ನಿಯಾನ್ ಡ್ರೆಸ್ ಧರಿಸಿ ಟ್ರಾಲ್ ಆದ ದೀಪ್‌ವೀರ್

By Web DeskFirst Published Nov 26, 2018, 3:54 PM IST
Highlights

ಇಟಲಿಯಲ್ಲಿ ಮದುವೆಯಾಗಿ, ಬೆಂಗಳೂರಿನಲ್ಲಿ ರಿಸೆಪ್ಷನ್ ಮಾಡಿಕೊಂಡು ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೋಷಿಯಲ್ ಮೀಡಿಯಾದಲ್ಲಿ ಟ್ರಾಲ್ ಆಗುತ್ತಿದ್ದಾರೆ. ಏಕೆ?

ಸೋಶಿಯಲ್ ಮಿಡಿಯಾವನೇ ಬ್ಲಾಸ್ಟ್ ಮಾಡಿತ್ತು ದೀಪ್-ವೀರ್ ಮದುವೆ ಸುದ್ದಿ ಹಾಗೂ ಫೋಟೋಗಳು. ಇಟಲಿಯಲ್ಲಿ ಯಾರ ಕೈಗೂ ಸಿಗದಂತೆ ಕೊಂಕಣಿ- ಸಿಂಧಿ ಶೈಲಿಯಲ್ಲಿ ಮದುವೆಯಾಗಿತ್ತು ಈ ಜೋಡಿ. ಇದೀಗ ಮತ್ತೆ ಈ ಬಾಲಿವುಡ್‌ ಜೋಡಿಯದ್ದೇ ಸುದ್ದಿ.

ಡಿ.25 ರಂದು ರಣ್‌ವೀರ್ ಸಹೋದರಿ ರಿತಿಕಾ ಭಾವನಾ ಆಯೋಜಿಸಿದ್ದ ಗೆಟ್ ಟುಗೆದರ್ ಕಾರ್ಯಕ್ರಮದಲ್ಲಿ ಡಾನ್ಸ್ ಮಾಡಿರುವ ವೀಡಿಯೋ ಹಾಗೂ ಅಲ್ಲಿ ಈ ಜೋಡಿ ಧರಿಸಿದ್ದ ಡ್ರೆಸ್‌ಗೆ ನೆಟ್ಟಿಗರು ಟ್ರಾಲ್ ಮಾಡಿದ್ದಾರೆ.

ಮುಂಬೈನಲ್ಲಿ ಆರತಕ್ಷತೆ ಮಾಡಿಕೊಂಡ ದೀಪ್‌ವೀರ್ ಆಗಮಿಸಿದ ಎಲ್ಲರಿಗೂ ಧನ್ಯವಾದ ಹೇಳಿದ್ದಾರೆ. ಪಾರ್ಟಿ ಮೂಡ್‌ನಲ್ಲಿರುವ ಈ ಜೋಡಿ ಮನಿಷ್ ಆರೋರಾ ವಿನ್ಯಾಸ ಮಾಡಿರುವ ಧಿರಿಸು ಧರಿಸಿತ್ತು. 'ಪುಕ್ಟಟೆ ಕೊಟ್ಟರೂ ನಾನೀ ಡ್ರೆಸ್ ಹಾಕಿ ಕೊಳ್ಳೋಲ್ಲ. ಅಂಥದ್ರಲ್ಲಿ ದೀಪಿಕಾ ಇಂಥ ಡ್ರೆಸ್ ತೊಟ್ಟಿದ್ಹೇಗೆ...?' ಎಂದು ಅನೇಕರು ಟ್ರಾಲ್ ಮಾಡಿದ್ದಾರೆ. 'ಇದು ಆರಂಭ ಮಾತ್ರ. ರಣವೀರ್ ಮುಂದೆ ಬರ್ನಿಂಗ್ ಸ್ಟಾರ್ ಆಗಲಿದ್ದಾರೆ, ಎಂದು ಟ್ರಾಲ್ ಮಾಡಲಾಗಿದೆ.

click me!