
ರಿಷಬ್ ಶೆಟ್ಟಿ 'ಕಾಂತಾರ ಚಾಪ್ಟರ್ 1' 3 ದಿನದಲ್ಲಿ ಬರೋಬ್ಬರಿ 235 ಕೋಟಿ ಕಲೆಕ್ಷನ್?
ಕನ್ನಡದ ನಟ-ನಿರ್ದೇಶಕ ರಿಷಬ್ ಶೆಟ್ಟಿಯವರ 'ಕಾಂತಾರ ಚಾಪ್ಟರ್ 1' ಸಿನಿಮಾ ಜಗತ್ತಿನಾದ್ಯಂತ 3 ದಿನದಲ್ಲಿ ಬರೋಬ್ಬರಿ 235 ಕೋಟಿ ಕಲೆಕ್ಷನ್ ಮಾಡಿದೆ. ಹೊಂಬಾಳೆ ಫಿಲಂಸ್ ಸಂಸ್ಥೆಯ 'ಕಾಂತಾರ-1' ಸಿನಿಮಾ ಜಗತ್ತಿನಾದ್ಯಂತ 7 ಭಾಷೆಗಳಲ್ಲಿ ಬರೋಬ್ಬರಿ 7000ಕ್ಕೂ ಹೆಚ್ಚು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದ್ದು, ಎಲ್ಲಾ ಕಡೆ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಬೆಂಗಳೂರಿನಲ್ಲೇ ದಿನವೊಂದಕ್ಕೆ 500ಕ್ಕೂ ಹೆಚ್ಚು ಪ್ರದರ್ಶನ ಆಗುತ್ತಿದ್ದು, ಇದೀಗ ಕೇವಲ 3 ದಿನದಲ್ಲಿ ರೂ. 235 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂಬ ಮಾಹಿತಿ ಸಿಕ್ಕಿದೆ.
ರಿಷಬ್ ಶೆಟ್ಟಿ ನಟನೆ-ನಿರ್ದೇಶನದ ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಡಿವೈನ್ ಸ್ಟಾರ್ ಎಂದೇ ಖ್ಯಾತಿ ಪಡೆದಿರುವ ರಿಷಬ್ ಶೆಟ್ಟಿಯವರ ಕಾಂತಾರ-1 ಚಿತ್ರಕ್ಕೆ ಎಲ್ಲಾ ಕಡೆ ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ. ಮೊದಲ ದಿನವೇ ಬರೋಬ್ಬರಿ 100 ಕೋಟಿ ರೂಪಾಯಿ ಗಳಿಕೆ ದಾಖಲಿಸಿದ್ದ ಕಾಂತಾರ-1 ಸಿನಿಮಾ ಇದೀಗ 235 ವಲ್ಡ್ ವೈಡ್ ಕಲೆಕ್ಷನ್ ಮಾಡಿ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದೆ. ಸದ್ಯ ಜಗತ್ತಿನಾದ್ಯಂತ ಕಾಂತಾರ ಸಿನಿಮಾದ ಹವಾ ನಡೆಯುತ್ತಿದ್ದು, ಮುಂದೆ ಈ ಸಿನಿಮಾದ ಗಳಿಕೆ 1000 ಕೋಟಿ ದಾಟಿ ದಾಖಲೆ ಬರೆದರೂ ಅಚ್ಚರಿಯೇನಿಲ್ಲ ಎನ್ನಬಹುದು.
ಭಾರತೀಯ ಸಿನಿಮಾರಂಗದಲ್ಲಿ ಕೆಲವೇ ಕೆಲವು ಸಿನಿಮಾಗಳು ಬಿಡುಗಡೆ ಬಳಿಕ 4ನೇ ದಿನಕ್ಕೆ ರೂ. 200 ಕೋಟಿಗಿಂತ ಹೆಚ್ಚು ಕಲೆಕ್ಷನ್ ಮಾಡಿವೆ. ಅವುಗಳಲ್ಲಿ ಕನ್ನಡದ ಕಾಂತಾರ ಚಾಪ್ಟರ್ 1' ಸಿನಿಮಾ ಕೂಡ ಒಂದು. ಇದು ಕನ್ನಡಿಗರಿಗೆ ನಿಜವಾಗಿಯೂ ಹೆಮ್ಮೆಯ ವಿಷಯ. ಮೊದಲ ದಿನವೇ ಬರೋಬ್ಬರಿ 100 ಕೋಟಿಗೂ ಮೀರಿ ಗಳಿಕೆ ಕಂಡಿದ್ದ ಕಾಂತಾರ-1 ಸಿನಿಮಾ ಇದೀಗ ಜಗತ್ತಿನಾದ್ಯಂತ ಬರೋಬ್ಬರಿ ರೂ. 235 ಕೊಟಿ ಕಲೆಕ್ಷನ್ ಮಾಡಿ ತನ್ನ ನಾಗಾಲೋಟ ಮುಂದುವರೆಸಿದೆ ಎಂದು ಸುದ್ದಿಯಾಗಿದೆ. ಜಗತ್ತಿನಾದ್ಯಂತ ಬರೋಬ್ಬರಿ 30 ದೇಶಗಳಲ್ಲಿ 7 ಭಾಷೆಗಳಲ್ಲಿ ಪ್ರದರ್ಶನ ಕಾಣುತ್ತಿರುವ ಹೆಗ್ಗಳಿಕೆ ರಿಷಬ್ ಶೆಟ್ಟಿಯವರ ‘ಕಾಂತಾರ ಚಾಪ್ಟರ್ 1’ ಸಿನಿಮಾದ ಹೆಗ್ಗಳಿಕೆಯಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.