'ಕಾಂತಾರ ಚಾಪ್ಟರ್ 1' ಬಿಡುಗಡೆ ಬಳಿಕ ರಿಷಬ್ ಶೆಟ್ಟಿ ಮಾಡಿರೋ ಪೋಸ್ಟ್ ಭಾರೀ ವೈರಲ್, ಏನಿದರ ಮರ್ಮ?

Published : Oct 03, 2025, 12:49 PM IST
Rishab Shetty

ಸಾರಾಂಶ

ತುಳುನಾಡಿನ ಈ ಸಾಂಪ್ರದಾಯಿಕ ಆಚರಣೆಗಳು ಈಗ ರಿಷಬ್ ಶೆಟ್ಟಿಯವರ ಸಿನಿಮಾ 'ಕಾಂತರ ಪ್ರೀಕ್ವೆಲ್' ಮೂಲಕ ನಮ್ಮ ರಾಜ್ಯದ ಬೇರೆಬೇರೆ ಕಡೆಯೂ ಸೇರಿದಂತೆ, ಹೆಚ್ಚುಕಡಿಮೆ ಇಡೀ ಜಗತ್ತಿಗೇ ಪರಿಚಯ ಆಗುತ್ತಿದೆ. ಇದೇ ಈ ಚರ್ಚೆಯಲ್ಲಿ ಹೆಚ್ಚು ಹೈಲೈಟ್ ಆಗುತ್ತಿದೆ. ರಿಷಬ್ ಶೆಟ್ಟಿ ಈ ಪೋಸ್ಟ್ ಏನು ಹೇಳ್ತಿದೆ ಈಗ ನೋಡಿ..!

ಕಾಂತಾರ ರಿಲೀಸ್ ಬಳಿಕ ರಿಷಬ್ ಶೆಟ್ಟಿ ಪೋಸ್ಟ್ ಏನು ಹೇಳ್ತಿದೆ?

ಸದ್ಯಕ್ಕೆ ನಿನ್ನೆಯಿಂದ, ಅಂದರೆ 02 ಅಕ್ಟೋಬರ್ 2025ರಿಂದ ಬರೀ ರಿಷಬ್ ಶೆಟ್ಟಿ (Rishab Shetty) ನಿರ್ದೇಶನದ ಬರೀ 'ಕಾಂತಾರ ಚಾಪ್ಟರ್ 1' ಬಗ್ಗೆಯೇ ಬಹಳಷ್ಟ ಕಡೆ ಚರ್ಚೆಗಳಾಗುತ್ತಿವೆ. ಕಾರಣ, ಕಾಂತಾರ ಸಿನಿಮಾ ಮೂಲಕ ಇಡೀ ದೇಶ ಮಾತ್ರವಲ್ಲ, ಪ್ರಪಂಚದ ಹಲವು ಮೂಲೆಗಳಲ್ಲಿ ತುಳು, ಕನ್ನಡ ಭಾಷೆಗಳು ಹಾಗೂ ಕರ್ನಾಟಕದ ಬಗ್ಗೆ ಮಾತನಾಡುವಂತೆ ಮಾಡಿದ್ದ ನಟ-ನಿರ್ದೇಶಕ ರಿಷಬ್ ಶೆಟ್ಟಿ ಇದೀಗ 'ಕಾಂತಾರ ಚಾಪ್ಟರ್ 1' ಸಿನಿಮಾ ಮೂಲಕ ತೆರೆಯ ಮೇಲೆ ಬಂದಿದ್ದಾರೆ.

ಇದೀಗ ವಿಶ್ವದ 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ 'ಕಾಂತಾರ ಪ್ರೀಕ್ವೆಲ್' ತೆರೆಯ ಮೇಲೆ ಅಬ್ಬರಿಸುತ್ತಿದೆ. ಕರ್ನಾಟಕದಲ್ಲೂ ದಿನವೊಂದಕ್ಕೆ ಬರೋಬ್ಬರಿ 500ಕ್ಕೂ ಹೆಚ್ಚು ಶೋಗಳಲ್ಲಿ 'ಕಾಂತಾರ ಚಾಪ್ಟರ್ 1' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಚಿತ್ರದಲ್ಲಿ ದೈವಾರಾಧನೆ ಸಬ್ಜೆಕ್ಟ್ ಮುಖ್ಯವಾಗಿದ್ದು ಉಳಿದಂತೆ ಕದಂಬರ ಕಾಲದಲ್ಲಿ ನಡೆದ ಕಥೆಯ ರೂಪದಲ್ಲಿ ಸಿನಿಮಾ ಮಾಡಲಾಗಿದೆ. ನಾಯಕ ನಟ ಹಾಗೂ ನಿರ್ದೇಶಕರಾಗಿ ಸ್ವತಃ ರಿಷಬ್ ಶೆಟ್ಟಿ ಕಾಣಿಸಿಕೊಂಡಿದ್ದು, ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸಿದ್ದಾರೆ. ಉಳಿದಂತೆ, ಕಾಂತಾರ ಸಿನಿಮಾದಲ್ಲಿ ನಟಿಸಿದ್ದ ಹಲವು ಕಲಾವಿದರು ಈ ಸಿನಿಮಾದಲ್ಲಿ ಕೂಡ ನಟಿಸಿದ್ದಾರೆ.

ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಮೂಲಕ ಇಡೀ ಜಗತ್ತು ಈಗ ಮಾತನಾಡುವಂತಾಗಿದೆ!

ಕನ್ನಡ ಸಿನಿಮಾ, ಕರ್ನಾಟಕದ ಬಗ್ಗೆ ರಿಷಬ್ ಶೆಟ್ಟಿ ಸಿನಿಮಾ 'ಕಾಂತಾರ ಚಾಪ್ಟರ್ 1' ಮೂಲಕ ಇಡೀ ಜಗತ್ತು ಈಗ ಮಾತನಾಡುವಂತಾಗಿದೆ ಎಂಬುದು ಕರ್ನಾಟಕದ ಜನಸಾಮಾನ್ಯರ ಖುಷಿಗೆ ಕಾರಣ. ನಮ್ಮ ನೆಲದ, ಸಂಪ್ರದಾಯದ, ದೇವರು, ದೈವ, ಭೂತ, ದೇವರಿಗೆ ಸಂಬಂಧಪಟ್ಟ ದೈವಾರಾಧನೆ, ಭೂತಾರಾಧನೆ, ಭೂತಕೋಲ, ಗುಳಿಗ, ಪಂಜುರ್ಲಿ ಹಾಗೂ ಹುಲಿವೇಷ ಹೀಗೆ ಸಾಕಷ್ಟು ಆಚರಣೆಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ. ಈ ಸಿನಿಮಾ ಮೂಲಕ ತುಳುನಾಡಿನ ಸಂಸ್ಕೃತಿಯ ಪರಿಚಯ ಇಡೀ ಕರ್ನಾಟಕ ಸೇರಿದಂತೆ ಪ್ರಪಂಚದ ಹಲವು ಕಡೆಗಳಲ್ಲಿ ಆಗಿದೆ. ಧಾರ್ಮಿಕತೆ ಹಾಗೂ ಸಾಂಸ್ಕೃತಿಕ ಆಯಾಮದ ಮೂಲಕ ಐತಿಹಾಸಿಕ ಟಚ್ ಕೊಟ್ಟು ರಿಷಬ್ ಶೆಟ್ಟಿಯವರು 'ಕಾಂತಾರ ಚಾಪ್ಟರ್1' ಸಿನಿಮಾ ಮಾಡಿದ್ದಾರೆ.

ತುಳುನಾಡಿನ ಈ ಸಾಂಪ್ರದಾಯಿಕ ಆಚರಣೆಗಳು ಈಗ ರಿಷಬ್ ಶೆಟ್ಟಿಯವರ ಸಿನಿಮಾ 'ಕಾಂತರ ಪ್ರೀಕ್ವೆಲ್' ಮೂಲಕ ನಮ್ಮ ರಾಜ್ಯದ ಬೇರೆಬೇರೆ ಕಡೆಯೂ ಸೇರಿದಂತೆ, ಹೆಚ್ಚುಕಡಿಮೆ ಇಡೀ ಜಗತ್ತಿಗೇ ಪರಿಚಯ ಆಗುತ್ತಿದೆ. ಈ ಸಂತೋಷವೇ ಈ ಸಿನಿಮಾ ಬಗೆಗಿನ ಚರ್ಚೆಯಲ್ಲಿ ಹೆಚ್ಚು ಹೈಲೈಟ್ ಆಗುತ್ತಿದೆ. ಜೊತೆಗೆ, ಕನ್ನಡ ಸಿನಿಮಾವೊಂದು ಇಷ್ಟೊಂದು ತಾಂತ್ರಿಕ ಶ್ರೀಮಂತಿಕೆ ಹಾಗೂ ಗ್ರಾಫಿಕ್ಸ್ ಬಳಸಿಕೊಂಡು ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುವ ಹಂತಕ್ಕೆ ಕನ್ನಡ ಸಿನಿಮಾ ಉದ್ಯಮ ಬೆಳೆದಿದೆ ಎಂಬುದು ಎಲ್ಲರ ಅಚ್ಚರಿ ಹಾಗೂ ಹೆಮ್ಮೆಗೆ ಕಾರಣ ಎಂಬ ಮಾತು ಸತ್ಯ.

ಹಳೆಯ ಸೋಷಿಯಲ್ ಮೀಡಿಯಾ ಪೋಸ್ಟ್!

ಆದರೆ, ಕಾಂತಾರ ಸಿನಿಮಾದ ಬಿಡುಗಡೆ ಆಗಿರೋ ಈ ಕಾಲದಲ್ಲಿ ರಿಷಬ್ ಶೆಟ್ಟಿ ಕುರಿತಾದ ಹಳೆಯ ಸೋಷಿಯಲ್ ಮೀಡಿಯಾ ಪೋಸ್ಟ್ ಒಂದು ಮತ್ತೆ ಅಲ್ಲೇ ವೈರಲ್ ಆಗುತ್ತಿದೆ. 2016ರ ಆ ಪೋಸ್ಟ್ ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ಅದೀಗ ಭಾರೀ ಗಮನ ಸೆಳೆಯುತ್ತಿದೆ.

ಅದು ಹೀಗಿದೆ:- '2016 ರಲ್ಲಿ ಒಂದು ಪ್ರದರ್ಶನಕ್ಕಾಗಿ ಒದ್ದಾಡಿದ ದಿನದಿಂದ, 5000 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳ ಈ ಅದ್ಭುತ ಪಯಣ. ಇದು ಸಾಧ್ಯವಾಗಿದ್ದು ನಿಮ್ಮ ಪ್ರೀತಿ ಮತ್ತು ಬೆಂಬಲದಿಂದ ಮಾತ್ರ. ಇದಕ್ಕಾಗಿ ನಾನು ಸದಾ ಋಣಿ.' ಎಂದು ರಿಷಬ್ ಶೆಟ್ಟಿಯವರು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಇದೀಗ ಈ ಪೋಸ್ಟ್ ಭಾರೀ ವೈರಲ್ ಆಗುತ್ತಿದೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಈಡೇರಿದ ಪ್ರಾರ್ಥನೆ; ಪತಿಯೊಂದಿಗೆ ಮಂತ್ರಾಲಯಕ್ಕೆ ಭೇಟಿ ನೀಡಿದ ಗಾಯಕಿ ಸುಹಾನಾ ಸೈಯದ್
BBK 12: ಪದೇ ಪದೇ ವಯಸ್ಸಿನ ಕ್ಯಾತೆ ತೆಗೆದ ಗಿಲ್ಲಿ ನಟ; ಅಸಲಿಗೆ ಚೈತ್ರಾ ಕುಂದಾಪುರ ವಯಸ್ಸು ಎಷ್ಟು?