Rishab Shetty ಹುಟ್ಟುಹಬ್ಬ ವಿಶೇಷ: ‘ಜೈ ಹನುಮಾನ್’, ‘ರಂಡಮೂಳಂ’ ಹಾಗೂ ಹೊಸ ಕನಸು

Published : Jul 06, 2026, 04:18 PM IST
Rishab Shetty

ಸಾರಾಂಶ

ರಿಷಬ್ ಶೆಟ್ಟಿ ನಾಳೆ (ಜು.7) 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಲವೂ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಅವರು ‘ಜೈ ಹನುಮಾನ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದಾರೆ.

ರಿಷಬ್ ಶೆಟ್ಟಿ ನಾಳೆ (ಜು.7) 43ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಸಲವೂ ಅವರು ಕುಟುಂಬದ ಜೊತೆ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಾಧ್ಯತೆ ಇದೆ. ಪ್ರಸ್ತುತ ಅವರು ‘ಜೈ ಹನುಮಾನ್’ ಚಿತ್ರೀಕರಣದಲ್ಲಿ ತೊಡಗಿಕೊಂಡಿದ್ದು, ಅದರ ಜೊತೆಗೆ ‘ಛತ್ರಪತಿ ಶಿವಾಜಿ ಮಹಾರಾಜ್’ ಚಿತ್ರಕ್ಕೂ ಸಿದ್ಧವಾಗುತ್ತಿದ್ದಾರೆ. ಈ ಮೂಲಕ ಕನ್ನಡ ನೆಲ ಬಿಟ್ಟು ಹಾರಿದ ಹನುಮಾನ್ ಆಗಿದ್ದಾರೆ.

ವಿಶೇಷವಾಗಿ ಅವರು ಸದ್ಯಕ್ಕೆ ತಮ್ಮದೇ ನಿರ್ದೇಶನದ ‘ಕಾಂತಾರ ಚಾಪ್ಟರ್ 2’ ರೂಪಿಸುವ ಕಾರ್ಯದಲ್ಲಿದ್ದಾರೆ. ಜೊತೆಗೆ ಮಲಯಾಳಂನ ಖ್ಯಾತ ಬರಹಗಾರ ಎಂ.ಟಿ. ವಾಸುದೇವನಾಯರ್ ಅವರ ‘ರಂಡಮೂಳಂ’ ಕೃತಿಯನ್ನು ಸಿನಿಮಾವಾಗಿಸುವ ಮಹೋನ್ನತ ಯೋಜನೆಯ ತಯಾರಿಯಲ್ಲಿ ತೊಡಗಿಕೊಂಡಿದ್ದಾರೆ. ‘ರಂಡಮೂಳಂ’ ಅವರ ಮ್ಯಾಗ್ನಂ ಓಪಸ್ ಸಿನಿಮಾ ಆಗಲಿದ್ದು, ಅವರ ತಂಡ ಸಂಶೋಧನಾ ಕೆಲಸದಲ್ಲಿ ನಿರತವಾಗಿದೆ.

ರಿಷಬ್ ಶೆಟ್ಟಿ ಸಮಯ ವ್ಯರ್ಥ ಮಾಡುವವರಲ್ಲ. ‘ಜೈ ಹನುಮಾನ್’ ಅವರು ಕೇವಲ ನಟನೆ ಮಾತ್ರ ಮಾಡುತ್ತಿರುವುದರಿಂದ ಉಳಿದ ಸಮಯದಲ್ಲಿ ಬೇರೆ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸಂತೋಷದ ಸುದ್ದಿ ಎಂದರೆ ಎಂದರೆ ಉತ್ತಮ ಕಂಟೆಂಟ್ ಇರುವ ಸಿನಿಮಾ ನಿರ್ಮಾಣದ ಯೋಜನೆಯೂ ಅವರ ಮುಂದೆ ಇದೆ ಎಂದು ಮೂಲಗಳು ತಿಳಿಸಿವೆ.

ಬಹಳ ಅಪರೂಪ

ಸಿನಿಮಾ ಹೊರತು ಕಲೆ, ಸಂಸ್ಕೃತಿಗೆ ಗೌರವ ಕೊಡುವ ಅವರು ಇತ್ತೀಚೆಗೆ ಊರಿನಲ್ಲಿ ಯಕ್ಷಗಾನ, ಭಜನಾ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಅವರು ದತ್ತು ಪಡೆದಿರುವ ಸರ್ಕಾರಿ ಶಾಲೆಯ ಉನ್ನತಿ ಕಡೆಗೂ ಅವರು ಗಮನ ಹರಿಸಿದ್ದಾರೆ. ಅವರು ಕನ್ನಡ ಚಿತ್ರರಂಗಕ್ಕೆ ಮಾತ್ರ ಸೀಮಿತರಾಗಿಲ್ಲ. ಅವರ ಸೀಮಾವಲಯ ವಿಸ್ತಾರವಾಗಿದೆ. ಹಾಗೆ ವಿಸ್ತಾರಗೊಂಡ ವ್ಯಕ್ತಿಗಳು ಬೇರಿನ ಕುರಿತು ಆಲೋಚಿಸುವುದು ಬಹಳ ಅಪರೂಪ. ರಿಷಬ್ ಮಾತ್ರ ಕನ್ನಡತನವನ್ನು ಉಸಿರಾಡುತ್ತಿರುವುದು, ಸಂಸ್ಕೃತಿಗೆ ನಿಷ್ಠರಾಗಿರುವುದು ಅವರ ಹೆಗ್ಗಳಿಕೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

Kiran Raj Birthday: ಕಿರಣ್ ರಾಜ್ ಹುಟ್ಟುಹಬ್ಬಕ್ಕೆ ‘ಕರ್ಣ’ ಧಾರಾವಾಹಿ ನಟಿ ರಿಯಾ ಕೊಟ್ರು ಸರ್ಪೈಸ್… ನಟ ಫುಲ್ ಖುಷ್
Photos: ಸ್ವರ್ಗಕ್ಕೆ ಕಿಚ್ಚು ಹಚ್ಚಬೇಕು; ಪ್ರಕೃತಿ ಮಡಿಲಲ್ಲಿ ಬೃಹತ್‌ ಮನೆ ಕಟ್ಟಿದ Anchor Akul Balaji