ಬೆಲ್‌ಬಾಟಂ ಟ್ರೇಲರ್ರೇ ಹಿಂಗೆ, ಸಿನಿಮಾ ಇನ್ಹೆಂಗೋ...!

By Web DeskFirst Published Jan 11, 2019, 11:58 AM IST
Highlights

ರೆಟ್ರೋ ಲುಕ್‌ನಲ್ಲಿ ಭಾರೀ ಸದ್ದು ಮಾಡುತ್ತಿದೆ ಬೆಲ್ ಬಾಟಂ | ರೆಟ್ರೋ ಸ್ಟೈಲ್‌ನಲ್ಲಿ ಹರಿಕತೆ ತೋರಿಸಿದ್ಧಾರೆ ರಿಷಬ್ ಶೆಟ್ಟಿ | ಟ್ರೇಲರ್‌ಗೆ ಸಿಕ್ತು ಭಾರೀ ಪ್ರತಿಕ್ರಿಯೆ 

ಬೆಂಗಳೂರು (ಜ. 11): ರೆಟ್ರೋ ಸಾಂಗ್‌ ಮಾಡಿ ಬಿಡುಗಡೆ ಮಾಡಿದ್ದ ‘ಬೆಲ್‌ ಬಾಟಂ’ ಚಿತ್ರತಂಡಕ್ಕೆ ಒಳ್ಳೆಯ ಪ್ರತಿಕ್ರಿಯೆ ಪ್ರೇಕ್ಷಕ ವರ್ಗದಿಂದ ಸಿಕ್ಕಿತ್ತು. ಇದೇ ಖುಷಿಯಲ್ಲಿ 80ರ ದಶಕದ ಪ್ರಾಡಕ್ಟ್ಗಳನ್ನು ಬಳಸಿಕೊಂಡು ಮತ್ತದೇ ರೆಟ್ರೋ ಸ್ಟೈಲ್‌ನ ಜಾಹೀರಾತು ಪೋಸ್ಟರ್‌ಗಳನ್ನು ಮಾಡಿ ಸೋಷಲ್‌ ಮೀಡಿಯಾದಲ್ಲಿ ಹರಿಯಬಿಟ್ಟು ಅದಕ್ಕೂ ಬಹಳ ಒಳ್ಳೆಯ ರೆಸ್ಪಾನ್ಸ್‌ ಗಿಟ್ಟಿಸಿತ್ತು.

ಸಿಕ್ಕಾಪಟ್ಟೆ ಹಾಟ್ ಆಗಿದೆ ರಿಷಬ್ ಶೆಟ್ಟಿ-ಹರಿಪ್ರಿಯಾ ರೊಮ್ಯಾನ್ಸ್!

ಈಗ ಚಿತ್ರದ ಟ್ರೇಲರ್‌ ಮಾತು. ಯೂಟ್ಯೂಬ್‌ಗೆ ಟ್ರೇಲರ್‌ ಅಪ್‌ಲೋಡ್‌ ಆಗಿ ಒಂದು ದಿನವಾಗಿದೆ ಅಷ್ಟೇ, ಆಗಲೇ ಮೂರು ಲಕ್ಷದ ಹತ್ತಿರ ಹತ್ತಿರ ವೀವ್ಸ್ ಆಗಿದೆ. ಅದಕ್ಕೆ ಕಾರಣ ಮತ್ತದೇ ರೆಟ್ರೋ ಸ್ಟೈಲ್‌ನಲ್ಲಿ ಹರಿಕತೆಯನ್ನು ಕ್ಯಾಚಿಯಾಗಿ ಬಳಕೆ ಮಾಡಿಕೊಂಡಿರುವುದು.

 

 

ಕನ್ನಡದ ಮಟ್ಟಿಗೆ ಇದೊಂದು ವಿನೂತನ ಪ್ರಯತ್ನ. ಇಡೀ ಟ್ರೇಲರ್‌ ಹಿಂದೆ ಹರಿಕತೆಯ ಗಂಧ ತುಂಬಿದೆ. ಅದೇ ಭಾಷೆಯಲ್ಲಿ ಇಡೀ ಚಿತ್ರದ ಹಿಂಟ್‌ ಅನ್ನು ಕಟ್ಟಿಕೊಟ್ಟು ಏನೋ ಇದೆ ಇಲ್ಲಿ ಎಂದು ಪ್ರೇಕ್ಷಕ ಅಂದುಕೊಳ್ಳುವಂತೆ ಮಾಡುವಲ್ಲಿ ‘ಬೆಲ್‌ ಬಾಟಂ’ ಚಿತ್ರತಂಡ ಗೆದ್ದಿದೆ.

ಟ್ರೇಲರ್‌ ಬಿಡುಗಡೆ ಪ್ರಯುಕ್ತ ಮಾಧ್ಯಮಗಳ ಮುಂದೆ ಬಂದ ಚಿತ್ರತಂಡಕ್ಕೆ ಇನ್ನೇನು ತೆರೆಗೆ ಬರುವ ತವಕವಿದೆ. ಆದರೆ ಅದಕ್ಕಿನ್ನೂ ಮುಹೂರ್ತ ಕೂಡಿಬಂದಿಲ್ಲ. ಜನವರಿ ಅಂತ್ಯ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ತೆರೆಗೆ ಬರಲಿದೆ ಚಿತ್ರ.

ಯೋಗರಾಜ್‌ ಭಟ್ರು, ’ಬೆಲ್‌ ಬಾಟಂ’, ಮರಕುಟುಕ ಗೆಟಪ್ಪು, ಏನಿದು ಹೊಸ ಲುಕ್?

ನಿರ್ದೇಶಕ ಜಯತೀರ್ಥ ಮಾತಿಗೆ ನಿಂತು ‘80ರ ದಶಕದಲ್ಲಿ ಇದ್ದ ಎಲ್ಲಾ ರೀತಿಯ ಮನರಂಜನಾ ಅಂಶಗಳನ್ನು ಚಿತ್ರದಲ್ಲಿ ಅಳವಡಿಸಿಕೊಂಡಿದ್ದೇವೆ. ಟ್ರೇಲರ್‌ ಎಷ್ಟುಫನ್ನಿಯಾಗಿದೆಯೋ ಅಷ್ಟೇ ಕುತೂಹಲ ಹೊಂದಿದೆ. ಹಾಡುಗಳು, ಪೋಸ್ಟರ್‌ಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು ನಮ್ಮ ಜವಾಬ್ದಾರಿ ಹೆಚ್ಚಿಸಿತ್ತು. ಅದಕ್ಕೆ ತಕ್ಕಂತಹ ಟ್ರೇಲರ್‌ ಮಾಡಬೇಕು ಎಂದು ಸಾಕಷ್ಟುಭಿನ್ನ ಪ್ರಯತ್ನಗಳ ಮೂಲಕ ಟ್ರೇಲರ್‌ ತಂದಿದ್ದೇವೆ’ ಎಂದು ಹೇಳಿಕೊಂಡರು.

ಇನ್ನು ಟ್ರೇಲರ್‌ ರೂಪಿಸುವ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹಾಕಿಕೊಂಡಿದ್ದು ರಿಷಬ್‌ ಶೆಟ್ಟಿ. ‘ನಿರ್ದೇಶಕರು ಟ್ರೇಲರ್‌ ಅನ್ನು ವಿಭಿನ್ನವಾಗಿ ತಯಾರು ಮಾಡಿ ಎಂದು ಹೇಳಿದಾಗ ನಾವು ಎಲ್ಲರೂ ಒಟ್ಟಾಗಿ ಸೇರಿಕೊಂಡು ಬೇರೆ ಬೇರೆ ಪ್ರಯೋಗ ಮಾಡಿದೆವು. ಸುಮಾರು 15 ರಿಂದ 20 ಪ್ರಯತ್ನಗಳು ನಮ್ಮ ಮನಸ್ಸಿಗೆ ಒಪ್ಪಿತವಾಗಲಿಲ್ಲ. ಮತ್ತೆ ಮತ್ತೆ ಪ್ರಯತ್ನ ಮುಂದುವರೆಸಿದೆವು. ಆಗ ಹರಿಕತೆಯ ಮೂಲಕ ಟ್ರೇಲರ್‌ ಮಾಡಿದರೆ ಹೇಗೆ ಎನ್ನುವ ಐಡಿಯಾ ಬಂತು, ತಕ್ಷಣ ಮಾಡಿದೆವು’ ಎಂದು ಹೇಳಿಕೊಂಡರು ರಿಷಬ್‌ ಶೆಟ್ಟಿ.

ನಟೋರಿಯಸ್ ಕಿಲ್ಲರ್ ಆದ್ರು ಯೋಗರಾಜ್ ಭಟ್ರು!

ತಮಿಳಿನಲ್ಲೂ ದಾಮೋದರನೇ

ಬಿಡುಗಡೆಗೂ ಮುನ್ನವೇ ‘ಬೆಲ್‌ ಬಾಟಂ’ ರೀಮೇಕ್‌ ರೈಟ್ಸ್‌ ತಮಿಳಿಗೆ ಹೋಗಿ, ಅಲ್ಲಿ ಸತ್ಯಶಿವ ಎನ್ನುವವರು ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಆದರೆ ಅಲ್ಲಿ ನಾಯಕ, ನಾಯಕಿ ಯಾರು ಎನ್ನುವುದು ಇನ್ನೂ ನಿರ್ಧಾರವಾಗಬೇಕಿದೆ. ಅಷ್ಟರಲ್ಲಾಗಲೇ ಇಲ್ಲಿ ಇನ್ಸ್‌ಪೆಕ್ಟರ್‌ ಪಾತ್ರ ಮಾಡಿರುವ ಪ್ರಮೋದ್‌ ಶೆಟ್ಟಿಗೆ ತಮಿಳಿನಲ್ಲೂ ಇದೇ ಪಾತ್ರ ಮಾಡುವ ಆಫರ್‌ ಸಿಕ್ಕಿದೆ.

click me!