Salman Khan-Aishwarya Rai Secret: ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್ ಸೀಕ್ರೆಟ್ ಬಿಚ್ಚಿಟ್ಟ ಸಾದಿಯಾ ಸಿದ್ದಿಕಿ; ಇಲ್ಲಿರೋದು ಹೊಸ ವಿಷಯ!

Published : Jun 29, 2026, 09:17 AM IST
Sadiya Siddiqui Aishwarya Rai

ಸಾರಾಂಶ

ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲಿ ಅದೇನು ಮಾಡಿದ್ದರು ಎಂಬ ಸೀಕ್ರೆಟ್ ಇಲ್ಲಿ ರಿವೀಲ್ ಆಗಿದೆ. ಈ ಸಂಗತಿಯನ್ನು ಸಹನಟಿ ಸಾದಿಯಾ ಹೇಳಿದ್ದಾರೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾ

ಸಲ್ಮಾನ್ ಖಾನ್-ಐಶ್ವರ್ಯಾ ರೈ ಲವ್-ಬ್ರೇಕಪ್ ಸೀಕ್ರೆಟ್!

ಬಾಲಿವುಡ್ ಲೋಕದಲ್ಲಿ ಪ್ರೇಮಕಥೆಗಳಿಗೆ, ಗಾಸಿಪ್‌ಗಳಿಗೆ ಯಾವತ್ತೂ ಬರ ಇಲ್ಲ. ಕೆಲವೊಮ್ಮೆ ಅದು ಸಾಕಷ್ಟು ವಿವಾದಗಳ ಲೋಕ ಕೂಡ. ಅದರಲ್ಲೂ ವಿಶ್ವಸುಂದರಿ ಐಶ್ವರ್ಯಾ ರೈ (Aishwarya Rai) ಮತ್ತು ಸುಲ್ತಾನ್ ಸಲ್ಮಾನ್ ಖಾನ್ (Salman Khan) ಅವರ ಪ್ರೇಮಕಥೆ ಹಾಗೂ ಬ್ರೇಕಪ್ ಇಂದಿಗೂ ಸಿನಿಪ್ರೆಮಿಗಳ ಮೆಚ್ಚಿನ ಚರ್ಚೆಯ ವಿಷಯ. ಈಗ ಇದೇ ವಿಚಾರವಾಗಿ ಐಶ್ವರ್ಯಾ ರೈ ಅವರ ವೃತ್ತಿಪರತೆಯನ್ನು ಕೊಂಡಾಡಿರುವ ನಟಿ ಸಾದಿಯಾ ಸಿದ್ದಿಕಿ, ಅಂದಿನ ಕಾಲದ ಹಲವು ಆಸಕ್ತಿದಾಯಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

ವೈಯಕ್ತಿಕ ನೋವಿನ ನಡುವೆಯೂ ಐಶ್ವರ್ಯಾ ವೃತ್ತಿಪರತೆ:

2005ರಲ್ಲಿ ಬಿಡುಗಡೆಯಾದ 'ಶಬ್ದ್' (Shabd) ಸಿನಿಮಾದಲ್ಲಿ ಐಶ್ವರ್ಯಾ ರೈ ಜೊತೆ ಕೆಲಸ ಮಾಡಿದ ಅನುಭವವನ್ನು ಸಾದಿಯಾ ಸಿದ್ದಿಕಿ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪು ಮಾಡಿಕೊಂಡಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಆ ಕಹಿ ಘಟನೆ ಮತ್ತು ಕಠಿಣ ಬ್ರೇಕಪ್ ಬಗ್ಗೆ ನಂತರದ ದಿನಗಳಲ್ಲಿ ಐಶ್ವರ್ಯಾ ತಮ್ಮ ವೈಯಕ್ತಿಕ ನೋವನ್ನು ಎಲ್ಲಿಯೂ ತೋರ್ಪಡಿಸಲಿಲ್ಲವಂತೆ. "ಅವರು ತಮ್ಮ ಭಾವನೆಗಳನ್ನು ತುಂಬಾ ಚೆನ್ನಾಗಿ ಮರೆಮಾಚುತ್ತಿದ್ದರು" ಎಂದು ಸಾದಿಯಾ ಹೇಳಿದ್ದಾರೆ.

ಸಾದಿಯಾ ಹೇಳುವ ಪ್ರಕಾರ, ಐಶ್ವರ್ಯಾ ಎಂದಿಗೂ ಸೆಟ್‌ಗೆ ತಯಾರಿಯಿಲ್ಲದೆ ಬರುತ್ತಿರಲಿಲ್ಲ. "ಅವರು ಯಾವಾಗಲೂ ಸಂಪೂರ್ಣ ಸಿದ್ಧತೆಯೊಂದಿಗೆ ಬರುತ್ತಿದ್ದರು. ಸ್ಕ್ರಿಪ್ಟ್ ಅನ್ನು ವಿವರವಾಗಿ ಓದುತ್ತಿದ್ದರು ಮತ್ತು ತಮ್ಮ ಪಾತ್ರವನ್ನು ಹೆಣೆದಿರುವ ರೀತಿ, ಅಲ್ಲಿನ ಮನೋವಿಜ್ಞಾನದ ಬಗ್ಗೆ ಚರ್ಚಿಸುತ್ತಿದ್ದರು. ಅವರ ವೃತ್ತಿಪರತೆ ಕಂಡು ನಾನು ಬೆರಗಾಗಿದ್ದೆ," ಎಂದು ಸಾದಿಯಾ ಹೇಳಿದ್ದಾರೆ.

ಸಲ್ಮಾನ್-ಐಶ್ವರ್ಯಾ ಸಂಬಂಧದ ಆ ಕಹಿ ದಿನಗಳು:

ಸಂಜಯ್ ಲೀಲಾ ಭನ್ಸಾಲಿಯವರ 'ಹಮ್ ದಿಲ್ ದೇ ಚುಕೇ ಸನಮ್' ಚಿತ್ರದ ಚಿತ್ರೀಕರಣದ ವೇಳೆ ಐಶ್ವರ್ಯಾ ಮತ್ತು ಸಲ್ಮಾನ್ ಪ್ರೀತಿಸತೊಡಗಿದ್ದರು. ಇಡೀ ಬಾಲಿವುಡ್ ಇವರ ಮದುವೆಯ ನಿರೀಕ್ಷೆಯಲ್ಲಿತ್ತು. ಆದರೆ 2002ರಲ್ಲಿ ಈ ಸಂಬಂಧ ಅಧಿಕೃತವಾಗಿ ಮುಕ್ತಾಯವಾಯಿತು. ಸಲ್ಮಾನ್ ಅವರ ದುವರ್ತನೆಯೇ ಈ ಬ್ರೇಕಪ್‌ಗೆ ಕಾರಣ ಎಂದು ಐಶ್ವರ್ಯಾ ಆಗ ಹೇಳಿದ್ದರು. ಇದರ ನಂತರ 2003ರಲ್ಲಿ ವಿವೇಕ್ ಒಬೆರಾಯ್ ನಡೆಸಿದ ಪತ್ರಿಕಾಗೋಷ್ಠಿ ದೊಡ್ಡ ಬಿರುಗಾಳಿಯನ್ನೇ ಎಬ್ಬಿಸಿತ್ತು. ಇಷ್ಟೆಲ್ಲಾ ಮಾನಸಿಕ ಒತ್ತಡಗಳ ನಡುವೆಯೂ ಐಶ್ವರ್ಯಾ 'ಶಬ್ದ್' ಚಿತ್ರದ ಶೂಟಿಂಗ್‌ನಲ್ಲಿ ಭಾಗವಹಿಸಿ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಪೂರೈಸಿದ್ದರು.

ಸಂಜಯ್ ದತ್ ಅವರ ವಿಭಿನ್ನ ಶೈಲಿ:

ಇದೇ ಇಂಟರ್‌ವ್ಯೂದಲ್ಲಿ ಸಾದಿಯಾ ಅವರು ಸಂಜಯ್ ದತ್ ಅವರ ಬಗ್ಗೆಯೂ ಮಾತನಾಡಿದ್ದಾರೆ. "ಸಂಜಯ್ ದತ್ ಅವರೊಂದಿಗೆ ನನ್ನ ಮೊದಲ ದೃಶ್ಯ ಅಡುಗೆ ಮನೆಯಲ್ಲಿತ್ತು. ನಾನು ಸಂಭಾಷಣೆಗಳನ್ನು ರಿಹರ್ಸಲ್ ಮಾಡೋಣವೇ ಎಂದು ಕೇಳಿದಾಗ, ನಿರ್ದೇಶಕಿ ಲೀನಾ ಯಾದವ್ ಬಂದು, 'ಸಂಜು ಬಾಬಾ ರಿಹರ್ಸಲ್ ಮಾಡಲು ಅಷ್ಟಾಗಿ ಇಷ್ಟಪಡುವುದಿಲ್ಲ, ನೀವು ನಿಮ್ಮ ತಯಾರಿ ಮಾಡಿಕೊಳ್ಳಿ' ಎಂದರು. ಇದು ನನಗೆ ಸ್ವಲ್ಪ ಅಚ್ಚರಿ ತಂದಿತು, ಆದರೆ ಸಂಜಯ್ ದತ್ ತಮ್ಮದೇ ಆದ ವಿಭಿನ್ನ ಶೈಲಿಯಲ್ಲಿ ಅದ್ಭುತವಾಗಿ ನಟಿಸುತ್ತಿದ್ದರು. ಅದನ್ನು ನೋಡಿ ನಾನು ನಿಜವಾಗಿಯೂ ಬೆರಗಾಗಿದ್ದೆ," ಎಂದಿದ್ದಾರೆ.

'ಶಬ್ದ್' ಚಿತ್ರದ ಬಗ್ಗೆ:

ಲೀನಾ ಯಾದವ್ ನಿರ್ದೇಶನದ 'ಶಬ್ದ್' ಚಿತ್ರದಲ್ಲಿ ಸಂಜಯ್ ದತ್, ಐಶ್ವರ್ಯಾ ರೈ ಮತ್ತು ಜಾಯೆದ್ ಖಾನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು. ಈ ಚಿತ್ರವು ಒಬ್ಬ ಬರಹಗಾರನ ಕಲ್ಪನೆ ಮತ್ತು ವಾಸ್ತವದ ನಡುವಿನ ಸಂಘರ್ಷದ ಕಥೆಯಾಗಿತ್ತು. ಐಶ್ವರ್ಯಾ ಈ ಚಿತ್ರದಲ್ಲಿ ಅತ್ಯಂತ ಸುಂದರವಾಗಿ ಕಾಣಿಸುತ್ತಿದ್ದರು. ಜೊತೆಗೆ ಅವರ ನಟನೆಗೂ ಅಪಾರ ಮೆಚ್ಚುಗೆ ವ್ಯಕ್ತವಾಗಿತ್ತು.

ಒಟ್ಟಾರೆಯಾಗಿ, ವಿಶ್ವಸುಂದರಿ ಪಟ್ಟ ಪಡೆದಿದ್ದ ಐಶ್ವರ್ಯಾ ರೈ ಕೇವಲ ಸುಂದರಿ ಮಾತ್ರವಲ್ಲ, ಎಂತಹ ಕಷ್ಟದ ಪರಿಸ್ಥಿತಿಯಲ್ಲೂ ಕೆಲಸಕ್ಕೆ ಮೊದಲ ಆದ್ಯತೆ ನೀಡುವ ಗಟ್ಟಿ ಮನಸ್ಸಿನ ಮಹಿಳೆ ಎಂಬುದನ್ನು ಸಹನಟಿ ಸಾದಿಯಾ ಮಾತುಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಮುಂದೆ 2007ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದ ಐಶ್ವರ್ಯಾ ರೈ, ಈಗ ಆರಾಧನಾ ತಾಯಿಯಾಗಿ ಲೈಫ್ ಲೀಡ್ ಮಾಡುತ್ತಿದ್ದಾರೆ. ಸಿನಿಮಾದಿಂದ ಸಾಕಷ್ಟು ಅಂತರ ಕಾಯ್ದುಕೊಂಡಿದ್ದಾರೆ ಐಶ್ವರ್ಯಾ ರೈ. ಆದರೆ ಸಲ್ಮಾನ್ ಖಾನ್ ಇಂದಿಗೂ ಸಿಂಗಲ್ ಆಗಿಯೇ ಉಳಿದಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Actress Krishi Thapanda: ತನ್ನ ಮನೆಯೊಳಗಡೆ ಪ್ರಾಣಬಿಟ್ಟ ಗೆಳೆಯ; ಫಸ್ಟ್‌ ರಿಯಾಕ್ಷನ್ ಕೊಟ್ಟ ಕೃಷಿ ತಾಪಂಡ
75 ವರ್ಷದ ಸಿನಿ ನೆನಪುಗಳಿಗೆ ತೆರೆ: ಇತಿಹಾಸದ ಪುಟ ಸೇರಿದ ಅರಸೀಕೆರೆಯ ಸಾಧನ ಚಿತ್ರಮಂದಿರ