
ಅಬ್ಬಬ್ಬಾ! ಅಕ್ಷಯ್ ಕುಮಾರ್ ಅಂದ್ರೆನೇ ಹಾಗೆ ನೋಡೋಕೆ ತುಂಬಾ ಸಿಂಪಲ್ ಆದರೆ ಮಾಡೋದೆಲ್ಲಾ ಎವರ್ ಗ್ರೀನ್ ಕೆಲಸಗಳು, ಪಾತ್ರಗಳು. ನವರಾತ್ರಿ ಹಬ್ಬದಂದು ದುರ್ಗಾ ಮಾತೆಯ ಮುಂದೆ ಮಂಗಳ ಮುಖಿಯಾಗಿ ನಿಂತಿರುವ ಫೋಟೋವೊಂದನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಹೌಸ್‌ಫುಲ್ 4ನಲ್ಲಿ ಡಿಫರೆಂಟ್ ಅಕ್ಷಯ್ ಕುಮಾರ್!
ಅಕ್ಷಯ್ ಕುಮಾರ್ ಅಭಿನಯದ 'ಲಕ್ಷ್ಮಿ ಬಾಂಬ್' ಚಿತ್ರದ ಪೋಸ್ಟರ್ ಇದಾಗಿದೆ. ತಮಿಳು ಬ್ಲಾಕ್ ಬಸ್ಟರ್ ಹಿಟ್ ಚಿತ್ರವಾದ 'ಕಾಂಚನಾ' ಚಿತ್ರದಲ್ಲಿ ರಾಘವ ಲಾರೆನ್ಸ್ ಅಭಿನಯಿಸಿದ್ದು ಅದೇ ಸಿನಿಮಾವೀಗ ಹಿಂದಿಯಲ್ಲಿ 'ಲಕ್ಷ್ಮಿ ಬಾಂಬ್' ಎಂದು ರಿಮೇಕ್ ಆಗುತ್ತಿದ್ದು ರಾಘವ್ ಲಾರೆನ್ಸ್ ಅವರೇ ಇದಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ.
ಪಿ.ವಿ ಸಿಂಧು ಬಯೋಪಿಕ್; ಪುಲ್ಲೇಲ ಪಾತ್ರಕ್ಕೆ ಬಾಲಿವುಡ್ ಹೀರೋ!
‘ಕಾಂಚನಾ’ ಚಿತ್ರವೂ ಈಗಾಗಲೇ ಕನ್ನಡದಲ್ಲಿ 'ಕಲ್ಪನಾ' ಎಂದು ರಿಲೀಸ್ ಆಗಿದ್ದು ಉಪೇಂದ್ರ ಹಾಗೂ ಸಾಯಿ ಕುಮಾರ್ ಅಭಿನಯಿಸಿದ್ದರು.
ನವರಾತ್ರಿ ಪ್ರಯುಕ್ತ ಫೋಟೋ ಶೇರ್ ಮಾಡಿಕೊಂಡ ಅಕ್ಷಯ್ ' ನವರಾತ್ರಿಯಲ್ಲಿ ದೇವಿಯ 9 ಅವತಾರಗಳನ್ನು ಆಚರಿಸುತ್ತೇವೆ. ಆಕೆಗೆ ತಲೆ ಬಾಗಿದರೆ ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಇದೆ. ಈ ಸಿನಿಮಾದಲ್ಲಿ ನಾನು ಲಕ್ಷ್ಮೀ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಈ ಪಾತ್ರದ ಬಗ್ಗೆ ನಾನು ಎಕ್ಸೈಟ್ ಆಗಿದ್ದೇನೆ. ಜೊತೆಗೆ ಭಯವೂ ಇದೆ. ಜೀವನ ಶುರುವಾಗುವುದೇ ನಾನು ನಮ್ಮ ಕಂಫರ್ಟ್ ಝೋನ್‌ಯಿಂದ ಹೊರ ಬಂದಾಗ #LakshmiBomb' ಎಂದು ಬರೆದುಕೊಂಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.