
ಬೆಂಗಳೂರು(ಜು.27): ದಕ್ಷಿಣದ ಬಿ ಗ್ರೇಡ್ ಸಿನಿಮಾಗಳ ಮಹಾರಾಣಿ ಶಕೀಲಾ ಅವರ ಬಯೋಪಿಕ್ ಸಿದ್ಧವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಅದರಲ್ಲೂ ಶಕೀಲಾ ಪಾತ್ರದಲ್ಲಿ ಬಾಲಿವುಡ್ ನಟಿ ರೀಚಾ ಛಡ್ಡಾ ನಟಿಸುತ್ತಿರುವುದು ಚಿತ್ರದ ಕುರಿತು ಕುತೂಹಲ ಹೆಚ್ಚಲು ಕಾರಣವಾಗಿದೆ.
ರೀಚಾ ಛಡ್ಡಾ ಶಕೀಲಾ ಪಾತ್ರದಲ್ಲಿರುವ ತಮ್ಮ ಮೊದಲ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಕರ್ನಾಟಕದ ತೀರ್ಥಹಳ್ಳಿಯಲ್ಲಿ ಶಕೀಲಾ ಜೀವನಾಧಾರಿತ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಕೇರಳದ ಸಾಂಸ್ಕೃತಿಕ ಉಡುಗೆಯಾದ ಕಸುವು ಪಟ್ಟು ಸೀರೆಯಲ್ಲಿ ಕಂಗೊಳಿಸುತ್ತಿರುವ ರೀಚಾ ಛಡ್ಡಾ, ಚಿತ್ರೀಕರಣವನ್ನು ಎಂಜಾಯ್ ಮಾಡುತ್ತಿರುವುದಾಗಿ ತಿಳಿಸಿದ್ದಾರೆ.
ಇದೇ ವೇಳೆ ರೀಚಾ ತೀರ್ಥಹಳ್ಳಿಯ ಸೊಬಗನ್ನು ವಿಡಿಯೋದಲ್ಲಿ ಸೆರೆ ಹಿಡಿದಿದ್ದು, 'ಹೆವನ್ ಕರ್ನಾಟಕ' ಎಂದು ಟ್ಯಾಗ್‌ಲೈನ್ ನೀಡಿದ್ದಾರೆ. ಕರ್ನಾಟಕದ ಮಲೆನಾಡಿನ ಸುಂದರ ಸೊಬಗನ್ನು ವರ್ಣಿಸಲು ಪದಗಳೇ ಇಲ್ಲ ಎಂಬುದು ರೀಚಾ ಅಂಬೋಣ.
ಸ್ಯಾಂಡಲ್ ವುಡ್ ನಿರ್ದೇಶಕ ಇಂದ್ರಜೀತ್ ಲಂಕೇಶ್ ನಿರ್ದೇಶಿಸುತ್ತಿರುವ ಈ ಚಿತ್ರ, ಮಲಯಾಳಂ, ತಮಿಳು, ತೆಲುಗು, ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಲಿದೆ. ರೀಚಾ ಕೇವಲ ಹಿಂದಿ ಅವತರಣಿಕೆಯಲ್ಲಿ ಮಾತ್ರ ನಟಿಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ-ಈ ಬಾಲಿವುಡ್ ಬ್ಯೂಟಿ ಶಕೀಲಾ ಭೇಟಿ ಮಾಡಿದ್ದೇಕೆ?
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.