
ಬೆಂಗಳೂರು[ಅ. 04] ಬಿಗ್ ಬಾಸ್ ಮನೆಗೆ ಹಿರಿಯ ಪತ್ರಕರ್ತ ರವಿ ಬೆಳಗೆರೆ ಎಂಟ್ರಿ ಕೊಡಲಿದ್ದಾರೆಯೇ? ಹೌದು ಎನ್ನುತ್ತಿವೆ ಮೂಲಗಳು. ಸ್ಪರ್ಧಿಯಾಗಿ ಮನೆ ಒಳಗೆ ಹೋಗುತ್ತಾರೋ? ಅಥವಾ ಒಂದು ವಾರ ಕಾಲದ ಮಟ್ಟಿಗೆ ಅತಿಥಿಯಾಗಿ ಹೋಗಿ ಬರುತ್ತಾರೋ ಗೊತ್ತಿಲ್ಲ. ಆದರೆ ಬೆಳಗೆರೆ ಮನೆ ಒಳಗೆ ಖಾಲಿಡುವುದು ಬಹುತೇಕ ನಿಕ್ಕಿಯಾಗಿದೆ.
ಪಾಪ್ಯುಲಾರಿಟಿ, ಫೈಟ್, ಲವ್, ಕೇರ್ ಆ್ಯಂಡ್ ಗಾಸಿಪ್ ಎಲ್ಲವೂ ಒಂದೇ ವೇಳೆ ಸುತ್ತುತ್ತೆ ಅಂದ್ರೆ ಅದು ಬಿಗ್ ಬಾಸ್ ಮನೆಯಲ್ಲಿ ಮಾತ್ರ. ಸ್ಪರ್ಧಿಗಳಿಗೆ ಇದಕ್ಕೊಂದು ಟಾಸ್ಕ್ ಆದರೆ ನೋಡುಗರಿಗೆ ಫುಲ್ ಎಂಟರ್ಟೇನ್‌ಮೆಂಟ್.
ಈಗಾಗಲೇ ಬಿಗ್ ಬಾಸ್ ಪ್ರೋಮೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಅದರಲ್ಲೂ ಕಿಚ್ಚ ಸುದೀಪ್ 'ಇದು ಮದರಾಸ್ ಐ ಅಲ್ಲ, ಬಿಗ್ ಬಾಸ್ ಐ' ಎಂದು ಹೇಳಿರುವುದು ಪ್ರೇಕ್ಷಕರ ಗಮನ ಸೇಳೆದಿದೆ. ಇನ್ನು BB ತಂಡವೇ ಕ್ಲಾರಿಟಿ ಕೊಟ್ಟಿರುವ ಪ್ರಕಾರ ಕಾರ್ಯಕ್ರಮವು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತದೆ ಹಾಗೂ ಸೆಲೆಬ್ರಿಟಿಗಳು ಮಾತ್ರ ಭಾಗಿಯಾಗುತ್ತಾರಂತೆ.
ಬಿಗ್ ಬಾಸ್ ಮನೆ ಎಂಟ್ರಿ ಲೆಟೆಸ್ಟ್ ಲಿಸ್ಟ್, ಹನುಮಂತನ ಜತೆ ಟಿಕ್ ಟಾಕ್ ಶೂರರು!
ಇನ್ನು ಎಲ್ಲಿಯೂ ಸ್ಪರ್ಧಿಗಳ ವಿಚಾರವನ್ನು ರಿವೀಲ್ ಮಾಡದೇ ಸಸ್ಪೆನ್ಸ್ ಕ್ರಿಯೇಟ್ ಮಾಡಿರುವ ಬಿಬಿ ತಂಡ ರವಿ ಬೆಳಗೆರೆ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಕೆಲ ಮೂಲಗಳ ಪ್ರಕಾರ ತಿಳಿದು ಬಂದಿದೆ ಆದರೆ ಅದು ಸ್ಪರ್ಧಿಯಾಗಲ್ಲ ವೈಲ್ಡ್ ಕಾರ್ಡ್ ಎಂಟ್ರಿ ಆಗಿ ಏಳು ದಿನಗಳ ಕಾಲ ಇರಲಿದ್ದಾರೆ ಎಂಬ ಮಾತಿದೆ. ಈ ಹಿಂದೆ ಬಿಗ್ ಬಾಸ್ ಸೀಸನ್- 3ರಲ್ಲಿ ರವಿ ಬೆಳಗೆರೆ ಪುತ್ರಿ ಭಾವನಾ ಬೆಳಗೆರೆ ಸ್ಪರ್ಧಿಸಿದ್ದು 10 ವಾರಗಳ ಕಾಲ ಮನೆಯಲ್ಲಿದ್ದರು. ರವಿ ಬೆಳಗೆರೆ ಎಂಟ್ರಿ ಕುತೂಹಲ ಮೂಡಿಸಿದೆ.
ಸದ್ಯದಲ್ಲೇ ಶುರುವಾಗಲಿದೆ ಬಿಗ್ ಬಾಸ್ ಅಬ್ಬರ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.