Toxic Countdown Day 05: ಟಾಕ್ಸಿಕ್ ಕೌಂಟ್‌ಡೌನ್ 05.. ಯಶ್ 'ಟಾಕ್ಸಿಕ್' ಕ್ರೇಜ್ ದೇಶ-ವಿದೇಶಗಳಲ್ಲಿ ಹೇಗಿದೆ? ಈ ಸ್ಪೆಷಲ್‌ ಸ್ಟೋರಿ ನೋಡಿ!

Published : Aug 21, 2026, 12:12 PM IST
Yash Toxic

ಸಾರಾಂಶ

ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿರುವ ಬೆಂಗಳೂರಿನ ಬಹಳಷ್ಟು ಥಿಯೇಟರ್‌ಗಳಲ್ಲಿ ಯಶ್ ಅವರ ಭಾರೀ ಎತ್ತರದ ಕಟೌಟ್‌ಗಳು ನಿರ್ಮಾಣ ಆಗಿವೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ.

Yash Toxic Release Date-Rocking Star Yash-Toxic Movie Countdown 05: ಯಶ್‌ ನಟನೆಯ ಟಾಕ್ಸಿಕ್ ಸಿನಿಮಾ ಕೌಂಟ್‌ಡೌನ್ 05; ಟಾಕ್ಸಿಕ್ ಕ್ರೇಜ್ ದೇಶ-ವಿದೇಶಗಳಲ್ಲಿ ಹೇಗಿದೆ?

ಕನ್ನಡದ ಪ್ಯಾನ್ ಇಂಡಿಯಾ ನಟ ರಾಕಿಂಗ್ ಸ್ಟಾರ್ ನಟನೆ-ನಿರ್ಮಾಣದ 'ಟಾಕ್ಸಿಕ್' ಸಿನಿಮಾ ಬಿಡುಗಡೆಯ ಕೌಂಟ್‌ಡೌನ್ ಗೊತ್ತೇ ಇದೆ. ಇನ್ನು ಕೇವಲ 05 ದಿನಗಳಷ್ಟೇ ಬಾಕಿ ಈ ಸಿನಿಮಾ ತೆರೆಯ ಮೇಲೆ ರಾರಾಜಿಸಲು! ಹೌದು, ಯಶ್ ನಟನೆಯ ಟಾಕ್ಸಿಕ್ ಸಿನಿಮಾ ಇದೇ ತಿಂಗಳು, ಅಂದರೆ 26 ಆಗಸ್ಟ್ 2026ರಂದು ಬಿಡುಗಡೆ ಆಗುತ್ತಿದೆ. ಜಗತ್ತಿನಾದ್ಯಂತ ಬಿಡುಗಡೆ ಆಗಲಿರುವ ಈ ಸಿನಿಮಾ ಬರೋಬ್ಬರಿ 12000ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ತೆರೆಕಾಣಲಿದ್ದು. ಉತ್ತರ ಅಮೆರಿಕಾ ಒಂದರಲ್ಲೇ 2000 ಸ್ಕ್ರೀನ್‌ನಲ್ಲಿ ಬಿಡುಗಡೆ ಆಗಲಿದೆ.

ಯಶ್ ನಟನೆ, ಗೀತು ಮೋಹನ್‌ ದಾಸ್ ನಿರ್ದೇಶನದ ಟಾಕ್ಸಿಕ್ ಸಿನಿಮಾ ಇಡೀ ಜಗತ್ತಿಗೇ ಭಾರೀ ನಿರೀಕ್ಷೆ ಹುಟ್ಟಿಸಿದೆ. ಈ ಸಿನಿಮಾ ಹಾಲಿವುಡ್ ರೇಂಜ್‌ನ ಮೇಕಿಂಗ್ ಹಾಗೂ ರಿಚ್‌ನೆಸ್ ಮೂಲಕ ಮೂಡಿಬಂದಿದ್ದು, ಇಡೀ ಸಿನಿಮಾದ ಜಾಗತಿಕ ಮಟ್ಟದಲ್ಲಿ ಬಿಡುಗಡೆ ಕಾಣುತ್ತಿದೆ. ಈ ಮೂಲಕ ಕನ್ನಡದ ಚಿತ್ರವೊಂದು ಪ್ಯಾನ್ ವರ್ಲ್ಡ್ ಸಿನಿಮಾ ಆಗಿದ್ದು, ಸ್ಯಾಂಡಲ್‌ವುಡ್ ಹಾಗೂ ಕನ್ನಡ ಸಿನಿಪ್ರೇಕ್ಷಕರ ಪಾಲಿಗೆ ಹೊಸ ಭರವಸೆ ಹಾಗೂ ಹೆಮ್ಮೆ ಮೂಡಿಸಿದೆ. ಟಾಕ್ಸಿಕ್ ಚಿತ್ರವು ಕರ್ನಾಟಕ ಸೇರಿದಂತೆ ಭಾರತದ ಎಲ್ಲಾ ರಾಜ್ಯಗಳಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ.

ಟಾಕ್ಸಿಕ್ ಸಿನಿಮಾ ಬಿಡುಗಡೆ ಆಗಲಿರುವ ಬೆಂಗಳೂರಿನ ಬಹಳಷ್ಟು ಥಿಯೇಟರ್‌ಗಳಲ್ಲಿ ಯಶ್ ಅವರ ಭಾರೀ ಎತ್ತರದ ಕಟೌಟ್‌ಗಳು ನಿರ್ಮಾಣ ಆಗಿವೆ. ಕನ್ನಡದ ರಾಕಿಂಗ್ ಸ್ಟಾರ್ ಯಶ್ ಅವರ ಅಭಿಮಾನಿಗಳು ಸೇರಿದಂತೆ ಎಲ್ಲರೂ ಈ ಸಿನಿಮಾ ಬಿಡುಗಡೆಗೆ ಕಾಯುತ್ತಿದ್ದು, ಆ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿದ್ದಾರೆ. 600 ಕೋಟಿ ಬಜೆಟ್ (ಮೇಕಿಂಗ್-ಪ್ರಚಾರ ವೆಚ್ಚ) ಮೂಲಕ ನಿರ್ಮಾಣ ಆಗಿರುವ ಯಶ್ ಅವರ ಟಾಕ್ಸಿಕ್ ಸಿನಿಮಾ, ಇದೀಗ ಸಾಕಷ್ಟು ಕ್ಯೂರಿಯಾಸಿಟಿ ಹುಟ್ಟಿಸುತ್ತಿದೆ.

ಒಟ್ಟಿನಲ್ಲಿ, ಯಶ್ ನಟನೆ-ನಿರ್ಮಾಣದ ಟಾಕ್ಸಿಕ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದ್ದು, ಇನ್ನು ಕೇವಲ 05 ದಿನಗಳಷ್ಟೇ ಬಾಕಿ! ನಾಳೆ 04ಕ್ಕೆ ಇಳಿಯಲಿರುವ ಟಾಕ್ಸಿಕ್ ಕೌಂಟ್‌ಡೌನ್, 26ನೇ ದಿನಾಂಕದಿಂದು ನಿಮ್ಮ ಕಣ್ಣಮುಂದೆ ಕಾಣಿಸಲಿದೆ. ಅಲ್ಲೀತನಕ ದಿನವೂ ನಮ್ಮ ಕಡೆಯಿಂದ ಟಾಕ್ಸಿಕ್ ಸಿನಿಮಾದ ಡೈಲಿ ಅಪ್‌ಡೇಟ್ ಕೌಂಟ್‌ಡೌನ್ ಸ್ಟೋರಿ ನಿಮಗೆ ಸಿಗಲಿದೆ. ಪ್ರತಿದಿನದ ಅಪ್‌ಡೇಟ್‌ಗಾಗಿ 'ಏಷ್ಯಾನೆಟ್ ಸುವರ್ಣ ನ್ಯೂಸ್ ಡಿಜಿಟಲ್' ನೋಡ್ತಾ ಇರಿ..

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಇಷ್ಟೂ ದಿನ ಮುಚ್ಚಿಟ್ಟಿದ್ದ 'ತ್ರಿಷಾ ಸೀಕ್ರೆಟ್' ಕೊನೆಗೂ ಹೊರಬಂತು.. 'ಎಲ್ಲದಕ್ಕೂ ಅದೇ ಕಾರಣ, ಇನ್ನೇನಿಲ್ಲ!
Jagame Sangeetham: OTT ಗೆ ಬರ್ತಿದೆ ಸುಶ್ಮಿತಾ ಕೊನಿಡೆಲಾ ನಿರ್ಮಾಣದ ಸೀರೀಸ್; ವಿಶೇಷ ಪಾತ್ರದಲ್ಲಿ ಪ್ರಕಾಶ್ ರಾಜ್, ಯಾವಾಗ, ಎಲ್ಲಿ?