ಸೆಂಟರ್ ಸೆಂಟರ್‌ ಎಂದು ಬೊಬ್ಬೆ ಹೊಡಿತಿದ್ದ ಪಪಾರಾಜಿ ಹೆಗಲಿಗೆ ಕೈ ಹಾಕಿ ಲೆಫ್ಟ್‌ ರೈಟ್ ತೋರಿಸಿದ ರವೀನಾ ಟಂಡನ್‌

By Anusha Kb  |  First Published Jan 14, 2024, 1:12 PM IST

ಪಪಾರಾಜಿಗಳ ಕೈಗೆ   ಬಾಲಿವುಡ್‌ ನಟಿ ರವೀನಾ ಟಂಡನ್ ಸಿಕ್ಕಿದ್ದು, ಈ ವೇಳೆ ಸೆಂಟರ್ ಸೆಂಟರ್ ಎಂದು ಕೂಗುತ್ತಿದ್ದ ಪಪಾರಾಜಿ ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಕರೆದು ಲೆಫ್ಟ್  ಯಾವುದು ರೈಟ್ ಯಾವುದು ಅಂತ ಕೂಡ ತೋರಿಸಿದ್ದಾರೆ ರವೀನಾ ಟಂಡನ್ ಈ ಮುದ್ದಾದ ವೀಡಿಯೋ ಈಗ ಸಖತ್ ವೈರಲ್ ಆಗಿದೆ.


ಸಿನಿಮಾ ನಟ ನಟಿಯರು ಹಾಗೂ ಸೆಲೆಬ್ರಿಟಿಗಳ ಹಿಂದೆಯೇ ಓಡುವವರು ಪಪಾರಾಜಿಗಳು. ಅವರು ಕುಳಿತರು ನಿಂತರು ಓಡಾಡಿದರು ವೀಡಿಯೋ ಮಾಡಿ ತಮ್ಮ ಸೈಟ್‌ಗಳಲ್ಲಿ ಅಪ್‌ಲೋಡ್‌ ಮಾಡುತ್ತಲೇ ಇರ್ತಾರೆ ಈ ಪಪಾರಾಜಿಗಳು. ಏರ್‌ಪೋರ್ಟ್‌ ಇರಲಿ, ಸೆಲೆಬ್ರಿಟಿಗಳು ಹೋಗುವ ಜಿಮ್ ಇರಲಿ, ಸೆಲೂನ್ ಇರಲಿ ಮಾಲ್‌ಗಳಿರಲಿ ಶೋ ರೂಮ್‌ಗಳಿರಲಿ ಎಲ್ಲೆಂದರಲ್ಲಿ ಈ ಪಪಾರಾಜಿಗಳು ಒಂದು ಕಣ್ಣಿಟ್ಟಿರ್ತಾರೆ. ಸೆಲೆಬ್ರಿಟಿಗಳ ಫೋಟೋ ವೀಡಿಯೋ ಹಿಡಿದು ಸಾಮಾಜಿಕ ಜಾಲತಾಣಗಳಿಗೆ ಹಾಕುವ ಮೂಲಕ ಸೆಲೆಬ್ರಿಟಿಗಳ ಬದುಕಿನ ಇಂಚಿಂಚು ಮಾಹಿತಿಯನ್ನು ಬಿಡದೇ ಜನರಿಗೆ ತಿಳಿಸುತ್ತಾರೆ ಈ ಪಪಾರಾಜಿಗಳು.

ಕಾವಲು ನಾಯಿಯಂತೆ ಸೆಲೆಬ್ರಿಟಿಗಳನ್ನು ಕಾಯುವ ಈ ಫೋಟೋಗ್ರಾಫರ್‌ಗಳು ಸೆಲೆಬ್ರಿಟಿಗಳು ಕಂಡ ಕೂಡಲೇ ಜೋರಾಗಿ ಅವರ ಹೆಸರು ಕರೆದು ಫೋಟೋಗೆ ಫೋಸ್ ನೀಡುವಂತೆ ಬೊಬ್ಬೆ ಹೊಡೆಯುತ್ತಾರೆ. ಸೆಲೆಬ್ರಿಟಿಗಳಿಗೂ ಇದು ಅಭ್ಯಾಸವಾಗಿದ್ದು, ಸ್ಥಳ ಯಾವುದೇ ಇರಲಿ ಪಪಾರಾಜಿಗಳಿಗೊಂದು ಪೋಸ್ ನೀಡಿ ಬಾಯ್ ಹೇಳಿ ಮುಂದೆ ಸಾಗುತ್ತಾರೆ ಈ ಸೆಲೆಬ್ರಿಟಿಗಳು. ಅದೇ ರೀತಿ ಈಗ ಪಪಾರಾಜಿಗಳ ಕೈಗೆ   ಬಾಲಿವುಡ್‌ ನಟಿ ರವೀನಾ ಟಂಡನ್ ಸಿಕ್ಕಿದ್ದು, ಈ ವೇಳೆ ಸೆಂಟರ್ ಸೆಂಟರ್ ಎಂದು ಕೂಗುತ್ತಿದ್ದ ಪಪಾರಾಜಿ ಫೋಟೋಗ್ರಾಫರ್ ಒಬ್ಬರನ್ನು ಹತ್ತಿರ ಕರೆದು ಲೆಫ್ಟ್ ರೈಟ್ ಕೂಡ ತೋರಿಸಿದ್ದಾರೆ ರವೀನಾ ಟಂಡನ್.

Tap to resize

Latest Videos

undefined

ರವೀನಾ ಟಂಡನ್‌ ಪುತ್ರಿ ಜೊತೆ ಸುತ್ತಾಡುತ್ತಿರುವ ಅರ್ಬಾಜ್‌ ಖಾನ್ ಮಲೈಕಾ ಪುತ್ರ: ಡೇಟಿಂಗ್‌ನಲ್ಲಿದ್ದಾರ ಈ ಸ್ಟಾರ್ ಕಿಡ್‌

ನೇರಳೆ ಬಣ್ಣದ ಜೆಮ್ ಸೂಟ್‌ನಂತಹ ಧಿರಿಸು ಧರಿಸಿ ಬರುತ್ತಿದ್ದ ರವೀನಾ ಟಂಡನ್ ನೋಡಿ ಪಪಾರಾಜಿ ಅವರು ಸೆಂಟರ್ ಸೆಂಟರ್ ಎಂದು ಕರೆದಿದ್ದಾರೆ. ಹೀಗೆ ಬೊಬ್ಬೆ ಹೊಡೆಯುತ್ತಿದ್ದ ಫೋಟೋಗ್ರಾಫರ್‌ ಅನ್ನು ಹತ್ತಿರ  ಇಲ್ಲಿ ಬಾ ಇಲ್ಲಿ ಬಾ ಎಂದು ಹತ್ತಿರ ಕರೆದ ಟಿಪ್ ಟಿಪ್ ಡಾನ್ಸರ್‌ ರವೀನಾ,  ಆತನ ಹೆಗಲುಗಳನ್ನು ಹಿಡಿದು ಲೆಫ್ಟ್ ಹಾಗೂ ರೈಟ್‌ನ ಅರ್ಥ ಏನು ಎಂದು ಕೇಳಿದ್ದಾರೆ. ಆಗ ಫೋಟೋಗ್ರಾಫರ್ ಈ ಕಡೆ ರೈಟ್ ಆ ಕಡೆ ಲೆಫ್ಟ್ ಅಂತ ಎಡಬಲವನ್ನು ತೋರಿಸಿದ್ದಾನೆ. ಮತ್ತೇಕೆ ಸೆಂಟರ್ ಸೆಂಟರ್ ಎಂದು ಬೊಬ್ಬೆ ಹೊಡೆಯುವೆ ಎಂದು ಕೇಳಿದ್ದಾರೆ. ಅಲ್ಲದೇ ಈ ಕಡೆ ಇದ್ದರೆ ಲೆಫ್ಟ್ ಆ ಕಡೆ ಇದ್ದರೆ ರೈಟ್ ಎಂದು ಹೇಳಿಕೊಟ್ಟಿದ್ದಾರೆ. ಅದಕ್ಕೆ ಆತ ತಾನು ಮರಾಠಿ ಮೀಡಿಯಾಂನಲ್ಲಿ ಓದಿದ್ದಾಗಿ ಹೇಳಿದ್ದಾನೆ. ಈ ವೇಳೆ ಮುದ್ದಾಗಿ ಆತನ ಬೆನ್ನಿಗೆ ಹೊಡೆದು ಮುಂದೆ ಸಾಗಿದ್ದಾರೆ ರವೀನಾ. ಈ ಮುದ್ದಾದ ವೀಡಿಯೋ ಈಗ ಸಖತ್ ವೈರಲ್ ಆಗುತ್ತಿದೆ.

ವೀಡಿಯೋ ನೋಡಿದ ಅಭಿಮಾನಿಗಳು ರವೀನಾ ಮತ್ತೆ ಮಗುವಾಗಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ. 

20 ವರ್ಷಗಳ ನಂತರ ಮಾಜಿ ಗರ್ಲ್‌ಫ್ರೆಂಡ್‌ ರವೀನಾ ಟಂಡನ್ ಜೊತೆಯಾದ ಅಕ್ಷಯ್ ಕುಮಾರ್!

 

click me!