
ಸಲ್ಮಾನ್ ಖಾನ್ ಮೊದಲಿಂದಲೂ ಬಿಚ್ಚುಮಾತಿಗೆ ಹೆಸರುವಾಸಿ. ಯಾವುದಕ್ಕೂ ಕೇರ್ ಮಾಡದ ಸಲ್ಲು ಭಾಯ್ ತಮ್ಮ ಮನಸ್ಸಿಗೆ ಅನ್ನಿಸಿದ್ದನ್ನು ಹಾಗೆಯೇ ಹೇಳುತ್ತಾರೆ. ಈಗ ಅವರು ಹೊಸತೊಂದು ಸ್ಟೇಟ್‌ಮೆಂಟ್ ನೀಡಿದ್ದಾರೆ. ಆ ಮಾತು ಸ್ವಲ್ಪ ಕುತೂಹಲಕಾರಿಯಾಗಿದೆ.
ಸಾಯಿ ಪಲ್ಲವಿ ನಿರಾಕರಿಸಿದ ಹುಡುಗನಿಗೆ ಓಕೆ ಅಂದ ರಶ್ಮಿಕಾ ಮಂದಣ್ಣ !
ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ‘ಬಾಲಿವುಡ್‌ನಲ್ಲಿರುವು ಐವರೇ ಸ್ಟಾರ್‌ಗಳು’ ಎಂದರು. ಅದಕ್ಕೆ ಮಾತು ಸೇರಿಸಿ, ‘ಸ್ಟಾರ್‌ಗಿರಿ ಕಾಲ ಕಳೆದಂತೆ ಮಾಸುತ್ತಾ ಹೋಗುತ್ತದೆ. ತುಂಬಾ ಸಮಯದವರೆಗೆ ಸ್ಟಾರ್‌ಗಿರಿಯನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಆದರೆ ನನ್ನನ್ನೂ ಸೇರಿದಂತೆ ಶಾರುಕ್ ಖಾನ್, ಅಮೀರ್ ಖಾನ್, ಅಕ್ಷಯ್ ಕುಮಾರ್, ಅಜಯ್ ದೇವಗನ್ ಈ ಐದು ಜನ ತುಂಬಾ ಸಮಯದವರೆಗೆ ಸ್ಟಾರ್‌ಗಿರಿ ಉಳಿಸಿಕೊಳ್ಳುವುದರಲ್ಲಿ ಸಫಲರಾಗಿದ್ದೇವೆ.
ರಶ್ಮಿಕಾ ಎಲ್ಲೇ ಹೋದರೂ ಅಲ್ಲಿರುತ್ತೆ ಅವನ ನೆರಳು!
ಇನ್ನೂ ಸುಮಾರು ವರ್ಷ ಈ ಸ್ಟಾರ್‌ಗಿರಿ ಉಳಿಸಿಕೊಳ್ಳಲು ನಾವು ಪ್ರಯತ್ನ ಪಡುತ್ತೇವೆ. ಸೂಪರ್‌ಸ್ಟಾರ್ ಗಳ ಬಾಕ್ಸ್ ಆಫೀಸ್ ಕಲೆಕ್ಷನ್ ನಿಧಾನಕ್ಕೆ ಕಡಿಮೆಯಾಗುತ್ತಾ ಬರುತ್ತದೆ. ನಮ್ಮ ಜೀವನದಲ್ಲಿ ಅದಿನ್ನೂ ಶುರುವಾಗಿಲ್ಲ’ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.