
ಬೆಂಗಳೂರು (ಆ.21) ಗ್ಲೋಬಲ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಅಭಿಯನದ ಟಾಕ್ಸಿಕ್ ಸಿನಿಮಾ ಆಗಸ್ಟ್ 26ಕ್ಕೆ ತೆರೆ ಕಾಣುತ್ತಿದೆ. ಈಗಾಗಲೇ ಟಾಕ್ಸಿಕ್ ಸಿನಿಮಾ ಕುರಿತು ಕುತೂಹಲ ಹೆಚ್ಚಾಗಿದೆ. ವಿಶೇಷ ಅಂದರೆ ಹಾಲಿವುಡ್‌ನಲ್ಲೂ ಭಾರಿ ಕುತೂಹಲ ಕೆರಳಿಸಿದೆ. ಕನ್ನಡ ಸೇರಿದಂತೆ ಭಾರತೀಯ ಭಾಷೆಗಳ ಜೊತೆಯಲ್ಲಿ ಹಾಲಿವುಡ್ ಟ್ರೇಲರ್ ಕೂಡ ರಿಲೀಸ್ ಮಾಡಲಾಗಿದೆ. ಯಶ್ ಸ್ಟೈಲ್, ಸ್ವಾಗ್ ಕುರಿತು ಚರ್ಚೆಗಳು ನಡೆಯುತ್ತಿದೆ. ಇದೇ ವೇಳೆ ಯಶ್ ಕಾರು ಕಲೆಕ್ಷನ್ ಚರ್ಚೆಯಾಗುತ್ತಿದೆ. ಟಾಕ್ಸಿಕ್ ಸಿನಿಮಾ ನಟನೆ, ನಿರ್ಮಾಣದಲ್ಲೇ ಮುಳುಗಿ ಹೋಗಿದ್ದ ಯಶ್ ಬಳಿ ರೇಂಜ್ ರೋವರ್‌ನಿಂದ ಹಿಡಿದ ಲೆಕ್ಸಸ್ LX ಕಾರು ಸೇರಿದಂತೆ 10 ಕೋಟಿ ರೂಪಾಯಿಗೂ ಅಧಿಕ ಕಾರು ಸಂಗ್ರಹವಿದೆ.
ಯಶ್ ಬಳಿ ಹಲವು ಐಷಾರಾಮಿ ಹಾಗೂ ದುಬಾರಿ ಕಾರುಗಳಿವೆ. ಈ ಪೈಕಿ ರೇಂಜ್ ರೋವರ್ ಆಟೋಬಯೋಗ್ರಫಿ ದುಬಾರಿ ಕಾರು. ಇದರ ಬೆಲೆ ಸುಮಾರು 4.38 ಕೋಟಿ ರೂಪಾಯಿ. ಕುಟುಂಬದ ಜೊತೆ ಪ್ರಯಾಣಿಸುವಾಗ ಯಶ್ ಇದೇ ಕಪ್ಪು ಬಣ್ಣದ ರೇಂಜ್ ರೋವರ್ ಆಟೋಬಯೋಗ್ರಫಿ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಶೂಟಿಂಗ್ ಸೇರಿದಂತೆ ಆಫ್ ರೋಡ್ ಪ್ರಯಾಣ, ಸುದೀರ್ಘ ಪ್ರಯಾಣಕ್ಕೆ ಅನುಕೂಲವಾಗು ಲೆಕ್ಸಸ್ LX ಕಾರು ಯಶ್ ಬಳಿ ಇದೆ. ಇದರ ಬೆಲೆ ಸುಮಾರು 2.82 ಕೋಟಿ ರೂಪಾಯಿ. ಇತ್ತ ಮರ್ಸಿಡೀಸ್ ಬೆಂಜ್‌ನ ಎರಡು ಕಾರುಗಳು ಯಶ್ ಬಳಿ ಇವೆ. ಮರ್ಸಿಡೀಸ್ ಬೆಂಜ್ GLC 250d ಹಾಗೂ ಮರ್ಸಿಡೀಸ್ ಬೆಂಜ್ GLC 350d ಕಾರುಗಳು ಯಶ್ ಬಳಿ ಇವೆ. ಇದರ ಬೆಲೆ ಸುಮಾರು 1.5 ಕೋಟಿ ರೂಪಾಯಿ. ಇದೇ ವೇಳೆ ಪತ್ನಿ ರಾಧಿಕಾ ಪಂಡಿತ್‌ಗೆ ಆಡಿ ಕಾರು ಉಡುಗೊರೆಯಾಗಿ ನೀಡಿದ್ದಾರೆ.
ಬಹುತೇಕ ಸೆಲೆಬ್ರೆಟಿಗಳ ಬಳಿ ಇರುವ ಯೋಟೋಟಾ ವೆಲ್‌ಫೈರ್ ಕಾರು ಕೂಡ ಯಶ್ ಬಳಿ ಇವೆ. ಹಲವು ಬಾರಿ ಏರ್‌ಪೋರ್ಟ್‌ಗಳಲ್ಲಿ ಕಾಣಿಸಿಕೊಳ್ಳುವಾಗ ಯಶ್ ಇದೇ ಕಾರಿನ ಮೂಲಕ ಬಂದಿಳಿದಿದ್ದಾರೆ. ಹೆಚ್ಚು ವಿಶಾಲವಾದ ಕ್ಯಾಬಿನ್ ಇರುವ ಕಾರು ಹಲವು ಸೆಲೆಬ್ರೆಟಿಗಳು ವೆಲ್‌ಫೈರ್ ಕಾರನ್ನು ಕ್ಯಾರವಾನ್ ಆಗಿ ಬಳಸುತ್ತಾರೆ. ಸುದೀರ್ಘ ಪ್ರಯಾಣಕ್ಕೂ ಇದು ಉತ್ತಮ ಕಾರಾಗಿದೆ. ಟೊಯೋಟಾ ವೆಲ್‌ಫೈರ್ ಕಾರಿನ ಬೆಲೆ ಸುಮಾರು 1.22 ಕೋಟಿ ರೂಪಾಯಿ.
ಕೆಜಿಎಫ್ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆದ ಯಶ್ ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಇದೀಗ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದಲ್ಲೂ ಯಶ್ ನಿರ್ಮಾಣ ಸಂಸ್ಥೆ ಪಾಲುದಾರಿಕೆ ಹೊಂದಿದೆ. ಸಿನಿಮಾದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಯಶ್ ಭಾರತದೆಲ್ಲೆಡೆ ಅಭಿಮಾನಿ ಬಳಗ ಹೊಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.