
ಇದೇ ವರ್ಷ ಫೆಬ್ರವರಿಯಲ್ಲಿ ಬಿಡಗುಡೆಯಾದ 'ಜಾನು' ಸಿನಿಮಾದ ನಂತ್ರ ಸಮಂತಾ ಕ್ಯಾಮೆರಾ, ಲೈಟ್‌ಗಳಿಂದ ಸ್ವಲ್ಪ ದೂರವಿದ್ದಾರೆ. ಸೋಷಿಯಲ್ ಮೀಡಿಯಾದಲ್ಲೂ ಸಮಯ ಕಳೆಯೋದನ್ನು ಕಡಿಮೆ ಮಾಡಿದ್ದಾರೆ.
ಇತ್ತೀಚೆಗೆ ಇನ್‌ಸ್ಟಾವನ್ನೇ ಹೆಚ್ಚು ಹಚ್ಚಿಕೊಂಡಿರುವ ಸಮಂತಾ ನೆಚ್ಚಿನ ಗಾರ್ಡ್‌ನ್ ಫೋಟೋಗಳನ್ನು ಶೇರ್ ಮಾಡ್ಕೊಳ್ತಿದ್ದಾರೆ. ತಮ್ಮ ಗಾರ್ಡನಿಂಗ್ ಸ್ಕಿಲ್ಸ್ ಏನೇನು ಅಂತ ಫ್ಯಾನ್ಸ್‌ಗೆ ತೋರಿಸ್ತಿದ್ದಾರೆ.
ನಟಿ ರಮ್ಯಕೃಷ್ಣ ಕಾರಲ್ಲಿ 100 ಮದ್ಯದ ಬಾಟಲ್ ಪತ್ತೆ; ಅಕ್ರಮ ಸಾಗಾಟದ ಶಂಕೆ ?
ಲಾಕ್‌ಡೌನ್ ಸಂದರ್ಭ ಸಮಂತಾ ಟೆರೇಸ್ ಗಾರ್ಡನಿಂಗ್ ಮತ್ತು ಫಾರ್ಮಿಂಗ್ ಹವ್ಯಾಸ ಶುರು ಮಾಡಿದ್ದಾರೆ. ಲೆಟ್ಟೂಸ್ ಕೈಯಲ್ಲಿ ಹಿಡಿದಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ.
ನನ್ನ ಕೆಲಸದ ಭಾಗವಲ್ಲದ ನನ್ನಿಷ್ಡದ ವಿಷವೊಂದನ್ನು ಕಂಡುಕೊಂಡಿದ್ದೇನೆ. ಜನರಿಗೆ ನನ್ನ ಹವ್ಯಾಸ ಏನು ಎಂದು ಹೇಳಿ ಸಾಕಾಯಿತು. ಪ್ರತಿ ಬಾರಿ ನಿಮ್ಮ ಹವ್ಯಾಸವೇನು ಎಂದು ಕೇಳುತ್ತಾರೆ. ಆಗ ನಾನು ನಟನೆ ಎಂದು ಉತ್ತರಿಸುತ್ತೇನೆ, ಆಗ ನಟನೆ ನಿಮ್ಮ ಕೆಲಸ, ಹವ್ಯಾಸವನೇನು ಎಂದು ಮರು ಪ್ರಶ್ನಿಸುತ್ತಾರೆ ಎಂದು ಬರೆದುಕೊಂಡಿದ್ದಾರೆ. ಸಮಂತಾ ನಯನ್‌ತಾರಾ ಅವರ ಬಾಯ್‌ಫ್ರೆಂಡ್ ವಿಘ್ನೇಶ್ ಶಿವನ್ ನಿರ್ದೇಶನದ ಸಿನಿಮಾ ಸೈನ್ ಮಾಡಿದ್ದರೂ, ಕೆಲಸ ಆರಂಭಿಸಬೇಕಷ್ಟೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.