
ಕ್ವಾಂಟಿಕೊ ಗರ್ಲ್ ಪ್ರಿಯಾಂಕ ಚೋಪ್ರಾ ಕಳೆದ ವಾರವಷ್ಟೇ ತಮ್ಮ 36 ನೇ ವರ್ಷದ ಬರ್ತ್‌ಡೇ ಆಚರಿಸಿಕೊಂಡರು. ಊಟ, ತಿಂಡಿ ವಿಷಯದಲ್ಲೆಲ್ಲ ಧಾರಾಳಿಯಾಗಿರು ಈ ಪಂಜಾಬಿ ಬೆಡಗಿಗೆ ಜಿಮ್‌ನಲ್ಲಿ ಬೆವರು ಹರಿಸೋದರ ಬಗ್ಗೆಯೂ ಅಷ್ಟೊಂದು ಒಲವಿಲ್ಲ. ಮತ್ತೆ ಹೇಗೆ ಆ ಪರಿ ಫಿಟ್‌ನೆಸ್ ಮೇಂಟೇನ್ ಮಾಡಿದ್ದಾರೆ? ಇಲ್ಲಿದೆ ಸೀಕ್ರೆಟ್ಸ್
ತಿಂಡಿಪೋತಿ ಪಿಗ್ಗೀ ‘ನಾನು ಮಹಾ ತಿಂಡಿಪೋತಿ. ನಾನು ತಿನ್ನೋದಕ್ಕೂ, ನನ್ನ ದೇಹ ಫಿಟ್ ಆಗಿರೋದಕ್ಕೂ ಯಾವ ಸಂಬಂಧನೂ ಇಲ್ಲ. ಹೊಟ್ಟೆ ದೇವ್ರಿಗೆ ಈವರೆಗೆ ಯಾವತ್ತೂ ಮೋಸ ಮಾಡಿಲ್ಲ. ಚೆನ್ನಾಗಿ ತಿಂತೀನಿ.’ ಇದು
ಪ್ರಿಯಾಂಕ ಚೋಪ್ರಾ ಪಬ್ಲಿಕ್ ಆಗಿ ಹೇಳಿರೋ ಮಾತು.
ಬಾಲಿವುಡ್ನಲ್ಲಿದ್ದಾಗಲೂ ಅಷ್ಟೇ, ಹಾಲಿವುಡ್‌ಗೆ ಹೋದ ಮೇಲೂ ಅಷ್ಟೇ. ಇವರ ಡಯೆಟ್ನಲ್ಲಿ ಹೆಚ್ಚಿನ ಬದಲಾವಣೆಗಳೇನೂ ಆಗಿಲ್ಲ. ಇದಕ್ಕೆ ಕಾರಣ ಮೆಟಬಾಲಿಕ್ ರೇಟ್ ಚೆನ್ನಾಗಿರೋದು. ಬೆಳಗ್ಗೆ ಎಗ್‌ವೈಟ್, ಓಟ್ ಮೀಲ್ ತಿನ್ನೋ ಪಿಗ್ಗೀ, ಮಧ್ಯಾಹ್ನ ದಾಲ್ ಊಟ ಮತ್ತು ತರಕಾರಿ ತಿನ್ನೋಕೆ ಇಷ್ಟಪಡುತ್ತಾರೆ. ಅಂದಹಾಗೆ ಬಟರ್ ಪರಾಠಾ, ಮಟನ್ ಬಿರಿಯಾನಿ ಪಿಗ್ಗೀ ಫೇವರೆಟ್. ದಿನವಡೀ ನೀರು ಕುಡಿತಾನೇ ಇರ‌್ತಾರೆ. ಎಷ್ಟು ಬೇಕೋ ಅಷ್ಟೇ ವರ್ಕೌಟ್ ಜಿಮ್‌ನಲ್ಲಿ ಗಂಟೆಗಟ್ಟಲೆ ಬೆವರಿಳಿಸೋದು ಈಕೆಗೆ ದೊಡ್ಡ ತಲೆನೋವು. ಸಾಧ್ಯವಾದಷ್ಟೂ ಜಿಮ್ ಅವಾಯ್ಡ್ ಮಾಡೋ ಈಕೆ, ಯೋಗ, ಕಿಕ್ ಬಾಕ್ಸಿಂಗ್ ಮೊದಲಾದ ವ್ಯಾಯಾಮಗಳ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಹದಿನೈದು ನಿಮಿಷ ಟ್ರೆಡ್‌ಮಿಲ್‌ನಲ್ಲಿ ಓಡೋದನ್ನು ಮಿಸ್ ಮಾಡಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.