2006 ರಿಂದ 2026 ರವರೆಗೆ! ಕಾದಂಬರಿಯಿಂದ… ಲಕ್ಷ್ಮೀ ನಿವಾಸ… ನಟಿ ಅನಿಕಾ ನಟನಾ ಜರ್ನಿಗೆ 20 ವರ್ಷ

Published : Oct 15, 2026, 09:59 PM IST
Actress Anika Scindia

ಸಾರಾಂಶ

ಕನ್ನಡ ಕಿರುತೆರೆಗೆ 2006ರಲ್ಲಿ ಕಾದಂಬರಿ ಧಾರಾವಾಹಿ ಮೂಲಕ ಎಂಟ್ರಿ ಕೊಟ್ಟ ನಟಿ ಅನಿಕಾ, ಹಲವಾರು ರೀತಿಯ ವಿಭಿನ್ನ ಪಾತ್ರಗಳನ್ನು ಮಾಡುತ್ತಾ, ಜನಪ್ರಿಯತೆ ಗಳಿಸಿದ್ದು, ಇದೀಗ 2026ರಲ್ಲಿ ಅವರ ನಟನಾ ಜರ್ನಿಗೆ 20 ವರ್ಷಗಳು ಸಂದಿವೆ. ಇಲ್ಲಿದೆ ಅನಿಕಾ ನಟನಾ ಜರ್ನಿ ವಿವರ.

ಕನ್ನಡ ಕಿರುತೆರೆಯ ಜನಪ್ರಿಯ ವಿಲನ್

ಅಂದಿನ ಕಾದಂಬರಿ ಧಾರಾವಾಹಿಯಿಂದ ಹಿಡಿದು ಇಂದಿನ ಲಕ್ಷ್ಮೀನಿವಾಸದ ವರೆಗೆ, ಅಂದರೆ 2006 ರಿಂದ 2026 ರವರೆಗೆ ಬರೋಬ್ಬರಿ 20ಗಳಿಂದ ಕನ್ನಡ ಕಿರುತೆರೆ, ಸಾಲು ಸಾಲು ಧಾರಾವಾಹಿಗಳು, ಕಾರ್ಯಕ್ರಮಗಳು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡ ನಟಿ ಅನಿಕಾ ಸಿಂಧ್ಯಾ. ಲಕ್ಷ್ಮೀ ಬಾರಮ್ಮ ಸೇರಿದಂತೆ 50ಕ್ಕೂ ಅಧಿಕ ಸೀರಿಯಲ್​ಗಳಲ್ಲಿ ನಟಿಸಿ, ಸುಮಾರು ಎಂಟು ಸಿನಿಮಾಗಳಲ್ಲಿ ಕಾಣಿಸಿಕೊಂಡಿರೊ ನಟಿ ಅನಿಕಾ ಸಿಂಧ್ಯ. ಯಾಹೂ, ಜೊತೆಜೊತೆಯಲಿ, ನೆನಪಿರಲಿ ಮುಂತಾದ ಹಿಟ್​ ಸಿನಿಮಾಗಳಲ್ಲೂ ನಟಿಸಿದ್ದಾರೆ. ಕಳೆದ ಇಪ್ಪತ್ತು ವರ್ಷಗಳಿಂದ ಹಲವು ವಿಧದ ಶೇಡ್ ಗಳಲ್ಲಿ, ಅದರಲ್ಲೂ ಹೆಚ್ಚಾಗಿ ನೆಗೆಟಿವ್ ಶೇಡ್ ಗಳಲ್ಲಿ ಅನಿಕಾ ಕಾಣಿಸಿಕೊಂಡಿದ್ದಾರೆ. ನಟಿಯ ಸೀರಿಯಲ್ ಜರ್ನಿ ಬಗ್ಗೆ ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಅನಿಕಾ ಸಿಂಧ್ಯಾ ನಟಿಸಿದ ಧಾರಾವಾಹಿಗಳು:

ಕಾದಂಬರಿ (ಉದಯ), ಕುಂಕುಮಭಾಗ್ಯ (ಉದಯ), ಶಿವ (ಡಿಡಿ ಚಂದನ), ಬಣ್ಣ (ಡಿಡಿ ಚಂದನ), ಮರೀಚಿಕೆ (ಡಿಡಿ ಚಂದನ), ಪಾಪಪಾಂಡು (ಈಟಿವಿ ಕನ್ನಡ ), ಸಿಲ್ಲಿಲಲ್ಲಿ ( ಈಟಿವಿ ಕನ್ನಡ ), ಅಗ್ನಿಶಿಖೆ (ಈಟಿವಿ ಕನ್ನಡ ), ಬೆಳಕು ( ಈಟಿವಿ ಕನ್ನಡ ), ನನ್ನವಳು ( ಈಟಿವಿ ಕನ್ನಡ ), ಗುಪ್ತಗಾಮಿನಿ (ಈಟಿವಿ ಕನ್ನಡ ), ಮನೆಯೊಂದು ಮೂರು ಬಾಗಿಲು ( ಈಟಿವಿ ಕನ್ನಡ ), ಸುಕನ್ಯಾ ( ಈಟಿವಿ ಕನ್ನಡ ), ಶುಭಮಂಗಳ ( ಈಟಿವಿ ಕನ್ನಡ ), ರಂಗೋಲಿ (ಉದಯ), ಗೃಹಲಕ್ಷ್ಮಿ (ಉದಯ), ಲಕ್ಷ್ಮಿ (ಉದಯ), ಮಹಾಭಾರತ (ಉದಯ), ಮಂದಾರ (ಉದಯ), ವಾಸ್ತಲ್ಯ (ಉದಯ), ಮನೆಮಗಳು (ಉದಯ), ಕಸ್ತೂರಿ (ಕಸ್ತೂರಿಟಿವಿ), ಮುಂಗಾರುಮಳೆ (ಸುವರ್ಣ), ಆಕಾಶದೀಪ (ಸುವರ್ಣ), ಪಂಚಮಿ (ಸುವರ್ಣ), ಸೂರ್ಯಕಾಂತಿ ( ಜೀ ಕನ್ನಡ), ಆತ್ಮಬಂಧನ ( ಜೀ ಕನ್ನಡ), ಲಕ್ಷ್ಮಿಬಾರಮ್ಮ (ಕಲರ್ಸ್ ಕನ್ನಡ), ನೀಲಿ ( ಸ್ಟಾರ್ ಸುವರ್ಣ ), ಪ್ರೇಮಲೋಕ ( ಸ್ಟಾರ್ ಸುವರ್ಣ ), ಮರಳಿ ಮನಸಾಗಿದೆ ( ಸ್ಟಾರ್ ಸುವರ್ಣ ), ನೀನಾದೆನಾ ( ಸ್ಟಾರ್ ಸುವರ್ಣ ), ಗೌರಿಶಂಕರ (ಸ್ಟಾರ್ ಸುವರ್), ಲಕ್ಷ್ಮೀನಿವಾಸ (ಝೀಕನ್ನಡ)

ಸದ್ಯ ಲಕ್ಷ್ಮೀ ನಿವಾಸದ ನೀಲೂ

ಅನಿಕಾ ಸಿಂಧ್ಯಾ ಅವರು ಸದ್ಯ ‘ಲಕ್ಷ್ಮೀ ನಿವಾಸದಲ್ಲಿ ನೀಲೂ ಪಾತ್ರದ ಮೂಲಕ ಮಿಂಚುತ್ತಿದ್ದಾರೆ. ಈ ಹಿಂದೆ ಆ ಪಾತ್ರವನ್ನು ನಟಿ ಮಾನಸ ಮನೋಹರ್ ಮಾಡುತ್ತಿದ್ದರು. ಇದು ಹೆಚ್ಚಿನ ನೆಗೆಟಿವ್ ಶೇಡ್ ಇರುವ ಪಾತ್ರವಾಗಿದ್ದು, ತನ್ನ ಅತ್ತೆಯನ್ನು ಸೇರಿ ಮನೆಮಂದಿಯನ್ನು ಕೊಲ್ಲುವಂತಹ ಪಾತ್ರದಲ್ಲಿ ಅನಿಕಾ ನಟಿಸುತ್ತಿದ್ದಾರೆ.

ಅಭಿಮಾನಿಗಳಿಂದ ಶುಭಾಶಯ

ಅನಿಕಾ ಅವರ 20 ವರ್ಷಗಳ ಕರಿಯರ್ ಜರ್ನಿಗೆ ಅಭಿಮಾನಿಗಳು ಶುಭಾಶಯ ಕೋರಿದ್ದಾರೆ. ಇನ್ನು ನಟಿ ತನಿಷಾ ಕುಪ್ಪಂಡ ಕಾಮೆಂಟ್ ಮಾಡಿ, ಕಂಗ್ರಾಜುಲೇಶನ್ಸ್ ಡಿಯರ್, ಮೊದಲ ದಿನದಿಂದಲೇ ನೀವು ಪ್ರೇರಣೆ ನೀಡುತ್ತಾ ಬಂದಿದ್ದೀರಿ. ನೀವು ಕಾದಂಬರಿ ಧಾರಾವಾಹಿಯಲ್ಲಿ ಧರಿಸಿದ್ದ ಒನ್ ಪೀಸ್ ಟಾಪ್ ನನಗೆ ಇನ್ನೂ ಕೂಡ ನೆನಪಿದೆ ಎಂದು ನೆನಪುಗಳನ್ನು ಹಂಚಿಕೊಂಡಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Amruthadhaare: ಯಾರೀ ದೀಪಿಕಾ? ಹುಟ್ಟಿನ ಗುಟ್ಟು ರಟ್ಟಾಯ್ತು- ಅಮ್ಮನ ಮಡಿಲು ಸೇರೊ ಕಾಲ ಬಂದಾಯ್ತು
ಮದುಮಗಳಾಗಿ ಮಿಂಚಿದ 'ಸತ್ಯ' ಸೀರಿಯಲ್​ ನಟಿ ಪ್ರಿಯಾಂಕಾ ಶಿವಣ್ಣ: ಏನಿದು ಗುಡ್​ನ್ಯೂಸ್​