಟಿಸ್ ದೀಪಕ್ ವಿಶ್ರಾ
3. ಜಸ್ಟಿಸ್ ಟಿಎಸ್ ಠಾಕೂರ್
4 ಜಸ್ಟಿಸ್ ರಂಗನಾಥ್ ಮಿಶ್ರಾ ಎಂಬ ನಾಲ್ಕು ಆಯ್ಕೆಗಳೊಂದಿಗೆ ಕೇಳಲಾಗಿತ್ತು. ಆಪ್ಷನ್ 1ನ್ನು ವಿಶ್ವಾಸದಿಂದ ಲಾಕ್ ಮಾಡಿದ ಸಜೋಯ್ 1 ಕೋಟಿ ರೂ. ಚೆಕ್ ಪಡೆಯುವಲ್ಲಿ ಯಶಸ್ವಿಯಾದರು.
ಸನೋಜ್ ಜೊತೆ ಆಟ ನೋಡಲು ತಂದೆ, ಮಾವ ಹಾಗೂ ತಾಯಿ ಆಗಮಿಸಿದ್ದರು. ಕೋಟಿ ಗೆದ್ದಿರುವ ವಿಚಾರವನ್ನು ಘೋಷಿಸಿದಾಗ ಸನೋಜ್ ತಾಯಿಯನ್ನು ವೇದಿಕೆ ಮೇಲೆ ಬರ ಮಾಡಿಕೊಂಡು, ಚಪ್ಪಾಳೆ ತಟ್ಟಿ, ಗೌರವಿಸಿದರು.
ಉತ್ತರ ಕೊಡಲಾಗದ 7 ಕೋಟಿ ಪ್ರಶ್ನೆ ಯಾವುದು?
ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ನೂರನೇ ಶಕತ ಪೂರೈಸಲು ಒಂದು ರನ್ ನೀಡಿದ ಭಾರತೀಯ ಬೌಲರ್ ಯಾರು?
1. ಬಕಾ ಜೆಲಾನಿ
2. ಕಮಂದೂರ್ ರಂಗಚಾರಿ
3 ಗೋಗುಮಲ್ ಕಿಷನ್‌ಚಂದ್
4 ಕನ್ವರ್ ರಾಯ್ ಸಿಂಗ್
ಇದಕ್ಕೆ ಸರಿಯಾದ ಉತ್ತರ ಗೋಗುಮಲ್ ಕಿಷನ್‌ಚಂದ್. ಆದರೆ ಉತ್ತರ ಸರಿಯಾಗಿ ತಿಳಿದಿರದ ಕಾರಣ ಸುನೋಜ್ ಆಟವನ್ನು ಮುಕ್ತಾಯಗೊಳಿಸಿದರು. ಹಳ್ಳಿಯ ಬಡ ರೈತನ ಮಗ ಕೋಟಿ ಗೆದ್ದಿದ್ದೇನೂ ಕಡಿಮೆ ಅಲ್ಲ ಬಿಡಿ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.