ನಟಸಾರ್ವಭೌಮ ಡಾ.ರಾಜ್ ಕುಮಾರ್ ದ್ವಿತೀಯ ಪುತ್ರನಿಗೆ ರಾಘವೇಂದ್ರ ರಾಜ್ ಕುಮಾರ್ ಎಂದು ನಾಮಕರಣ ಮಾಡಲು ಕಾರಣವೇನು ಗೊತ್ತಾ? ಇದಕ್ಕೆ ಈ ಸಿನಿಮಾನೇ ಕಾರಣ.
ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸಾಧಕರ ಸಾಧನೆಯನ್ನು ಎತ್ತಿ ಹಿಡಿಯುವ ಕಾರ್ಯಕ್ರಮವೇ ವೀಕೆಂಡ್ ವಿತ್ ರಮೇಶ್. ಎರಡನೇ ವಾರ ರಾಘವೇಂದ್ರ ರಾಜ್ ಕುಮಾರ್ ಸಾಧಕರ ಸೀಟಿನಲ್ಲಿ ರಾಘವೇಂದ್ರ ರಾಜ್ ಕುಮಾರ್ ಕುಳಿತಿದ್ದರು.
undefined
ರಾಜಣ್ಣನಿಗೆ ಶಿವರಾಜ್ ಕುಮಾರ್, ರಾಘವೇಂದ್ರ ಹಾಗೂ ಪುನೀತ್ ಮೂವರು ಗಂಡು ಮಕ್ಕಳು ಮತ್ತು ಲಕ್ಷ್ಮಿ ಹಾಗೂ ಪೂರ್ಣಿಮಾ ಎಂಬ ಇಬ್ಬರು ಹೆಣ್ಣು ಮಕ್ಕಳು. ರಾಘಣ್ಣನಿಗೆ ರಾಘವೇಂದ್ರ ಎಂದು ಹೆಸರಿಡಲು ವಿಶೇಷ ಕಾರಣವಿದೆ.
ತಂದೆಯೊಂದಿಗೆ ಬಾಲ್ಯದ ನೆನಪುಗಳನ್ನು ಹಂಚಿಕೊಂಡ ವೀರೇಂದ್ರ ಹೆಗ್ಗಡೆ ಪುತ್ರಿ!
ಟಿವಿ ಸಿಂಗ್ ಠಾಕೂರ್ ನಿರ್ದೇಶನದ ಅಣ್ಣಾವ್ರು ಅಭಿನಯದ ‘ಮಂತ್ರಾಲಯ ಮಹಾತ್ಮೆ’ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಹುಟ್ಟಿದವರೇ ರಾಘಣ್ಣ. ರಾಯರ ಪ್ರಸಾದವೆಂದು ಅವರಿಗೆ ರಾಘವೇಂದ್ರ ಎಂದು ನಾಮಕರಣ ಮಾಡಿಲಾಗಿತ್ತು ಎಂದು ಈ ಬಗ್ಗೆ ನಿರ್ದೇಶಕ ಭಗವಾನ್ ಹಂಚಿಕೊಂಡರು.