‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ?

Published : Apr 30, 2019, 12:43 PM IST
‘ರಾಬರ್ಟ್’ ಚಿತ್ರದಲ್ಲಿ ದರ್ಶನ್ ಜೊತೆ ಸಾಯಿ ಪಲ್ಲವಿ ರೊಮ್ಯಾನ್ಸ್ ?

ಸಾರಾಂಶ

ದರ್ಶನ್ ಅಭಿನಯದ 'ರಾಬರ್ಟ್' ಚಿತ್ರಕ್ಕೆ ನಾಯಕಿಯಾಗಿ ರೌಡಿ ಬೇಬಿ ಸಾಯಿ ಪಲ್ಲವಿ ಆಯ್ಕೆಯಾಗಿದ್ದಾರೆ ಎಂದು ಗಾಂಧಿನಗರದಲ್ಲಿ ಹೊಸ ಸುದ್ದಿ ಹರಿದಾಡುತ್ತಿದೆ.

ಚಿತ್ರದ ಪೋಸ್ಟರ್ ಮೂಲಕವೇ ಜನರಲ್ಲಿ ಕುತೂಹಲ ಮೂಡಿಸಿರುವ ಚಿತ್ರ ‘ರಾಬರ್ಟ್’. ಚಾಲೆಂಜಿಂಗ್ ಸ್ಟಾರ್ ನಾಯಕತ್ವದ ಜೊತೆಗೆ ತರುಣ ಸುಧೀರ್ ನಿರ್ದೇಶನದ ಈ ಚಿತ್ರಕ್ಕೆ ’ಪ್ರೇಮಂ’ ಖ್ಯಾತಿಯ ಸಾಯಿ ಪಲ್ಲವಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಮಾತುಗಳು ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!

 

’ರಾಬರ್ಟ್’ ಚಿತ್ರದಲ್ಲಿ ಪರಭಾಷಾ ನಾಯಕಿಯರು ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡ ಹೇಳಿದೆ.

 

ಈ ಚಿತ್ರದ ಮುಹೂರ್ತ ಯಾವಾಗ, ಚಿತ್ರೀಕರಣದ ಕಥೆಯೇನು ಎಂಬ ಕುತೂಹಲಕ್ಕೆ ತೆರೆ ಬಿದ್ದಿದೆ. ಮೇ 6 ಕ್ಕೆ ಈ ಚಿತ್ರ ಅಧಿಕೃತವಾಗಿ ಚಿತ್ರೀಕರಣ ಶುರು ಮಾಡುತ್ತಿದ್ದು ಚಿತ್ರತಂಡದ ಪ್ರಕಾರ ಫಸ್ಟ್‌ ಶೆಡ್ಯೂಲ್‌ ಐದು ದಿನಗಳಿಗೆ ಫಿಕ್ಸ್‌ ಆಗಿದೆ. ಅದೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ಅನಂತರ ಚೆನ್ನೈ, ಹೈದರಾಬಾದ್‌ ಮತ್ತು ವಿಶಾಖಪಟ್ಟಣಂನಲ್ಲಿಯೂ ಚಿತ್ರೀಕರಣ ನಡೆಯಲಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಘೋಸ್ಟ್ ಸೇರಿ ಸೂಪರ್ ಹಿಟ್ ಸಿನಿಮಾ ನೀಡಿದ ನಟಿ ಅನನ್ಯಾ ರಾಜ್ ಸಾವು, 27ರ ನಟಿಗೆ ಏನಾಯಿತು?
Cinema: ಬೆಂಗಳೂರಿನಿಂದ ನಟನಾದವನ 90ರ ದಶಕದ ಚಿತ್ರ ರೀ-ರಿಲೀಸ್; ಹಳೇ ಪ್ರೊಜೆಕ್ಟರ್‌ನಲ್ಲಿ ಸಿನಿಮಾ ನೋಡಲು ಥಿಯೇಟರ್‌ಗೆ ಮುಗಿಬಿದ್ದ ಜನ!