ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರ ಮಾಜಿ ಪತಿ ಶೋಯೆಬ್ ಮಲೀಕ್ ಹೊಸ ಮದುವೆಯ ಖುಷಿಯಲ್ಲಿದ್ದಾರೆ. ನಟಿ ಸನಾ ಜಾವೇದ್‌ರನ್ನು ವಿವಾಹವಾಗಿರುವ ಶೋಯೆಬ್ ಮಲೀಕ್ ಈಗ ಹನಿಮೂನ್ ಮೂಡ್‌ನಲ್ಲಿದ್ದಾರೆ.
ಮುಂಬೈ (ಫೆ.9): ಟೆನಿಸ್ ತಾರೆ ಸಾನಿಯಾ ಮಿರ್ಜಾ ಹಾಗೂ ಪಾಕಿಸ್ತಾನದ ಕ್ರಿಕೆಟಿ ಶೋಯೆಬ್ ಮಲೀಕ್ ಅವರ ವಿಚ್ಛೇದನ ವಿಚಾರ ಇಡೀ ವಿಶ್ವಕ್ಕೆ ಅಚ್ಚರಿ ನೀಡಿತ್ತು. ತಿಂಗಳುಗಳ ಕಾಲ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ಅವರ ವಿಚ್ಛೇದನದ ಬಗ್ಗೆ ಊಹಾಪೋಹಗಳಿದ್ದರೂ, 2024ರ ಜನವರಿ 20 ರಂದು ಪಾಕಿಸ್ತಾನದ ನಟಿ ಸನಾ ಜಾವೇದ್ ಅವರೊಂದಿಗಿನ ವಿವಾಹಸ ಚಿತ್ರಗಳನ್ನು ಪೋಸ್ಟ್ ಮಾಡುವ ಮೂಲಕ ಶೋಯೆಬ್ ಮಲೀಕ್, ಸಾನಿಯಾ ಮಿರ್ಜಾ ಅವರೊಂದಿಗೆ ವಿಚ್ಛೇದನಕ್ಕೆ ಒಳಪಟ್ಟಿರುವುದು ಖಚಿತಪಟ್ಟಿತ್ತು. ಮದುವೆಯ ಚಿತ್ರಗಳು ಬಿಡುಗಡೆಯಾಗಿ ವೈರಲ್ ಆದ ಬಳಿಕ, ಸಾನಿಯಾ ಮಿರ್ಜಾ ತಾವು ಶೋಯೆಬ್ ಮಲೀಕ್ ಅವರಿಂದ ಖುಲಾ ಪಡೆದುಕೊಂಡಿರುವುದಾಗಿ ಅಧಿಕೃತವಾಗಿ ತಿಳಿಸಿದ್ದರು. ಇದರ ಬೆನ್ನಲ್ಲಿಯೇ ಸೋಶಿಯಲ್ ಮೀಡಿಯಾದಲ್ಲಿ ಶೋಯೆಬ್ ಮಲೀಕ್ ಹಾಗೂ ಸನಾ ಜಾವೇದ್ ಅವರು ಯಾವುದೇ ಚಿತ್ರ ಪೋಸ್ಟ್ ಮಾಡಿದರೂ, ಅದರಲ್ಲಿ, ನೀವಿಬ್ಬರೂ ಸೇರಿ ಸಾನಿಯಾ ಮಿರ್ಜಾ ಅವರ ಜೀವನ ಹಾಳು ಮಾಡಿದ್ದೀರಿ ಎನ್ನುವ ಕಾಮೆಂಟ್‌ಗಳೇ ಹೆಚ್ಚಾಗಿ ಬರುತ್ತಿದ್ದವು. ಆದರೆ, ಈ ಎಲ್ಲಾ ಕಾಮೆಂಟ್‌ಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಸನಾ ಜಾವೇದ್, ಇತ್ತೀಚೆಗೆ ಪತಿ ಶೋಯೆಬ್ ಮಲೀಕ್ ಅವರೊಂದಿಗಿ ಹನಿಮೂನ್ ಚಿತ್ರಗಳನ್ನು ಬಹಿರಂಗಪಡಿಸಿದ್ದಾರೆ.
ಶೋಯೆಬ್ ಮಲೀಕ್ ಹಾಗೂ ಸನಾ ಜಾವೇದ್ ತಮ್ಮ ಮದುವೆಯನ್ನು ಬಹಳ ಗುಪ್ತವಾಗಿ ಇರಿಸಿದ್ದರು. ಪ್ರಸ್ತುತ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಜೋಡಿಯ ಕುರಿತಾಗಿ ಜನರು ಸಿಟ್ಟಾಗಿದ್ದಾರೆ ಎನ್ನುವ ಮಾಹಿತಿಯೂ ಅವರಿಗಿದೆ. ಇದೇ ಕಾರಣಕ್ಕೆ ಮತ್ತೆ ಟ್ರೋಲ್ ಆಗಬಾರದು ಎನ್ನುವ ಕಾರಣಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರು ತಮ್ಮ ಮದುವೆಯ ಬಗ್ಗೆಯಾಗಲಿ, ಪರಸ್ಪರ ಜೊತೆಯಾಗಿರುವ ಚಿತ್ರಗಳನ್ನಾಗಲಿ ಪೋಸ್ಟ್ ಮಾಡುತ್ತಿರಲಿಲ್ಲ.
ಆದರೆ, ಈಗ ಸನಾ ಜಾವೇದ್ ಹಲವು ಸಮಯದ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಸನಾ ಜಾವೇದ್ ಹಾಗೂ ಶೋಯೆಬ್ ಮಲೀಕ್ ಅವರ ಹನಿಮೂನ್‌ನ ಚಿತ್ರವಾಗಿದೆ. ಸ್ವಿಮ್ಮಿಂಗ್ ಪೂಲ್‌ನ ಎದುರುಗಡೆ ಇಬ್ಬರೂ ವಿಶ್ರಾಂತಿ ಪಡೆದಿರುವ ಚಿತ್ರ ಇದಾಗಿದ್ದು, ತಮ್ಮ ಕಾಲುಗಳನ್ನು ಹಳದಿ ಬಣ್ಣದ ಟವಲ್‌ಗಳಿಂದ ಮುಚ್ಚಿಕೊಂಡಿದ್ದಾರೆ. ಈ ಚಿತ್ರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬೆನ್ನಲ್ಲಿಯೇ ಸಾಕಷ್ಟು ವೈರಲ್ ಆಗಿದೆ. ನೆಟ್ಟಿಗರು ಹೊಸ ಜೋಡಿಯನ್ನು ಟೀಕೆ ಮಾಡಲು ಆರಂಭಿಸಿದ್ದು, ನಿಮ್ಮಿಬ್ಬರ ಕಾರಣದಿಂದಾಗಿಯೇ ಇಂದು ಸಾನಿಯಾ ಮಿರ್ಜಾ ಅವರ ಜೀವನ ಹಾಳಾಗಿದೆ ಎಂದು ಟೀಕಿಸಿದ್ದಾರೆ.
ಇನ್ನು ಸಾನಿಯಾ ಮಿರ್ಜಾ ಅವರನ್ನು ಮದುವೆಯಾಗುವ ಮುನ್ನವೇ ಶೋಯೆಬ್ ಮಲೀಕ್ ಅಯೇಷಾ ಸಿದ್ಧಿಕಿ ಎನ್ನುವ ಮಹಿಳೆಯನ್ನು ಮದುವೆಯಾಗಿದ್ದರು ಎನ್ನುವ ವರದಿಗಳಿದ್ದವು. ಆಕೆ ಹೈದರಾಬಾದ್ ಮೂಲದ ಯುವತಿಯಾಗಿದ್ದಳು. 2010ರಲ್ಲಿ ಸಾನಿಯಾ ಮಿರ್ಜಾ ಹಾಗೂ ಶೋಯೆಬ್ ಮಲೀಕ್ ಮದುವೆಯಾಗುವ ಕೆಲ ದಿನಗಳ ಮುನ್ನವೇ ಆಯೇಷಾ ಸಿದ್ದಿಕಿ ತಾವು 2002ರಲ್ಲಿಯೇ ಶೋಯೆಬ್ ಮಲೀಕ್ ಅವರನ್ನು ವಿವಾಹವಾಗಿದ್ದಾಗಿ ತಿಳಿಸಿದ್ದರು. ಅದಲ್ಲದೆ, ಪಾಕಿಸ್ತಾನದ ಮಾಜಿ ಕ್ರಿಕೆಟಿಗ ತನಗೆ ಮೋಸ ಮಾಡಿದ್ದಾನೆ ಎನ್ನುವ ದೂರನ್ನು ಕೂಡ ದಾಖಲಿಸಿದ್ದರು.
"ಅಲ್ಲಾ ಕೆಟ್ಟ ದೃಷ್ಠಿಯಿಂದ...": ತಲಾಕ್ ಪಡೆದ ಸಾನಿಯಾ ಮಿರ್ಜಾಗೆ ಅಮ್ಮನ ಕಿವಿಮಾತು ವೈರಲ್
ಶೋಯೆಬ್ ಮಲೀಕ್ ಅವರೊಂದಿಗೆ ತನ್ನ ವಿವಾಹವಾಗಿದೆ ಎನ್ನುವುದಕ್ಕೆ ಸಾಕ್ಷ್ಯ ಎನ್ನುವಂತೆ ವಿಡಿಯೋ ದಾಖಲೆಯನ್ನೂ ಆಕೆ ನೀಡಿದ್ದರು. ಆದರೆ, ಈ ಎಲ್ಲಾ ಆರೋಪಗಳನ್ನು ಶೋಯೆಬ್ ಮಲೀಕ್ ನಿರಾಕರಿಸಿದ್ದರು. ಸಾನಿಯಾ ಹಾಗೂ ಶೋಯೆಬ್ ಮಲೀಕ್‌ಗೆ 5 ವರ್ಷದ ಪುತ್ರನಿದ್ದು ಆತನಿಗೆ ಇಝಾನ್ ಎನ್ನುವ ಹೆಸರಿಟ್ಟಿದ್ದಾರೆ. ಸಾನಿಯಾ-ಶೋಯೆಬ್ ವಿಚ್ಛೇದನದ ನಡುವೆಯೇ ಇಜಾನ್ ತನ್ನ ತಾಯಿಯ ಜೊತಯೇ ವಾಸವಿದ್ದಾನೆ. ಶೋಯೆಬ್ ಮಲೀಕ್ ಇಷ್ಟವಿದ್ದರೂ, ಸಾನಿಯಾ ಜೊತೆ ಇರೋದು ಇಜಾನ್‌ಗೆ ಇಷ್ಟ. ಇಲ್ಲಿಯವರೆಗೂ ಸಾನಿಯಾ ಮಿರ್ಜಾ ಮಾತ್ರ ಈ ವಿಚ್ಛೇದನದ ಬಗ್ಗೆ ಏನನ್ನೂ ಹೇಳಿಲ್ಲ.
ವಿವಾದದ ನಡುವೆ ಶೋಯೆಬ್ ಮಲೀಕ್ ವಿವಾಹವಾಗಿದ್ದ ಸಾನಿಯಾ, 14 ವರ್ಷದ ದಾಂಪತ್ಯದಲ್ಲಿ ಆಗಿದ್ದೇನು?