'ಎಲ್ಲರಿಗೂ ನಮಸ್ಕಾರ' ಕನ್ನಡದಲ್ಲೇ ಸೀತೆ ಮಾತು ಆರಂಭ, ಬೆಂಗಳೂರಲ್ಲಿ ಸಾಯಿ ಪಲ್ಲವಿ ಗಾಬರಿ ಆಗಿದ್ದೇಕೆ?

Published : Oct 16, 2026, 06:30 AM IST
Sai Pallavi in Ramayana event in Bengaluru

ಸಾರಾಂಶ

ಬೆಂಗಳೂರಿನಲ್ಲಿ ನಡೆದ 'ರಾಮಾಯಣ' ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟಿ ಸಾಯಿ ಪಲ್ಲವಿ ಭಾಗವಹಿಸಿದ್ದರು. ಪಟಾಕಿ ಸದ್ದಿಗೆ ಗಾಬರಿಯಾದ ಅವರು, ನಂತರ ನಟ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಭೇಟಿಯಾಗಿ ಆತ್ಮೀಯವಾಗಿ ಮಾತನಾಡಿದರು. ಈ ವಿಡಿಯೋಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

ಬೆಂಗಳೂರು: ನಿನ್ನೆ ಸಂಜೆ ಬೆಂಗಳೂರಿನಲ್ಲಿ ರಾಮಾಯಣ (Ramayana: The Legend of Prince Rama) ಚಿತ್ರದ ಎರಡನೇ ಟ್ರೈಲರ್ ಲಾಂಚ್ ಆಯಿತು. ಚಿತ್ರದ ಪ್ರಮುಖ ಪಾತ್ರದಾರಿ ಸೀತೆ (ಸಾಯಿ ಪಲ್ಲವಿ) ಕೂಡ ಸಿಲಿಕಾನ್ ಸಿಟಿಯಲ್ಲಿ ನಡೆದ ಬಿಗ್ ಈವೆಂಟ್‌ನಲ್ಲಿ ಭಾಗಿಯಾಗಿದ್ದರು.

ಸಾಯಿ ಪಲ್ಲವಿ ಅವರು ಯಾವುದೇ ಹಮ್ಮು, ಬಿಮ್ಮು ಇಲ್ಲದೇ.. ಆಗಮಿಸಿದರು. ಸಿಂಪಲ್ಲಾಗಿ ಸ್ಯಾರಿ ಧರಿಸಿ ಕಾರ್ಯಕ್ರಮಕ್ಕೆ ಎಂಟ್ರಿಯಾದರು. ಇನ್ನು ಅವರ ಎಂಟ್ರಿ ವೇಳೆ ತುಂಬಾ ಗಲಾಟೆ ಇತ್ತು. ಪಟಾಕಿಗಳನ್ನ ಸಿಡಿಸಲಾಗಿತ್ತು. ಇದರಿಂದ ಒಂದು ಕ್ಷಣ ನಟಿ ಆಘಾತಕ್ಕೆ ಒಳಗಾದರು. ಗಾಬರಿಯಾದ ಸಾಯಿ ಪಲ್ಲಿವಿ, ಕಾರ್ಯಕ್ರಮದ ಮುಂಭಾಗದ ವೇದಿಕೆಗೆ ಹೋಗದೇ ಅಲ್ಲೇ ನಿಂತಿದ್ದರು. ನಂತರ ತಮ್ಮ ಬಾಡಿಗಾರ್ಡ್‌ ಜೊತೆ ಚರ್ಚಿಸಿದ ನಂತರ ಮುಂದೆ ಸಾಗಿದರು.

ಯಶ್, ರಾಧಿಕಾ ಜೊತೆ ಆಪ್ತ ಮಾತುಕತೆ

ಬಳಿಕ ಯಶ್ ಮತ್ತು ರಾಧಿಕಾ ಪಂಡಿತ್ ಅವರನ್ನು ಭೇಟಿಯಾದರು. ರಾಧಿಕಾ ಪಂಡಿತ್ ಅವರನ್ನು ತಬ್ಬಿಕೊಂಡು, ಯಶ್ ಜೊತೆ ಮಾತನ್ನಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು, ವೇದಿಕೆ ಮೇಲೆ ಮಾತು ಆರಂಭಿಸುವ ಮನ್ನ ಅವರು ಕನ್ನಡದಲ್ಲಿಯೇ ಮಾತನ್ನಾಡಿದರು, ಎಲ್ಲರಿಗೂ ನಮಸ್ಕಾರ. ಇಲ್ಲಿಗೆ (ಬೆಂಗಳೂರಿಗೆ) ಬಂದಿರೋದು ನನಗೆ ತುಂಬಾ ಸಂತೋಷ ಆಗಿದೆ ಎನ್ನುತ್ತ ತಮ್ಮ ಮಾತನ್ನು ಮುಂದುವರಿಸಿದರು.. ರಾಮಾಯಣ ಚಿತ್ರದಲ್ಲಿ ಸಾಯಿ ಪಲ್ಲವಿ ಅವರು ಸೀತೆ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ನೀತಿಶ್ ತಿವಾರಿ ನಿರ್ದೇಶನದ, ನಮಿತ್ ಮಲ್ಹೋತ್ರಾ ನಿರ್ಮಾಣದ ಮಹತ್ವಾಕಾಂಕ್ಷೆಯ ‘ರಾಮಾಯಣ: ರೈಸ್ ಆಫ್ ಎ ಲೆಜೆಂಡ್’ ಚಿತ್ರದ ಅಧಿಕೃತ ಕನ್ನಡ ಟ್ರೈಲರ್ ಬಿಡುಗಡೆಯಾಗಿದೆ. ರಾಮನಾಗಿ ರಣಬೀರ್ ಕಪೂರ್, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ Deol ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಸಂಗೀತ ನೀಡಿದ್ದಾರೆ. 2026ರ ದೀಪಾವಳಿಗೆ (ನವೆಂಬರ್ 2026) ವಿಶ್ವದಾದ್ಯಂತ ಬಿಡುಗಡೆಯಾಗಲಿದೆ.

ಇನ್ನು, ಬೆಂಗಳೂರಿನಲ್ಲಿ ನಡೆದ ಟ್ರೈಲರ್ ಲಾಂಚ್ ಕಾರ್ಯಕ್ರಮದ ದೃಶ್ಯಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿವೆ. ಅದರಲ್ಲೂ ಸಾಯಿ ಪಲ್ಲವಿ, ಯಶ್, ಹಾಗೂ ರಾಧಿಕಾ ಪಂಡಿತ್ ಅವರ ವಿಡಿಯೋಗಳು ವೈರಲ್ ಆಗಿವೆ. ಯಶ್ ಅವರು ರಾಧಿಕಾ ಪಂಡಿತ್ ಅವರ ಕೈಹಿಡಿದು ಕಾರ್ಯಕ್ರಮಕ್ಕೆ ಎಂಟ್ರಿಯಾದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

2006 ರಿಂದ 2026 ರವರೆಗೆ! ಕಾದಂಬರಿಯಿಂದ… ಲಕ್ಷ್ಮೀ ನಿವಾಸ… ನಟಿ ಅನಿಕಾ ನಟನಾ ಜರ್ನಿಗೆ 20 ವರ್ಷ
'ಹೃದಯ ಜಾರಿತು ಪ್ರೀತಿ ಉಳಿಯಿತು' ನಾಟಕ ವೇಳೆ ಹೃದಯಾಘಾತ, ರಂಗಮಂಟಪದಲ್ಲೇ ಉಸಿರು ಬಿಟ್ಟ ಕಲಾವಿದ