'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

Published : Jun 14, 2020, 02:40 PM ISTUpdated : Jun 14, 2020, 05:33 PM IST
'ಧೋನಿ' ಪಾತ್ರಕ್ಕೆ ಜೀವ ತುಂಬಿದ್ದ ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣು!

ಸಾರಾಂಶ

ಬಾಲಿವುಡ್​ ನಟ ಸುಶಾಂತ್​ ಸಿಂಗ್ ರಜಪೂತ್​​ ಆತ್ಮಹತ್ಯೆ| ಮುಂಬೈ ನಿವಾಸದಲ್ಲಿ ನೇಣಿಗೆ ಶರಣಾದ ಸುಶಾಂತ್ ಸಿಂಗ್| ‘ಧೋನಿ ಅನ್​ ಟೋಲ್ಡ್​​’ ಚಿತ್ರದ ಮೂಲಕ ಖ್ಯಾತರಾಗಿದ್ದ ಸಿಂಗ್​| 11 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್ ಸಿಂಗ್

ಮುಂಬೈ(ಜೂ.14): ಬಾಲಿವುಡ್ ಖ್ಯಾತ ನಟ ಸುಶಾಂತ್ ಸಿಂಗ್ ರಜಪೂತ್(34) ಆತ್ಮಹತ್ಯೆಗೆ ಶರಣಾಗಿದ್ದಾರೆ. ಮುಂಬೈನ ಬಾಂದ್ರಾದ ತಮ್ಮ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ಇಂದು ಬೆಳಗ್ಗೆ ನೇಣಿಗೆ ಶರಣಾದ ಸ್ಥಿತಿಯಲ್ಲಿ ಸುಶಾಂತ್ ಪತ್ತೆಯಾಗಿದ್ದಾರೆ. ನಾಲ್ಕು ದಿನಗಳ ಹಿಂದಷ್ಟೇ ಅವರ ಮಾಜಿ ಮ್ಯಾನೇಜರ್ ಸಾಲಿಯಾನ್ ಸೂಸೈಡ್ ಮಾಡಿಕೊಂಡಿದ್ದರು ಎಂಬುವುದು ಉಲ್ಲೇಖನೀಯ.

"

ಕಾಯ್ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದ ಸುಶಾಂತ್ ಸಿಂಗ್ ‘ಧೋನಿ ಅನ್​ ಟೋಲ್ಡ್​​’ ಚಿತ್ರದ ಮೂಲಕ ಭಾರೀ ಪ್ರಖ್ಯಾತಿ ಗಳಿಸಿದ್ದರು. ಕೇದಾರ್‌ನಾಥ್, ರಾಬ್ತಾ ಸೇರಿದಂತೆ ಸುಮಾರು 11 ಬಾಲಿವುಡ್ ಸಿನಿಮಾಗಳಲ್ಲಿ ನಟಿಸಿದ್ದ ಸುಶಾಂತ್ ಸಿಂಗ್, ಚಿಚೋರೆ ಎಂಬ ಸಿನಿಮಾದಲ್ಲಿ ಕೊನೆಯದಾಗಿ ಕಾಣಿಸಿಕೊಂಡಿದ್ದರು.

"

ಐಶ್ವರ್ಯಾ ರೈ ಸೇರಿ ಬಾಲಿವುಡ್ ಸ್ಟಾರ್‌ಗಳ ಜೊತೆ ಕೆಲಸ ಮಾಡಿದ್ದ ಸೆಲೆಬ್ರಿಟಿ ಮ್ಯಾನೇಜರ್ ಸಾವು

ಕಿರುತೆರೆಯಿಂದ ಬಾಲಿವುಡ್‌ಗೆ ಹಾರಿದ್ದ ಸುಶಾಂತ್

ಸುಶಾಂತ್ ಸಿಂಗ್ ಬಾಲಿವುಡ್‌ಗೆ ಎಂಟ್ರಿ ನೀಡುವುದಕ್ಕೂ ಮೊದಲು ಪವಿತ್ರ್ ರಿಶ್ತಾ ಎಂಬ ಹಿಂದಿಯ ಜನಪ್ರಿಯ ಧಾರವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇದಾದ ಬಳಿಕ ಚೇತನ್ ಭಗತ್ ಪ್ರಮುಖ ಕೃತಿಗಳಲ್ಲೊಂದಾದ 'ತ್ರಿ ಮಿಸ್ಟೇಕ್ಸ್ ಆಫ್‌ ಮೈ ಲೈಫ್‌' ಮೂಲವಾಗಿಟ್ಟುಕೊಂಡು ಅಭಿಷೇಕ್ ಕಪೂರ್ ನಿರ್ದೇಶನದ ಕಾಯ್‌ ಪೋ ಚೆ ಸಿನಿಮಾ ಮೂಲಕ ಬಾಲಿವುಡ್‌ಗೆ ಗ್ರ್ಯಾಂಡ್ ಎಂಟ್ರಿ ನೀಡಿದ್ದರು. ಈ ಸಿನಿಮಾ ಸುಶಾಂತ್‌ರನ್ನು ರಾತ್ರೋ ರಾತ್ರಿ ಸ್ಟಾರ್‌ನ್ನಾಗಿ ಮಾಡಿತ್ತು.\

"

ಕಾಯ್‌ ಪೋ ಚೆ ಬಳಿಕ ಸುಶಾಂತ್ ಸಿಂಗ್ 2013ರಲ್ಲಿ, ಪರಿಣಿತಿ ಚೋಪ್ರಾ ಜೊತೆ ಶುದ್ಧ್ ದೇಸೀ ರೊಮಾನ್ಸ್ ಸಿನಿಮಾದಲ್ಲಿ ನಟಿಸಿದ್ದರು. ಬಬಳಿಕ ಕೇದಾರ್‌ನಾಥ್, ರಾಬ್ತಾ ಮೊದಲಾದ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಕೊನೆಯದಾಗಿ ಶ್ರದ್ಧಾ ಕಪೂರ್‌ ಜೊತೆ ಚಿಚೋರೆ ಸಿನಿಮಾದಲ್ಲಿ ನಟಿಸಿದ್ದರು. ಅಚ್ಚರಿಯ ವಿಚಾರವೆಂದರೆ ಸುಶಾಂತ್ ಸಿಂಗ್ ತಮ್ಮ ಕೊನೆಯ ಸಿನಿಮಾ ಚಿಚೋರೆಯಲ್ಲಿ ಆತ್ಮಹತ್ಯೆ ಮಾಡ್ಕೋಬೇಡಿ ಅಂತ ಹೇಳಿದವರು, ಈಗ ಸ್ವತಃ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಎಂತಹ ವಿಪರ್ಯಾಸ ಜೀವನವೇ, ಬೇರೆ ಸಿನೆಮಾನೇ ಬೇರೆ

ಬಾಲಿವುಡ್‌ಗೆ ಒಂದಾದ ಬಳಿಕ ಮತ್ತೊಂದು ಶಾಕ್!

ಬಾಲಿವುಡ್‌ಗೆ ಒಂದಾದ ಬಳಿಕ ಮತ್ತೊಂದರಂತೆ ಶಾಕಿಂಗ್ ಸುದ್ದಿಗಳು ಲಭಿಸುತ್ತಿವೆ. ಇರ್ಫಾನ್ ಖಾನ್, ರಿಷಿ ಕಪೂರ್, ವಾಜಿದ್ ಖಾನ್ ಕಳೆದುಕೊಂಡ ನೋವಿನಲ್ಲಿದ್ದ ಕ್ಷೇತ್ರಕ್ಕೆ  ಸುಶಾಂತ್ ಅಗಲುವಿಕೆ ಮತ್ತೊಂದು ಹೊಡೆತ ನೀಡಿದೆ.

"

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

BBK 12 Winner: 6 ತಿಂಗಳ ಹಿಂದೆ ಕಾಸಿಲ್ಲ- ಗಿಲ್ಲಿ ನಟನಿಗೆ ಈಗ ಹಣದ ಹೊಳೆ; ಕಿಚ್ಚ ಸುದೀಪ್‌ ಕೊಟ್ಟಿದ್ದೆಷ್ಟು?
BBK 12 Grand Finale Winner Gilli Nata:‌ ಆರು ಶೋ ಸೋತು, ಬಿಗ್‌ ಬಾಸ್ ಗೆದ್ದ ಪಳಾರ್ ಗಿಲ್ಲಿ ನಟ