
ಮುಂಬೈ (ನ. 26): ಕಾಫಿ ವಿತ್ ಕರಣ್ ಗೆ ಜಾಹ್ನವಿ ಕಪೂರ್ ಹಾಗೂ ಅರ್ಜುನ್ ಕಪೂರ್ ಹೋಗಿ ಬಂದ ಮೇಲೆ ಅರ್ಜುನ್ ರೆಡ್ಡಿ ಖ್ಯಾತಿಯ ವಿಜಯ್ ದೇವರಕೊಂಡ ಸಿಕ್ಕಾಪಟ್ಟೆ ಟ್ರೆಂಡ್ ನಲ್ಲಿದ್ದಾರೆ. ಅರೇ! ಇದೇನಿದು, ಕಾಫಿ ವಿತ್ ಕರಣ್ ಗೂ, ಜಾಹ್ನವಿಗೂ, ವಿಜಯ್ ದೇವರಕೊಂಡಗೂ ಏನ್ ಸಂಬಂಧ ಇದೆ ಎಂದು ಯೋಚಿಸುತ್ತಿದ್ದೀರಾ? ಸಂಬಂಧ ಇದೆ ಸ್ವಾಮಿ.
ಕಾಫಿ ವಿತ್ ಕರಣ್ ನ ರ್ಯಾಪಿಡ್ ಫೈರ್ ರೌಂಡ್ನಲ್ಲಿ, ಒಂದು ದಿನದ ಮಟ್ಟಿಗೆ ನಟನಾಗುವುದಾದರೆ ಯಾರಾಗ ಬಯಸುತ್ತೀರಿ ಎಂದು ಜಾಹ್ನವಿಗೆ ಕರಣ್ ಕೇಳಿದಾಗ ವಿಜಯ್ ದೇವರಕೊಂಡ ಎಂದು ಥಟ್ಟನೆ ಹೇಳುತ್ತಾರೆ. ಅವರೊಬ್ಬ ಪ್ರತಿಭಾನ್ವಿತ ನಟ ಎಂದು ಶ್ಲಾಘಿಸುತ್ತಾರೆ.
2017 ರಲ್ಲಿ ತೆರೆಕಂಡ ತೆಲುಗು ಚಿತ್ರ ಅರ್ಜುನ್ ರೆಡ್ಡಿ ವಿಜಯ್ ದೇವರಕೊಂಡಗೆ ಭಾರೀ ಹೆಸರು ತಂದುಕೊಟ್ಟಿತು. ಅದೇ ಚಿತ್ರ ಫಿಲ್ಮ್ ಫೇರ್ ಅವಾರ್ಡ್ ನಲ್ಲಿ ಬೆಸ್ಟ್ ಆ್ಯಕ್ಟರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು. ಇತ್ತೀಚಿಗೆ ಬಂದ ಗೀತಾ ಗೋವಿಂದಂ ಕೂಡಾ ಅವರಿಗೆ ಯಶಸ್ಸು ತಂದು ಕೊಟ್ಟಿತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.