ಮೊದಲ ದಿನವೇ 'ಕಾಂತಾರ ಚಾಪ್ಟರ್ 1' ರೆಕಾರ್ಡ್, 1.28 ಮಿಲಿಯನ್ ಟಿಕೆಟ್ ಮಾರಾಟ!

Published : Oct 03, 2025, 01:31 PM IST
kantara chapter 1 actor rishab shetty

ಸಾರಾಂಶ

ಮೊದಲ ದಿನ ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಅದ ಮೊದಲ ಸಿನಿಮಾ 'ಕಾಂತಾರ ಚಾಪ್ಟರ್ 1' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ರಿಷಬ್ ಶೆಟ್ಟಿಯವರು ತಮ್ಮದೇ ಈ ಮೊದಲಿನ ಸಿನಿಮಾ 'ಕಾಂತಾರ' ದಾಖಲೆಯನ್ನು ಮುರಿದಿದ್ದಾರೆ.

ಕಾಂತಾರ ಪ್ರೀಕ್ವೆಲ್‌ ಶೋನ 1.28 ಮಿಲಿಯನ್ ಟಿಕೆಟ್ ಮಾರಾಟ!

ರಿಷಬ್ ಶೆಟ್ಟಿ (Rishab Shetty) ನಟನೆ-ನಿರ್ದೇಶನದ ಸಿನಿಮಾ 'ಕಾಂತಾರ ಚಾಪ್ಟರ್ 1' ಸಿನಿಮಾ (Kantara Chapter 1) ಬಿಡುಗಡೆ ಬಳಿಕ ಮೊದಲ ದಿನವೇ ರೆಕಾರ್ಡ್ ಬರೆದಿದೆ. ಕಾಂತಾರ ಪ್ರೀಕ್ವೆಲ್‌ ಶೋನ 1.28 ಮಿಲಿಯನ್ ಟಿಕೆಟ್ ಮಾರಾಟವಾಗಿದೆ. ಮೊದಲ ದಿನ ಬುಕ್ ಮೈ ಶೋ ನಲ್ಲಿ ಅತಿ ಹೆಚ್ಚು ಟಿಕೆಟ್ ಮಾರಾಟ ಅದ ಮೊದಲ ಸಿನಿಮಾ 'ಕಾಂತಾರ ಚಾಪ್ಟರ್ 1' ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ರಿಷಬ್ ಶೆಟ್ಟಿಯವರು ತಮ್ಮದೇ ಈ ಮೊದಲಿನ ಸಿನಿಮಾ 'ಕಾಂತಾರ' ದಾಖಲೆಯನ್ನು ಮುರಿದಿದ್ದಾರೆ. ಈ ಸಿನಿಮಾ ನಿನ್ನೆ ಅಂದರೆ, 02 ಅಕ್ಟೋಬರ್ 2025ರಂದು ಬಿಡುಗಡೆ ಆಗಿದೆ.

ಇತ್ತೀಚೆಗೆ ಬಂದ ಮಾಹಿತಿ ಪ್ರಕಾರ, ರಿಷಬ್ ಶೆಟ್ಟಿಯವರ ನಟನೆ-ನಿರ್ದೇಶನದ 'ಕಾಂತಾರ ಚಾಪ್ಟರ್ 1' ಸಿನಿಮಾ ಮೊದಲ ದಿನವೇ 55 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ. ಎರಡನೇ ದಿನವಾದ ಇಂದು 100 ಕೋಟಿ ಕ್ಲಬ್ ಸೇರುವ ಎಲ್ಲಾ ಸಾಧ್ಯೆತೆಗಳಿವೆ. ಜಗತ್ತಿನಾದ್ಯಂತ 7000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕಾಂತಾರ ಪ್ರೀಕ್ವೆಲ್ ಬಿಡುಗಡೆ ಆಗಿದೆ. ಬೆಂಗಳೂರು ಹಾಗೂ ಕರ್ನಾಟಕದಲ್ಲಿ ಒಂದೇ ದಿನಕ್ಕೆ ಬರೋಬ್ಬರಿ 500ಕ್ಕೂ ಹೆಚ್ಚು ಪ್ರದರ್ಶನ ನಡೆಯುತ್ತಿವೆ.

ನಿನ್ನೆಯಿಂದ, ಅಂದರೆ 02 ಅಕ್ಟೋಬರ್ 2025ರಿಂದ ಬರೀ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಬರೀ 'ಕಾಂತಾರ ಚಾಪ್ಟರ್ 1' ಬಗ್ಗೆಯೇ ಬಹಳಷ್ಟ ಕಡೆ ಚರ್ಚೆಗಳಾಗುತ್ತಿವೆ. ಕಾರಣ, ಕಾಂತಾರ ಸಿನಿಮಾ ಮೂಲಕ ಇಡೀ ದೇಶ ಮಾತ್ರವಲ್ಲ, ಪ್ರಪಂಚದ ಹಲವು ಮೂಲೆಗಳಲ್ಲಿ ತುಳು, ಕನ್ನಡ ಭಾಷೆಗಳು ಹಾಗೂ ಕರ್ನಾಟಕದ ಬಗ್ಗೆ ಮಾತನಾಡುವಂತೆ ಮಾಡಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ 'ಕಾಂತಾರ ಚಾಪ್ಟರ್ 1' ಸಿನಿಮಾ ಮೂಲಕ ತೆರೆಯ ಮೇಲೆ ಬಂದಿದ್ದಾರೆ.

ಕಾಂತಾರ ಪ್ರೀಕ್ವೆಲ್' ತೆರೆಯ ಮೇಲೆ ಅಬ್ಬರಿಸುತ್ತಿದೆ!

ಇದೀಗ ವಿಶ್ವದ 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಕಾಂತಾರ ಪ್ರೀಕ್ವೆಲ್' ತೆರೆಯ ಮೇಲೆ ಅಬ್ಬರಿಸುತ್ತಿದೆ. ಕರ್ನಾಟಕದಲ್ಲೂ ದಿನವೊಂದಕ್ಕೆ ಬರೋಬ್ಬರಿ 500ಕ್ಕೂ ಹೆಚ್ಚು ಶೋಗಳಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ದೈವಾರಾಧನೆ ಸಬ್ಜೆಕ್ಟ್ ಮುಖ್ಯವಾಗಿದ್ದು ಉಳಿದಂತೆ ಕದಂಬರ ಕಾಲದಲ್ಲಿ ನಡೆದ ಕಥೆಯ ರೂಪದಲ್ಲಿ ಸಿನಿಮಾ ಮಾಡಲಾಗಿದೆ. ನಾಯಕ ನಟ ಹಾಗೂ ನಿರ್ದೇಶಕರಾಗಿ ಸ್ವತಃ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಹಲವು ಕಲಾವಿದರು ಈ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ಕನ್ನಡ ಸಿನಿಮಾ, ಕರ್ನಾಟಕದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಮೂಲಕ ಇಡೀ ಜಗತ್ತು ಈಗ ಮಾತನಾಡುವಂತಾಗಿದೆ ಎಂಬುದು ಕರ್ನಾಟಕದ ಜನಸಾಮಾನ್ಯರ ಖುಷಿಗೆ ಕಾರಣ. ನಮ್ಮ ನೆಲದ, ಸಂಪ್ರದಾಯದ, ದೇವರು, ದೈವ, ಭೂತ, ದೇವರಿಗೆ ಸಂಬಂಧಪಟ್ಟ ದೈವಾರಾಧನೆ, ಭೂತಾರಾಧನೆ, ಭೂತಕೋಲ, ಗುಳಿಗ, ಪಂಜುರ್ಲಿ ಹಾಗೂ ಹುಲಿವೇಷ ಹೀಗೆ ಸಾಕಷ್ಟು ಆಚರಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾ ಮೂಲಕ ತುಳುನಾಡಿನ ಸಂಸ್ಕೃತಿಯ ಪರಿಚಯ ಇಡೀ ಕರ್ನಾಟಕ ಸೇರಿದಂತೆ ಪ್ರಪಂಚದ ಹಲವು ಕಡೆಗಳಲ್ಲಿ ಆಗಿದೆ. ಧಾರ್ಮಿಕತೆ ಹಾಗೂ ಸಾಂಸ್ಕೃತಿಕ ಆಯಾಮದ ಮೂಲಕ ಐತಿಹಾಸಿಕ ಟಚ್ ಕೊಟ್ಟು ರಿಷಬ್ ಶೆಟ್ಟಿಯವರು 'ಕಾಂತಾರ ಚಾಪ್ಟರ್1' ಸಿನಿಮಾ ಮಾಡಿದ್ದಾರೆ.

ತುಳುನಾಡಿನ ಈ ಸಾಂಪ್ರದಾಯಿಕ ಆಚರಣೆಗಳು!

ತುಳುನಾಡಿನ ಈ ಸಾಂಪ್ರದಾಯಿಕ ಆಚರಣೆಗಳು ಈಗ ರಿಷಬ್ ಶೆಟ್ಟಿಯವರ ಸಿನಿಮಾ 'ಕಾಂತರ ಪ್ರೀಕ್ವೆಲ್' ಮೂಲಕ ನಮ್ಮ ರಾಜ್ಯದ ಬೇರೆಬೇರೆ ಕಡೆಯೂ ಸೇರಿದಂತೆ, ಹೆಚ್ಚುಕಡಿಮೆ ಇಡೀ ಜಗತ್ತಿಗೇ ಪರಿಚಯ ಆಗುತ್ತಿದೆ. ಈ ಸಂತೋಷವೇ ಈ ಸಿನಿಮಾ ಬಗೆಗಿನ ಚರ್ಚೆಯಲ್ಲಿ ಹೆಚ್ಚು ಹೈಲೈಟ್ ಆಗುತ್ತಿದೆ. ಜೊತೆಗೆ, ಕನ್ನಡ ಸಿನಿಮಾವೊಂದು ಇಷ್ಟೊಂದು ತಾಂತ್ರಿಕ ಶ್ರೀಮಂತಿಕೆ ಹಾಗೂ ಗ್ರಾಫಿಕ್ಸ್ ಬಳಸಿಕೊಂಡು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಹಂತಕ್ಕೆ ಕನ್ನಡ ಸಿನಿಮಾ ಉದ್ಯಮ ಬೆಳೆದಿದೆ ಎಂಬುದು ಎಲ್ಲರ ಅಚ್ಚರಿ ಹಾಗೂ ಹೆಮ್ಮೆಗೆ ಕಾರಣ ಎಂಬ ಮಾತು ಸತ್ಯ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಬೆಂಗಳೂರಿನಲ್ಲಿ ಬಿಗ್ ಮ್ಯೂಸಿಕಲ್ ನೈಟ್; JAM JUNXION"ನಲ್ಲಿ ಚಂದನ್ ಶೆಟ್ಟಿ ಸೇರಿದಂತೆ ಪ್ರಸಿದ್ಧ ಬ್ಯಾಂಡ್ ಧಮಾಕಾ!
BBK 12: ಏನ್ರೀ ಇದು ತೆವಲು? ರಜತ್‌, ಅಶ್ವಿನಿ ಗೌಡ, ರಘು ಯಾಕೆ ಹೀಗೆಲ್ಲ ಮಾಡಿದ್ರು?