ಫುಡ್ ಜಿಹಾದ್ ಎಂಬ ಆರೋಪದ ಮೇಲೆ ದೂರು ದಾಖಲಾಗುತ್ತಿದ್ದಂತೆಯೇ ಅನ್ನಪೂರ್ಣಿ ಚಿತ್ರದ ಸ್ಟ್ರೀಮಿಂಗ್ ರದ್ದಾಗಿದೆ. ಈ ರದ್ದತಿ ವಿರುದ್ಧ ವಿವಿಧ ನಿರ್ದೇಶಕ, ನಿರ್ಮಾಪಕರು ಹೇಳಿದ್ದೇನು?
ಹೆಣ್ಣಿಗೆ ಅಡುಗೆ ಮನೆ ಎನ್ನುವುದೇ ಸರ್ವಸ್ವ ಅಲ್ಲ ಎನ್ನುವ ಉತ್ತಮ ಆಶಯದೊಂದಿಗೆ ರೂಪುಗೊಂಡಿದ್ದ ನಟಿ ನಯನತಾರಾ ಅವರ ಅನ್ನಪೂರ್ಣಿ ಸಿನಿಮಾ ಭಾರಿ ವಿವಾದ ಬೆನ್ನಲ್ಲೇ ನೆಟ್ಫ್ಲಿಕ್ಸ್ನಿಂದ ತೆಗೆದು ಹಾಕಲಾಗಿದೆ. ಶ್ರೀರಾಮಚಂದ್ರ ಹಾಗೂ ಬ್ರಾಹ್ಮಣ ಸಮುದಾಯಕ್ಕೆ ಅವಹೇಳನ ಮಾಡಿರುವ ಆರೋಪ ಹೊತ್ತ ಅನ್ನಪೂರ್ಣಿ ಸಿನಿಮಾದ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಲೇ ಈ ಚಿತ್ರದ ಸಹ ನಿರ್ಮಾಪಕರಾಗಿರುವ ಜೀ ಎಂಟರ್ಟೇನ್ಮೆಂಟ್ ಕ್ಷಮೆ ಕೋರಿದೆ. ಈ ಕುರಿತು ವಿಶ್ವ ಹಿಂದೂ ಪರಿಷತ್ಗೆ ಕ್ಷಮಾಪಣಾ ಪತ್ರವನ್ನು ಸಲ್ಲಿಸಲಾಗಿತ್ತು. ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿತ್ತು. ನಂತರ ಚಿತ್ರವನ್ನು ನೆಟ್ಫ್ಲಿಕ್ಸ್ನಿಂದಲೂ ತೆಗೆದುಹಾಕಲಾಗಿದೆ. ಹಿಂದೂ ಮತ್ತು ಬ್ರಾಹ್ಮಣರ ಭಾವನೆಗಳಿಗೆ ಧಕ್ಕೆ ತರುವ ಯಾವುದೇ ಉದ್ದೇಶವನ್ನು ನಾವು ಹೊಂದಿಲ್ಲ. ಇದರಿಂದ ಯಾರದ್ದೇ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆ ಕೋರುತ್ತೇವೆ ಎಂದೂ ತಂಡ ಹೇಳಿದ ಬೆನ್ನಲ್ಲೇ ಚಿತ್ರದ ಸ್ಟ್ರೀಮಿಂಗ್ ರದ್ದಾಗಿದೆ.
ಸ್ಟ್ರೀಮಿಂಗ್ ರದ್ದಾದರೂ, ಈ ಚಿತ್ರದ ಬಗ್ಗೆ ಪರ-ವಿರೋಧಗಳು ಇನ್ನೂ ನಿಂತಿಲ್ಲ. ಬ್ರಾಹ್ಮಣ ಸಮುದಾಯವನ್ನೇ ಟಾರ್ಗೆಟ್ ಯಾಕೆ ಮಾಡಲಾಗಿದೆ ಎಂದು ಹಲವರು ಆರೋಪಿಸುತ್ತಿದ್ದಾರೆ. ಇಂಥವರನ್ನು ಟಾರ್ಗೆಟ್ ಮಾಡಿದರೆ ಅವರು ಏನೂ ಮಾಡದೇ ಸುಮ್ಮನೆ ಇರುತ್ತಾರೆ ಎನ್ನುವುದು ನಿರ್ದೇಶಕರ ಅನಿಸಿಕೆಯಾ ಎಂದು ಪ್ರಶ್ನೆ ಮಾಡಲಾಗಿದೆ. ನಾಯಕಿ ನಯನತಾರಾ ಕೈಯಲ್ಲಿ ಚಿಕನ್ ಮಾಡಿಸುವ ಬದಲು ಹಂದಿ ಮಾಂಸ ಮಾಡಿಸಿದ್ದರೆ ಇದೇ ನಿಲುವು ವ್ಯಕ್ತವಾಗುತ್ತಿತ್ತಾ ಅಥವಾ ಎಲ್ಲರೂ ಅದಕ್ಕೆ ಸಪೋರ್ಟ್ ಮಾಡುತ್ತಿದ್ರಾ ಎಂದೂ ಹಲವರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ. ಚಿಕನ್ ಮಾಡಿಸುವ ನಿರ್ದೇಶಕರು ಹಂದಿಮಾಂಸದ ಅಡುಗೆಯೂ ಮಾಡಿಸಿ ಶಾಂತಿ ಕಾಪಾಡುವ ಪ್ರಯತ್ನ ಯಾಕೆ ಮಾಡಲಿಲ್ಲ? ಚಿಕನ್ ವಿರುದ್ಧ ದನಿ ಎತ್ತುತ್ತಿರುವ ಜನರು, ಹಂದಿ ಮಾಂಸ ಮಾಡಿಸಿದರೂ ಹೀಗೆಯೇ ಹೇಳುತ್ತಿದ್ದರಾ ಎಂಬ ಗಂಭೀರ ಆರೋಪಗಳನ್ನೂ ಮಾಡಲಾಗುತ್ತಿದೆ.
ಎಫ್ಐಆರ್ ಬೆನ್ನಲ್ಲೇ ಎಚ್ಚೆತ್ತುಕೊಂಡ ಅನ್ನಪೂರ್ಣಿ! ಕ್ಷಮೆ ಕೋರುವ ಜೊತೆಗೆ ಸ್ಟ್ರೀಮಿಂಗ್ ಕೂಡ ರದ್ದು
ಇದು ಒಂದೆಡೆಯಾದರೆ, ನೆಟ್ಫ್ಲಿಕ್ಸ್ನಿಂದ ಚಿತ್ರವನ್ನು ತೆಗೆದುಹಾಕಿರುವ ಬಗ್ಗೆ ವಿವಿಧ ನಿರ್ದೇಶಕ, ನಿರ್ಮಾಪಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ನಿರ್ದೇಶಕ ಅಮೀರ್ ಅವರು, ಒಂದು ವೇಳೆ ಈ ಚಿತ್ರದಲ್ಲಿ ರಜಿನೀಕಾಂತ್ ಅವರು ನಟಿಸಿದ್ದರೆ, ಹೀಗೆಯೇ ನೆಟ್ಫ್ಲಿಕ್ಸ್ನಿಂದ ತೆಗೆದು ಹಾಕಲಾಗುತ್ತಿತ್ತಾ ಎಂದು ಪ್ರಶ್ನಿಸಿದ್ದಾರೆ. OTT ನಲ್ಲಿ ಸೃಜನಶೀಲತೆ ಸ್ವಾತಂತ್ರ್ಯವು ಒಳ್ಳೆಯದೇ. ಆದರೆ (ನೆಟ್ಫ್ಲಿಕ್ಸ್ನಲ್ಲಿ ತೆಗೆದು ಹಾಕುವಷ್ಟು) ಅತಿಯಾದ ಸ್ವಾತಂತ್ರ್ಯ ಇರುವುದು ಒಳ್ಳೆಯದಲ್ಲ ಎಂದು ನಟ ಮತ್ತು ನಿರ್ಮಾಪಕ ಆರ್.ಪ್ರತಿಬನ್ ಅವರು ಹೇಳಿದ್ದಾರೆ. ಇನ್ನೋರ್ವ ನಿರ್ದೇಶಕ ಮನ್ಸೀ ರೇ ಅವರೂ ಈ ಚಿತ್ರವನ್ನು ವಾಪಸ್ ಪಡೆದಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದು, ಒಮ್ಮೆ ಚಿತ್ರವನ್ನು ಬಿಡುಗಡೆ ಮಾಡಿದರೆ ಅದನ್ನು ವಾಪಸ್ ಪಡೆಯುವ ಅಧಿಕಾರ ಯಾರಿಗೂ ಇಲ್ಲ ಎಂದು ಕಿಡಿ ಕಾರಿದ್ದಾರೆ. ಪ್ರಬುದ್ಧ ಪ್ರಜಾಪ್ರಭುತ್ವದಲ್ಲಿ ಸೆನ್ಸಾರ್ಷಿಪ್ಗೆ ಯಾವುದೇ ಜಾಗ ಇಲ್ಲ ಎಂದು ಇನ್ನೋರ್ವ ನಿರ್ಮಾಪಕ ಹಾಗೂ ಗೀತರಚನೆಕಾರ ಅಮುಧಾನ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಮನ ವಿರುದ್ಧ ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಈ ಚಿತ್ರವು ಹಿಂದೂ ವಿರೋಧಿಯಾಗಿದೆ. ಅಷ್ಟೇ ಅಲ್ಲದೇ, ಚಿತ್ರವು ಲವ್ ಜಿಹಾದ್ ಅನ್ನು ಕೂಡ ಉತ್ತೇಜಿಸುತ್ತದೆ ಎಂದು ಆರೋಪಿಸಿರುವ ರಮೇಶ್ ಸೋಲಂಕಿ ಅವರು, ನಿರ್ಮಾಪಕ, ನಿರ್ದೇಶಕರು ಸೇರಿದಂತೆ ನೆಟ್‌ಫ್ಲಿಕ್ಸ್ ಇಂಡಿಯಾ ವಿರುದ್ಧವೂ ದೂರು ದಾಖಲು ಮಾಡಿದ್ದರು. ಅನ್ನಪೂರ್ಣಿ ಆಹಾರದ ದೇವತೆಯಾಗಿದ್ದು, ನಯನತಾರಾ ಸಂಪ್ರದಾಯವನ್ನು ಮೀರಿಸಿದ್ದಾರೆ ಎಂದು ರಮೇಶ್ ತಿಳಿಸಿದ್ದರು. ಇದರ ಬೆನ್ನಲ್ಲೇ ಹಲವು ಕಡೆ ಚಿತ್ರತಂಡ ಹಾಗೂ ನಟಿ ನಯನತಾರಾ ವಿರುದ್ಧ ಕೇಸ್ ದಾಖಲಾಗಿದೆ.
ಪಾಕ ಪ್ರವೀಣೆ ಅನ್ನಪೂರ್ಣಿ ಸಾಫ್ಟ್ ಪ್ರೊಪಗಂಡ ಚಿಕನ್ನು, ದಾರಿ ತಪ್ಪಿದ ಒಳ್ಳೆಯ ಆಶಯ