
ಸ್ಯಾಂಡಲ್‌ವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಇದ್ದಲ್ಲಿ ಸಡಗರ, ಸಂಭ್ರಮ ಜೋರಾಗಿರುತ್ತೆ. ಇತ್ತೀಚಿಗೆ ಕನ್ನಡ ಚಿತ್ರರಂಗದ ಯಾವುದೇ ಸಿನಿಮಾಗಳ ಆಡಿಯೋ ಲಾಂಚ್, ಟೀಸರ್ ಲಾಂಚ್, ಪೋಸ್ಟರ್ ಲಾಂಚ್ ಹಾಗೂ ಸಕ್ಸಸ್ ಮೀಟ್‌ನಲ್ಲಿ ಡಿ-ಬಾಸ್ ತಪ್ಪದೇ ಹಾಜರಾಗುತ್ತಾರೆ.
ಲೂಸ್ ಮಾದ ಯೋಗಿ ಹಾಗೂ ನೀನಾಸಂ ಸತೀಶ್ ಅಭಿನಯದ ‘ಪರಿಮಳ ಲಾಡ್ಜ್’ ಚಿತ್ರದ ಟೀಸರ್ ಅನ್ನು ಸ್ಯಾಂಡಲ್‌ವುಡ್ ಸುಲ್ತಾನ್ ದರ್ಶನ್ ನಿನ್ನೆ (ಆಗಸ್ಟ್ 28) ಕಲಾವಿದರ ಸಂಘದಲ್ಲಿ ಬಿಡುಗಡೆ ಮಾಡಿದ್ದಾರೆ.
ಸಿದ್ಲಿಂಗು ಚಿತ್ರದ ಹಿಟ್ ನಂತರ ‘ಪರಿಮಳ ಲಾಡ್ಜ್’ಗೆ ಕೈ ಹಾಕಿದ ನಿರ್ದೇಶಕ ವಿಜಯ್ ಪ್ರಸಾದ್ ಟೀಸರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿದ್ದಾರೆ.ಇನ್ನು ಚಿತ್ರದಲ್ಲಿ ಸುಮನ್ ರಂಗನಾಥ್, ದತ್ತಣ್ಣ, ಬುಲೆಟ್ ಪ್ರಕಾಶ್ ಹಾಗೂ ಹೇಮಾ ದತ್ ಅಭಿನಯಿಸಿದ್ದಾರೆ.
ಟೀಸರ್ ಲಾಂಚ್ ಕಾರ್ಯಕ್ರಮದಲ್ಲಿ ಮಾತನಾಡಿದ ಲೂಸ್ ಮಾದ, ದರ್ಶನ್ ಜೊತೆ ಒಂದು ಸಿನಿಮಾ ಮಾಡಬೇಕೆಂದು ಬಹು ದಿನಗಳ ಆಸೆ ಇದೆ ಎಂದು ಹೇಳಿಕೊಂಡಿದ್ದಾರೆ.
‘ನಾನು ಯಾವಾಗಲೂ ಅಣ್ಣಂಗೆ ಹೇಳುತ್ತಾ ಇರ್ತಿನಿ, ನಿಮ್ಮ ಜೊತೆ ಸಿನಿಮಾ ಮಾಡಬೇಕೆಂದು. ಸಿಕ್ಕಾಗ ಅವರು ಕೇಳುತ್ತಾರೆ ಏನೋ ನೀನು ಬರಿ ಹೇಳ್ತಿಯಾ ಮಾಡೋದೆ ಇಲ್ಲ ಅಂತ ರೇಗಿಸುತ್ತಾರೆ. ನನ್ನ ಕುಟುಂಬದವರಿಗೂ ಹಾಗೂ ನನಗೆ ಅಣ್ಣನ ಕಂಡರೆ ಅಪಾರ ಗೌರವ’ ಎಂದು ಮಾತನಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.