
ಇಂತಹ ಹೊತ್ತಿನಲ್ಲಿ ಸಲ್ಮಾನ್ ಖಾನ್ ತಮ್ಮ ಸೋಷಲ್ ಮೀಡಿಯಾ ಅಕೌಂಟ್‌ನಲ್ಲಿ ಬಾಲ್ಯದ ಫೋಟೋ ಒಂದನ್ನು ಹಾಕಿ ತಮ್ಮ ಮೂರು ದಶಕದ ಜರ್ನಿಯಲ್ಲಿ ಜೊತೆಯಾಗಿ ನಿಂತ ಅಭಿಮಾನಿಗಳಿಗೆ ಸಲಾಂ ಹೇಳಿದ್ದಾರೆ.
ರಾನು ಮಂದಾಲ್ ಗೆ 55 ಲಕ್ಷದ ಐಷಾರಾಮಿ ಮನೆ ಗಿಫ್ಟ್ ಕೊಟ್ರಾ ಸಲ್ಲುಭಾಯ್?
‘ನನ್ನ 31 ವರ್ಷದ ಸುಂದರ ಜರ್ನಿಯ ಜೊತೆಯಾಗಿದ್ದಕ್ಕೆ, ಈ ಜರ್ನಿಯನ್ನು ಅತ್ಯಂತ ಸುಂದರವಾಗಿ ಮಾಡಿದ್ದಕ್ಕೆ ನನ್ನ ಅಭಿಮಾನಿಗಳು, ಹಿತೈಷಿಗಳು ಮತ್ತು ಭಾರತೀಯ ಸಿನಿಮಾ ಕ್ಷೇತ್ರಕ್ಕೆ ನಾನು ಆಭಾರಿ’ ಎಂದು
ಹೇಳಿಕೊಂಡಿದ್ದಾರೆ. ಸರಿಯಾಗಿ 31 ವರ್ಷಗಳ ಹಿಂದೆ ಮೊದಲ ಬಾರಿಗೆ ‘ಮೈನೆ ಪ್ಯಾರ್ ಕಿಯಾ’ ಚಿತ್ರದ ಮೂಲಕ ಹೀರೋ ಆಗಿ ಎಂಟ್ರಿ ಕೊಟ್ಟ ಸಲ್ಮಾನ್ ಭರ್ಜರಿ ಮೂರು ದಶಕಗಳ ಕಾಲ ಬಾಲಿವುಡ್‌ನಲ್ಲಿ ಬಾದ್‌ಶಾ ಆಗಿ ಮೆರೆದವರು. ಇಂದಿಗೂ ಒಂದರ ಹಿಂದೊಂದರಂತೆ ಬ್ಲಾಕ್ ಬಾಸ್ಟರ್ ಚಿತ್ರಗಳನ್ನು ನೀಡುತ್ತಲೇ ಬಂದಿರುವ ಸಲ್ಮಾನ್‌ಗೆ ಸಲ್ಮಾನೇ ಸಾಟಿ.
ಬಕ್ರೀದ್ ದಿನ ಕುರಿ ‘ಸಲ್ಮಾನ್ ಖಾನ್’ ಗೆ ಫುಲ್ ಡಿಮ್ಯಾಂಡ್!
‘ಮೈನೆ ಪ್ಯಾರ್ ಕಿಯಾ’ದಿಂದ ಶುರುವಾಗಿ ಮೊನ್ನೆ ತೆರೆಗೆ ಬಂದ ‘ಭಾರತ್’ವರೆಗೂ ಅವರ ಓಟ ನಿಂತಿಲ್ಲ. ಮುಂದೆ ಬರಲಿರುವ ‘ದಬಾಂಗ್ ೩’ ಈಗಾಗಲೇ ಸಾಕಷ್ಟು ನಿರೀಕ್ಷೆ ಹುಟ್ಟಿಸಿಬಿಟ್ಟಿದೆ. ಅಷ್ಟರ ಮಟ್ಟಿಗೆ ಸಲ್ಮಾನ್ ಹವಾ ಬಾಲಿವುಡ್‌ನ ಬೀದಿಗಳಲ್ಲಿ ಇನ್ನೂ ಇದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.