ಬೆಂಗಳೂರು (ಜ. 08): ರಿಷಬ್ ಶೆಟ್ಟಿ- ಹರಿಪ್ರಿಯಾ ಬಹುನಿರೀಕ್ಷಿತ ಚಿತ್ರ ಬೆಲ್ ಬಾಟಂ ಚಿತ್ರದ ಮೊದಲ ಹಾಡು ರಿಲೀಸಾಗಿದೆ. ’ಏತಕೆ ಬೊಗಸೆ ತುಂಬಾ ಆಸೆ ನೀಡುವೆ...... ಹಾಡು ಸಿಕ್ಕಾಪಟ್ಟೆ ರೊಮ್ಯಾಂಟಿಕ್ ಆಗಿದೆ. ರಿಷಬ್ ಹಾಗೂ ಹರಿಪ್ರಿಯಾ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ರೊಮ್ಯಾನ್ಸ್ ಮಾಡಿದ್ದಾರೆ. 

 

ಈ ಹಾಡಿಗೆ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಇದ್ದು ಜಯತೀರ್ಥ ನಿರ್ದೇಶನವಿದೆ. ಈಗಾಗಲೇ ಈ ಹಾಡನ್ನು 10 ಲಕ್ಷ ಜನ ನೋಡಿದ್ದಾರೆ. 

ರಿಷಬ್ ಶೆಟ್ಟಿ ಚಿತ್ರ ಎಂದರೆ ಏನಾದರೂ ಸ್ಪೆಷಾಲಿಟಿ ಇದ್ದೇ ಇರುತ್ತದೆ. ಚಿತ್ರದಲ್ಲಿ ಹೊಸತನ ಇರುತ್ತದೆ. ಈಗಾಗಲೇ ರೆಟ್ರೋ ಲುಕ್ ನಲ್ಲಿ ಕಾಣಿಸಿಕೊಂಡು ಚಿತ್ರದ ಬಗ್ಗೆ ಕ್ಯೂರಿಯಾಸಿಟಿ ಮೂಡಿಸಿದ್ದಾರೆ. ಈ ಚಿತ್ರದ ಬಗ್ಗೆ ಇನ್ನೊಂದು ಖುಷಿ ವಿಚಾರ ಎಂದರೆ ಈ ಚಿತ್ರ ರಿಮೇಕ್ ಹಕ್ಕು ತಮಿಳಿಗೆ ಮಾರಾಟವಾಗಿದೆ.