
ತುಮಕೂರು (ಅ.03): ನಮ್ಮಣ್ಣ ದರ್ಶನ್ ಅಣ್ಣ. ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿ. ದರ್ಶನ್ ನನ್ನ ಮನಸ್ಸಲ್ಲಿ ಯಾವತ್ತು ಇರ್ತಾರೆ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ. ನೀವು ದೇವರಿಗೆ ಬೇಡಿಕೊಳ್ಳುವಾಗ ಅವರಿಗೋಸ್ಕರನು ಬೇಡಿಕೊಳ್ಳಿ ಎಂದು ನಟ ಝೈದ್ ಖಾನ್ ತಿಳಿಸಿದರು. ಮಂಗಳೂರಿನಿಂದ ಬೆಂಗಳೂರು ಕಡೆಗೆ ತೆರಳುವಾಗ, ತುಮಕೂರು ದಸರಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ನಟ ಝೈದ್ ಖಾನ್ ಹೇಳಿದರು.
ತುಮಕೂರು ದಸರಾ ಕಾರ್ಯಕ್ರಮಕ್ಕೆ ಕೊನೆ ಗಳಿಗೆಯಲ್ಲಿ ಆಗಮಿಸಿದ ನಟ ಝೈದ್ ಖಾನ್, ವೇದಿಕೆಗೆ ಆಗಮಿಸಿದಾಗ ಡಿ ಬಾಸ್.. ಡಿ ಬಾಸ್ ಎಂದು ಸಿಳ್ಳೆ ಕೇಕೆಯನ್ನು ದರ್ಶನ್ ಫ್ಯಾನ್ಸ್ ಹಾಕಿದರು. ಈ ವೇಳೆ ದರ್ಶನ್ ಫ್ಯಾನ್ಸ್‌ಗೆ ದರ್ಶನ್ ಆದಷ್ಟು ಬೇಗ ಹೊರಗಡೆ ಬರಲಿ ಅಂತ ದೇವರಲ್ಲಿ ಬೇಡಿಕೊಳ್ಳಿ ಎಂದರು. ಸಂಗೀತ ಗಾಯಕ ಅರ್ಜುನ್ ಜನ್ಯ ತಂಡದಿಂದ ತುಮಕೂರಿನಲ್ಲಿ ದೊಡ್ಡ ಮಟ್ಟದ ದಸರಾ ಕಾರ್ಯಕ್ರಮ ನಡಿತಿದೆ ಅಂತಾ ಗೊತ್ತಾಯ್ತು. ಹಾಗಾಗಿ ಭಾಗಿಯಾಗಲೇಬೇಕು ಅಂತ ಇಲ್ಲಿಗೆ ಬಂದೆ. ನನಗೆ ತುಮಕೂರಿಗೆ ಬರೋಕೆ ಯಾವ ಆಹ್ವಾನ ಬೇಕಾಗಿಲ್ಲ. ಯಾಕಂದ್ರೆ ತುಮಕೂರು ನನ್ನ ಊರು.
ನನ್ನ ತಾತ, ನನ್ನ ಅಜ್ಜಿ, ನಮ್ಮಪ್ಪ ಹುಟ್ಟಿ ಬೆಳೆದಂತಹ ಊರು. ನನ್ನ ಕಲ್ಟ್ ಚಿತ್ರದ ಮೊದಲನೇ ಸಾಂಗ್ ಅಯ್ಯೋ ಶಿವನೆ. ತಮಗೆಲ್ಲಾ ಇಷ್ಟ ಆಗಿದೆ ಅಂತ ಅಂದುಕೊಳ್ತಿನಿ. ಈ ವೇಳೆ ಡಿ ಬಾಸ್, ಡಿ ಬಾಸ್ ಅಂತ ಕೇಕೆ ಹಾಕಿದ ಅಭಿಮಾನಿಗಳಿಗೆ, ದರ್ಶನ್ ನನ್ನ ಮನಸ್ಸಲ್ಲಿ ಯಾವತ್ತು ಇರ್ತಾರೆ. ಅಣ್ಣನ ಬಗ್ಗೆ ಹೇಳಬೇಕು ಅಂದ್ರೆ. ನಮ್ಮ ಅಣ್ಣ ದರ್ಶನ್ ಅಣ್ಣ. ನೀವೆಲ್ಲಾ ಅವರ ಮೇಲೆ ಇಟ್ಟಿರುವ ಪ್ರೀತಿ, ಅಭಿಮಾನ, ಅದರ ಜೊತೆಯಲ್ಲಿ ನೀವು ದೇವರಿಗೆ ಬೇಡಿಕೊಳ್ಳುವಾಗ ಅವರಿಗೋಸ್ಕರನು ಬೇಡಿಕೊಳ್ಳಿ ಅಂತ ಕೇಳಿಕೊಳ್ತಿನಿ. ಆದಷ್ಟು ಬೇಗ ಅವರು ಹೊರಗಡೆ ಬರಲಿ ಅಂತ ಕೇಳಿಕೊಳ್ತಿನಿ ಎಂದರಲ್ಲದೇ ತುಮಕೂರು ದಸರಾ ವೇದಿಕೆ ಮೇಲೆ ಕಲ್ಟ್ ಸಿನಿಮಾ ರಿಲೀಸ್ ಡೇಟ್ ಅನ್ನು ನಟ ಝೈದ್ ಖಾನ್ ಅನೌನ್ಸ್ ಮಾಡಿದರು.
ನಾನು ನನ್ನ ಕಲ್ಟ್ ಚಿತ್ರ ಯಾವತ್ತು ರಿಲೀಸ್ ಅಂತ ಡೇಟ್ ಅನೌನ್ಸ್ ಮಾಡಿರಲಿಲ್ಲ. ತುಮಕೂರು ನನ್ನ ಊರು ಆಗಿರೋದ್ರಿಂದ ಈ ವೇದಿಕೆಯಲ್ಲಿ ಪರಮೇಶ್ವರ್ ಅವರು ಪರ್ಮಿಷನ್ ಕೊಟ್ರೆ. ನನ್ನ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಮಾಡ್ತಿನಿ ಎಂದ ಝೈದ್ ಖಾನ್, ನನ್ನ ಕಲ್ಟ್ ಚಿತ್ರ 2026 ಜನವರಿ 23ಕ್ಕೆ ಬಿಡುಗಡೆ ಆಗ್ತಿದೆ. ದಯವಿಟ್ಟು ಎಲ್ಲರ ಪ್ರೀತಿ ಆಶಿರ್ವಾದ ಇರಲಿ ಅಂತ ಕೇಳಿಕೊಳ್ತಿನಿ ಎಂದು ನಟ ಝೈದ್ ಖಾನ್ ಮಾತು ಮುಗಿಸಿದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.