₹ 27 ಲಕ್ಷದ ಶೂ ಕಂಡು ಹೌಹಾರಿದ ರಿಷಿ ಕಪೂರ್‌

Published : Jun 30, 2019, 08:23 AM IST
₹ 27 ಲಕ್ಷದ ಶೂ ಕಂಡು ಹೌಹಾರಿದ ರಿಷಿ ಕಪೂರ್‌

ಸಾರಾಂಶ

ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿ ಕಪೂರ್ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದಿದ್ದು, ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ನ್ಯೂಯಾರ್ಕ್‌ನಲ್ಲಿ ರಿಷಿ ಕಪೂರ್ ಕಂಡ ದುಬಾರಿ ಶೂ ಬಗ್ಗೆ ಹೇಳಿದ್ದೇನು..? ನೀವೇ ನೋಡಿ...

ನವದೆಹಲಿ[ಜೂ.30]: ಸ್ಟೈಲಿಷ್‌ ಆಗಿರುವ ಶೂ ಹಾಕಬೇಕೆಂಬ ಮನಸ್ಸುಳ್ಳವರು ಅದಕ್ಕಾಗಿ ಹೋದಲೆಲ್ಲಾ ಶೋಧಿಸುತ್ತಾರೆ. ಅದೇ ರೀತಿ ಬಾಲಿವುಡ್‌ ನಟ ರಿಷಿ ಕಪೂರ್‌ ಅವರು ಇತ್ತೀಚೆಗೆ ಅಮೆರಿಕ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ಬರೋಬ್ಬರಿ 27 ಲಕ್ಷ ರುಪಾಯಿ ಮೌಲ್ಯದ ಸ್ಟೈಲಿಶ್‌ ಶೂ ಕಂಡು ಆಶ್ಚರ್ಯಗೊಂಡಿದ್ದಾಗಿ ಹೇಳಿಕೊಂಡಿದ್ದಾರೆ. 

ರಿಷಿ ಕಪೂರ್‌ ಬಹುತೇಕ ಕ್ಯಾನ್ಸರ್‌ ಮುಕ್ತ

ಈ ಬಗ್ಗೆ ಟ್ವೀಟ್‌ ಮಾಡಿರುವ ನಟ ರಿಷಿ ಕಪೂರ್‌ ಅವರು, ಇತ್ತೀಚೆಗೆ ನ್ಯೂಯಾರ್ಕ್‌ನ  ಶೂ ಅಂಗಡಿಯೊಂದರಲ್ಲಿ ಬಣ್ಣ-ಬಣ್ಣದ ಮತ್ತು ವಿವಿಧ ರೀತಿಯ ಶೂಗಳನ್ನು ನೋಡಿದೆ. ಅವುಗಳ ಬೆಲೆ 5000 ಡಾಲರ್‌(3 ಲಕ್ಷ ರು.)ನಿಂದ ಹಿಡಿದು 40,000 ಡಾಲರ್‌(27 ಲಕ್ಷ ರು.)ವರೆಗೂ ಇದೆ’ ಎಂದು ಹೇಳಿದ್ದಾರೆ. 

ಅಲ್ಲದೆ, ಈ ಶೂ ಮಳಿಗೆಯಲ್ಲಿ 12 ಸಾವಿರ ರೀತಿಯ ಶೂಗಳಿದ್ದು, ಅತಿದೊಡ್ಡ ಶೂ ಮಳಿಗೆಯಾಗಿದೆ ಎಂದಿದ್ದಾರೆ. ಇದರ ಜೊತೆಗೆ, ಶೂ ಮಳಿಗೆಯಲ್ಲಿರುವ ಶೂಗಳ ಫೋಟೋಗಳನ್ನು ಶೇರ್‌ ಮಾಡಿದ್ದಾರೆ.
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

Toxic: ಯಶ್‌ಗಿಂತ ಯಾರು ದೊಡ್ಡವರು, ಯಾರು ಚಿಕ್ಕವರು? ಇಲ್ಲಿದೆ 5 ಹೀರೋಯಿನ್‌ಗಳ ಅಸಲಿ ವಯಸ್ಸು!
Hrithik Roshan Sussanne Khan Divirce Secret: ಆ 400 ಕೋಟಿ ಸೀಕ್ರೆಟ್ ಈಗ ಬಯಲಾಯ್ತು; ಹೃತಿಕ್-ಸುಸೇನ್ ಡಿವೋರ್ಸ್ ಕೇಸ್‌ನಲ್ಲಿ ನಿಜವಾಗಿ ನಡೆದಿದ್ದೇನು?