'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದವರನ್ನು ನೆನೆದ ಅಂತಾರಾಷ್ಟ್ರೀಯ ವಾಹಿನಿ!

Published : Sep 29, 2019, 10:52 AM IST
'ಮಾಸ್ತಿಗುಡಿ' ದುರಂತದಲ್ಲಿ ಸಾವಿಗೀಡಾದವರನ್ನು ನೆನೆದ ಅಂತಾರಾಷ್ಟ್ರೀಯ ವಾಹಿನಿ!

ಸಾರಾಂಶ

  'ಮಾಸ್ತಿಗುಡಿ' ದುರಂತವನ್ನು ಸ್ಯಾಂಡಲ್ ವುಡ್ ಎಂದೂ ಮರೆಯಲು ಸಾಧ್ಯವಿಲ್ಲ. ಬಾಡಿ ಬಿಲ್ಡರ್‌ಗಳಾಗಿ ಚಿತ್ರರಂಗದ ಬಗ್ಗೆ ದೊಡ್ಡ ಕನಸು ಹೊತ್ತು ಬಂದಿದ್ದ ಅನಿಲ್ ಮತ್ತು ಉದಯ್ ದುರಂತ ಸಾವನ್ನು ಕಂಡರು. ಅವರ ಸಾವಿನ ದಿನವನ್ನು ಅಂತರಾಷ್ಟ್ರೀಯ ಮಾಧ್ಯಮ ನೆನೆದಿದೆ.

 

ಕನ್ನಡ ಚಿತ್ರರಂಗದಲ್ಲೇ ಬ್ಲಾಕ್ ಬಸ್ಟರ್ ಸಿನಿಮಾ ಆಗಬೇಕಿದ್ದ ‘ಮಾಸ್ತಿಗುಡಿ’ ಶೂಟಿಂಗ್‌ ವೇಳೆ ನಡೆದ ಅವಘಡದಿಂದ ಚಿತ್ರವೇ ಮಗುಚಿಕೊಂಡು ಬಿತ್ತು. ಘಟನೆ ನಡೆದು ಸುಮಾರು ಮೂರು ವರ್ಷ ಆದರೂ ಸಾವಿಗೆ ನ್ಯಾಯವೂ ಸಿಗದೇ ಪರಿಹಾರವೂ ಸಿಗದೇ ವಿಚಾರ ಅಲ್ಲಿಗೆ ನಿಂತಿತ್ತು.

ಪಾರ್ಕಿಂಗ್ ವಿಚಾರಕ್ಕೆ ಸ್ಯಾಂಡಲ್ ವುಡ್ ನಟನೊಬ್ಬನಿಂದ ಮಾರಣಾಂತಿಕ ಹಲ್ಲೆ

 

2017 ನವೆಂಬರ್ 17 ರಂದು ತಿಪ್ಪಗೊಂಡನಹಳ್ಳಿಯಲ್ಲಿ ನಡೆಯುತ್ತಿದ್ದ ಕ್ಲೈಮ್ಯಾಕ್ಸ್ ಸೀನ್ ವೇಳೆ (ಹೆಲಿಕಾಪ್ಟರ್ ನಿಂದ ನೀರಿಗೆ ಜಿಗಿಯುವ ಸನ್ನಿವೇಶವಿದ್ದು) ಯಾವುದೇ ಲೈಫ್‌ ಜಾಕೆಟ್‌ ಬಳಸದೇ ಸಾಹಸಕ್ಕೆ ಮುಂದಾಗಿದ್ದೇ ದುರಂತಕ್ಕೆ ಕಾರಣವಾಯಿತು. ಇವರೊಂದಿಗಿದ್ದ ನಟ ದುನಿಯ ವಿಜಯ್ ಪ್ರಾಣಾಪಾಯದಿಂದ ಪಾರಾದರು.

ಪ್ರೀತಿ ನಿರಾಕರಿಸಿದ ಸ್ನೇಹಿತ: ಗಂಡ-ಮಕ್ಕಳನ್ನು ನೋಡದೇ ಆತ್ಮಹತ್ಯೆಗೆ ಶರಣಾದ ಹುಚ್ಚು ಹೆಣ್ಮಗಳು

ಈ ದುರಂತವನ್ನು ನೆನೆದು ಅಂತರಾಷ್ಟ್ರೀಯ ವಾಹಿನಿ ಅಲ್ ಜಜೀರಾ ಇದರ ಬಗ್ಗೆ ' ದಿ ಸ್ಟಂಟ್ ಮ್ಯಾನ್ ಆಫ್ ಬಾಲಿವುಡ್‌' ಎಂಬ ಕಾರ್ಯಕರ್ಮದಲ್ಲಿ ಪ್ರಸಾರ ಮಾಡಿತ್ತು. ಕೆಲ ತಿಂಗಳ ಹಿಂದೆ ಅಲ್ ಜಜೀರಾ ತಂಡವು ಬೆಂಗಳೂರಿನ ಅನಿಲ್ ನಿವಾಸಕ್ಕೆ ಭೇಟಿ ನೀಡಿದ್ದು ಅವರ ತಾಯಿ ಹಾಗೂ ಸಹೋದರ ಬಾಲಾಜಿ ಅವರನ್ನು ಮಾತನಾಡಿಸಿದೆ.

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

"ಅದು ಭಯಾನಕ, ನೋವಿನ ಕ್ಷಣವಾಗಿತ್ತು": ಕಾರು ಅಪಘಾತದ ಬಗ್ಗೆ ಮೌನ ಮುರಿದ 'ದಿಲ್‌ಬರ್' ಬೆಡಗಿ ನೋರಾ ಫತೇಹಿ
BBK 12: ಪಿತ್ತ ನೆತ್ತಿಗೇರಿತು; ಇದು ಸರಿಯಲ್ಲ ಎಂದು ಅಶ್ವಿನಿ ಗೌಡಗೆ ವಾರ್ನಿಂಗ್‌ ಕೊಟ್ಟ Kiccha Sudeep