ರಿಷಬ್ ಶೆಟ್ಟಿ ಫ್ಯಾಮಿಲಿ ಇರೋ ಮನೆ ಬರೀ ಮನೆಯಲ್ಲ, ಅದೊಂದು ಕಲಾಕೃತಿಯಂತಿದೆ!

Published : Oct 05, 2025, 04:02 PM ISTUpdated : Oct 06, 2025, 05:44 PM IST
Rishab Shetty Pragathi Shetty

ಸಾರಾಂಶ

‘ಕಾಂತಾರ ಚಾಪ್ಟರ್ 1’ ಎಂಬ ಅದ್ಭುತ ಮಾಂತ್ರಿಕ ಜಗತ್ತು ಕಟ್ಟಿಕೊಟ್ಟಂತಹ ಸಿನಿಮಾ ಕೊಟ್ಟು ಸಕ್ಸಸ್ ಸಂಭ್ರಮದಲ್ಲಿರುವ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರು ಸದ್ಯ ವಾಸವಿರುವ ಮನೆ ಗ್ರಾಂಡ್ ಅಲ್ಲದಿದ್ದರೂ ಅದು ಸಾಂಸ್ಕೃತಿಕ ಕಲಾಕೃತಿಯಂತಿದೆ. 

ರಿಷಬ್ ಶೆಟ್ಟಿ ವಾಸವಿರುವ ಮನೆ ಕಲೆ, ತಂತ್ರಜ್ಞಾನದ ಮೇಳ!

'ಕಾಂತಾರ: ಚಾಪ್ಟರ್ 1' ಅಕ್ಟೋಬರ್ 2, 2025 ರಂದು ಬಿಡುಗಡೆಯಾಗಿ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿರುವ ನಡುವೆಯೇ, ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರು ವಾಸವಿರುವ ಈ ಮನೆ ಕೇವಲ ಒಂದು ಕಟ್ಟಡದಂತಿಲ್ಲ, ಬದಲಿಗೆ ಅದು ಕಲೆ, ಸಂಸ್ಕೃತಿ, ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನದ ಅದ್ಭುತ ಸಂಗಮವಾಗಿದೆ. ಈ ಮನೆ, ರಿಷಬ್ ಶೆಟ್ಟಿ ಅವರ ವ್ಯಕ್ತಿತ್ವದ ಪ್ರತಿಬಿಂಬದಂತಿದೆ.

ಸಾಂಪ್ರದಾಯಿಕ ಸ್ವಾಗತ, ಸ್ಮರಣೀಯ ಒಳಾಂಗಣ:

ಆ ಮನೆಗೆ ಕಾಲಿಡುತ್ತಿದ್ದಂತೆ ಅಲ್ಲಿ ನಮಗೆ ಪಾಸಿಟಿವಿಟಿ ವೈಬ್ ಟಚ್ ಆಗುತ್ತದೆ. ಕಾರಣ, ಆ ಮನೆಯನ್ನು ಅವರು ನಿರ್ವಹಿಸಿರುವ ರೀತಿ ಆ ರೀತಿಯಲ್ಲಿದೆ. ಆ ಮನೆಯಲ್ಲಿ ಸಹಜವಾಗಿ ಎಲ್ಲ ಹಿಂದೂಗಳ ಮನೆಗಳಲ್ಲಿ ಇರುವಂತೆ ತುಳಸಿಕಟ್ಟೆ, ದೇವರ ಮನೆ ಎಲ್ಲವೂ ಸುಸಜ್ಜಿತವಾಗಿರುವುದು ಮಾತ್ರವಲ್ಲ, ಮನೆಯಲ್ಲಿ ವಾಸವಿರುವವರು ಸುಸಂಕೃತ ಕುಟುಂಬ ಎಂಬುದು ಮನದಟ್ಟಾಗುವಂತಿದೆ. 

ಕಾಂತಾರ ಸಿನಿಮಾ ನೋಡಿದ ಯಾರೇ ಆಗಲಿ, ಆ ಮನೆಯೊಳಗೆ ಹೋದರೆ, ರಿಷಬ್ ಶೆಟ್ಟಿಯವರು ಸದ್ಯ ವಾಸವಿರುವ ಆ ಮನೆಯಲ್ಲಿ ಕಾಂತಾರದ ಪಾಸಿಟಿವ್ ಎನರ್ಜಿಯ ಅನುಭವ ಆಗುತ್ತದೆ. ಅಷ್ಟರಮಟ್ಟಿಗೆ ಆ ಮನೆಯಲ್ಲಿ ಸಾಂಪ್ರದಾಯಿಕ ನೆಲೆಯಲ್ಲಿ ಸಾಕಷ್ಟು ಪೂಜೆ-ಪುನಸ್ಕಾರಗಳು ನಡೆಯುತ್ತಲೇ ಇರುತ್ತವೆ ಎನ್ನೋದು ಎಂಥವರಿಗೂ ಅರ್ಥವಾಗುವಂತಿದೆ. 

ಅಡುಗೆಮನೆ:

ಕನ್ನಡದ ಸ್ಟಾರ್ ನಟ-ನಿರ್ದೇಶಕರಾದ ರಿಷಬ್ ಶೆಟ್ಟಿಯವರು ವಾಸವಿರುವ ಆ ಮನೆಯ ಅಡುಗೆ ಮನೆ ಕೂಡ ಮೇಲ್ನೋಟಕ್ಕೆ ತುಂಬಾ ನಾರ್ಮಲ್ ಎನ್ನುವಂತಿದ್ದರೂ ಅದರೊಳಗೆ ಕೂಡ ಶಿಸ್ತು ಹಾಗೂ ಅಚ್ಚುಕಟ್ಟುತನ ಎದ್ದುಕಾಣುವಂತಿದೆ. ಶುಚಿತ್ವ ಹಾಗೂ ಚಿಕ್ಕಚಿಕ್ಕ ಸಂಗತಿಗಳಿಗೂ ಗಮನಕೊಟ್ಟು ಆ ಮನೆಯನ್ನು ರಿಷಬ್ ಶೆಟ್ಟಿಯವರ ಸಂಸಾರ ನಿರ್ವಹಿಸಿದೆ ಎಂಬುದು ಗಮನಿಸಬೇಕಾದ ಹಾಗೂ ಮೆಚ್ಚಬೇಕಾದ ಸಂಗತಿ.

ಮನೆಯ ಮೂಲೆಯನ್ನೂ ನಿರ್ವಹಿಸಿರುವ ರೀತಿಯನ್ನು ಗಮನವಿಟ್ಟು ನೋಡಿದರೆ, ಅಲ್ಲಿ ವಾಸವಿರುವ ಕುಟುಂಬ ಸಾಕಷ್ಟು ದೇವರು-ದೈವಗಳಲ್ಲಿ ನಂಬಿಕೆ ಉಳ್ಳವರು ಎಂಬುದನ್ನು ಧಾರಾಳವಾಗಿ ಹೇಳಬಹುದು. ಜೊತೆಗೆ, ಆ ಮನೆಯವರು ಸಂಸ್ಕಾರವಂತರು ಎಂಬುದು ಕೂಡ ಅರ್ಥವಾಗುವಂತಿದೆ.

ರಿಷಬ್ ಶೆಟ್ಟಿಯವರು ಸಹಜವಾಗಿಯೇ ದೈವ ಭಕ್ತರು, ಭೂತಾರಾಧನೆಗಳಲ್ಲಿ, ತುಳು ನಾಡಿನ ಸಂಪ್ರದಾಯ ಆಚರಣೆಗಳಲ್ಲಿ ತುಂಬಾ ನಂಬಿಕೆ ಉಳ್ಳವರು. ಜೊತೆಗೆ, ಅವರು ಶ್ರದ್ಧಾ-ಭಕ್ತಿಯಿಂದ ದಿನನಿತ್ಯ ಆಚರಣೆಯಲ್ಲಿ ಕೂಡ ತೊಡಗಿಸಿಕೊಂಡವರು. 

ಪ್ರತಿಯೊಂದು ಹಬ್ಬ-ಹರಿದಿನಗಳಲ್ಲಿ ಅವರ ಸಂಸಾರ ಮನೆಯಲ್ಲಿ ಮಾತ್ರವಲ್ಲದೇ ಕೆಲವು ದೇವಸ್ಥಾನಗಳಿಗೂ ಹೋಗಿ ಪೂಜೆ, ಹವನಗಳಲ್ಲಿ ಭಾಗಿಯಾಗುತ್ತಾರೆ. ಅದಕ್ಕೆ ಸಂಬಂಧಪಟ್ಟ ಫೋಟೋಗಳು ಸೋಷಿಯಲ್ ಮೀಡಿಯಾಗಳಲ್ಲೂ ಓಡಾಡುತ್ತ ಹಲವರ ಮೆಚ್ಚುಗೆ ಗಳಿಸಿಕೊಳ್ಳುತ್ತವೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
Lakshmi Nivasa: ಇವಳೇ ಅವಳು, ಮನೆಯಲಿ ಇಷ್ಟುದಿನ ಇದ್ದವಳು! ಸತ್ಯ ರಿವೀಲ್​ ಆಗೋಯ್ತು, ಬಾಯಿ ಬಿಡ್ತಾಳಾ ವಿಶ್ವನ ಅಮ್ಮ?