ಗುಡ್‌ಬೈ 2018: 100 ಕೋಟಿ ಕೊಳ್ಳೆ ಹೊಡೆದ ಬಾಲಿವುಡ್ ಚಿತ್ರಗಳಿವು

Published : Nov 26, 2018, 05:14 PM ISTUpdated : Dec 31, 2018, 04:39 PM IST
ಗುಡ್‌ಬೈ 2018:  100 ಕೋಟಿ ಕೊಳ್ಳೆ ಹೊಡೆದ ಬಾಲಿವುಡ್ ಚಿತ್ರಗಳಿವು

ಸಾರಾಂಶ

100 ಕೋಟಿ ಗಳಿಸಿದ ಬಾಲಿವುಡ್ ಚಿತ್ರಗಳಿವು | ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲಿವುಡ್‌ಗೆ ಸುಗ್ಗಿ ಕಾಲವಾಗಿರಲಿಲ್ಲ | 

ಬೆಂಗಳೂರು (ನ.26): ಬಾಲಿವುಡ್ ಚಿತ್ರಗಳು 100 ಕೋಟಿ ಗಳಿಕೆ ಕಾಣುವುದು ಸುಲಭದ ಮಾತೇ ಅಲ್ಲ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಬಾಲಿವುಡ್ ಪಾಲಿಗೆ ಹೇಳಿಕೊಳ್ಳುವಂತಹ ವರ್ಷವಾಗಿರಲಿಲ್ಲ. ಎಲ್ಲೋ ಕೆಲವು ಚಿತ್ರಗಳು ಮಾತ್ರ 100 ಕೋಟಿ ಗಳಿಕೆ ಕಂಡಿವೆ. 2018 ನೇ ಸಾಲಿನಲ್ಲಿ 100 ಕೋಟಿ ಗಳಿಸಿದ ಚಿತ್ರಗಳಿವು. 

ಸಂಜು (342.53) ಕೋಟಿ 

ರಾಜಕುಮಾರ್ ಹಿರಾನಿ ನಿರ್ದೇಶನದ ಸಂಜು ಚಿತ್ರ 2018 ರಲ್ಲಿ ತೆರೆ ಕಂಡಿದೆ. ರಣಬೀರ್ ಕಪೂರ್, ಅನುಷ್ಕಾ ಶರ್ಮಾ, ಸೋನಂ ಕಪೂರ್, ದಿಯಾ ಮಿರ್ಜಾ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಸಂಜಯ್ ದತ್ ಜೀವನಾಧಾರಿತ ಚಿತ್ರ ಇದಾಗಿದ್ದು ರಣಬೀರ್ ಕಪೂರ್ ಮಜೋಜ್ಞವಾಗಿ ಅಭಿನಯಿಸಿದ್ದಾರೆ. 

ಪದ್ಮಾವತ್  (302.15 ಕೋಟಿ ) 

ಸಂಜಯ್ ಲೀಲಾ ಬನ್ಸಾಲಿಯ ಸೂಪರ್ ಹಿಟ್ ಚಿತ್ರ ಪದ್ಮಾವತ್. ದೀಪಿಕಾ ಪಡುಕೋಣೆ, ರಣವೀರ್ ಸಿಂಗ್, ಶಾಹೀದ್ ಕಪೂರ್  ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ರೇಸ್ 3 (166.40 ಕೋಟಿ )

ಇದು ಥ್ರಿಲ್ಲರ್ ಮೂವಿ. ಸಲ್ಮಾನ್ ಖಾನ್, ಅನಿಲ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ಬಾಬಿ ಡಿಯೋಲ್ ಪ್ರಮುಖ ಪಾತ್ರದಲ್ಲಿದ್ದಾರೆ. 

ಬಾಗಿ 2  (164.38 ಕೋಟಿ)

ಬಾಗಿ 2 ಆ್ಯಕ್ಷನ್ ರೊಮ್ಯಾಂಟಿಕ್ ಮೂವಿ. ಟೈಗರ್ ಶ್ರಾಫ್ ಹಾಗೂ ದಿಶಾ ಪಟಾಣಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಸ್ಟ್ರೀ (129.90) ಕೋಟಿ 

ಅಮರ್ ಕೌಶಿಕ್ ನಿರ್ದೇಶನದ ಈ ಚಿತ್ರ 129 ಕೋಟಿ ಬಾಚಿಕೊಂಡಿದೆ. ಶ್ರದ್ಧಾ ಕಪೂರ್ ಹಾಗೂ ರಾಜ್ ಕುಮಾರ್ ರಾವ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ರಾಜಿ (123.84) ಕೋಟಿ 

ಇದೊಂದು ಥ್ರಿಲ್ಲರ್ ಚಿತ್ರವಾಗಿದ್ದು ಅಲಿಯಾ ಭಟ್, ವಿಕ್ಕಿ ಕೌಶಲ್, ಅಮೃತಾ ಕನ್ವಿಲಿಕರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಸೋನು ಕಿ ತಿತು ಕಿ ಸ್ವೀಟಿ (108.95) ಕೋಟಿ 

ಇದೊಂದು ಕಾಮಿಡಿ ಚಿತ್ರ. ಕಾರ್ತಿಕ್ ಆರ್ಯನ್, ನುಶ್ರತ್ ಬರೂಚಾ ಪ್ರಮುಖ ಪಾತ್ರದಲ್ಲಿ ಇದ್ದಾರೆ. 

ಗೋಲ್ಡ್ (104.72) ಕೋಟಿ 

ಇದು ಕ್ರೀಡಾ ಕಥಾವಸ್ತುವುಳ್ಳ ಚಿತ್ರ ಇದಾಗಿದೆ. ಅಕ್ಷಯ್ ಕುಮಾರ್,ಮೋನಿ ರಾಯ್, ಕುನಾಲ್ ಕಪೂರ್ ನಟಿಸಿದ್ದಾರೆ. 

ರೈಡ್  (103.07) ಕೋಟಿ 

ಇದು ಕ್ರೈಮ್ ಕಥಾವಸ್ತುವುಳ್ಳ ಚಿತ್ರ. ಅಜಯ್ ದೇವಗನ್, ಇಲಿಯಾನಾ ಡಿಸೋಜಾ ನಟಿಸಿದ್ದಾರೆ. 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಆ 'XYZ' ವ್ಯಕ್ತಿ ಯಾರೆಂದೇ ಗೊತ್ತಿಲ್ಲ.. ನಾನು ಯಾರನ್ನೂ ಮದುವೆಯಾಗಿಲ್ಲ; ನಟಿ ಮೆಹ್ರೀನ್ ಪೀರ್ಜಾದಾ ಕೆಂಡಾಮಂಡಲ!
'ಜನರದ್ದು ಎಮ್ಮೆಯ ಚರ್ಮ'.. ಅಂದು ಹೇಳಿದ್ದ ಅಕ್ಷಯ್ ಖನ್ನಾ ಮಾತೀಗ ವೈರಲ್.. ಈಗ ನೆಟ್ಟಿಗರು ಹೇಳ್ತಿರೋದೇನು?