
ಸಿನಿಮಾ ಕ್ಷೇತ್ರದಲ್ಲಿ ಅಕ್ರಮ ಸಂಬಂಧ, ಡೇಟಿಂಗ್, ಎರಡೆರಡು ಮದುವೆ.. ಹೀಗೆ ಏನೇನೋ ಇರುವುದು ಹೊಸ ವಿಷಯವೇನಲ್ಲ. ಯಾರದ್ದೋ ಜೊತೆ ಸಂಬಂಧ ಬೆಳೆಸಿ, ಇನ್ನಾರನ್ನೋ ಮದ್ವೆಯಾಗುವುದೂ ಅಚ್ಚರಿಯ ವಿಷಯವೂ ಅಲ್ಲ. ಅದೇ ರೀತಿ ಕೃಷ್ಣ ಸುಂದರಿ ಕಾಜೋಲ್ ಪತಿ ಅಜೆಯ್ ದೇವಗನ್ ಸ್ಟೋರಿ ಕೂಡ! ಇಬ್ಬರ ಜೊತೆ ಸಂಬಂಧ ಇಟ್ಟುಕೊಂಡು ಮೂರನೆಯವಳನ್ನು ಮದ್ವೆಯಾಗಿದ್ದಾರೆ ಅಜೆಯ್! ಇನ್ನೊಂದು ಅರ್ಥದಲ್ಲಿ ಈ ನಟನಿಗಾಗಿ ಇಬ್ಬರು ಬಾಲಿವುಡ್ ನಾಯಕಿಯರು ಕಿತ್ತಾಡಿಕೊಂಡಿದ್ದೂ ಆಗಿದೆ. ಈ ಬಗ್ಗೆ ನಟಿ ರವೀನಾ ಟಂಡನ್ ಸಂದರ್ಶನವೊಂದರಲ್ಲಿ ರಿವೀಲ್ ಮಾಡಿದ್ದು, ಅದೀಗ ವೈರಲ್ ಆಗಿದೆ. ತಮ್ಮ ಜೀವನದ ಕುರಿತು ಸಂದರ್ಶನವೊಂದರಲ್ಲಿ ರವೀನಾ ಕುತೂಹಲದ ಅಂಶಗಳನ್ನು ಹೇಳಿಕೊಳ್ಳುತ್ತಿದ್ದಾರೆ. ಅಜೆಯ್ ದೇವಗನ್ಗಾಗಿ ತಮ್ಮ ಮತ್ತು ಕರಿಷ್ಮಾ ಕಪೂರ್ ನಡುವೆ ನಡೆದ ಫೈಟ್ ಬಗ್ಗೆ ತಿಳಿಸಿದ್ದಾರೆ.
ಸಂದರ್ಶನದಲ್ಲಿ ಈ ಕುರಿತು ಮಾತನಾಡಿರುವ ನಟಿ ರವೀನಾ ಟಂಡನ್, ಕರಿಷ್ಮಾ ಕಪೂರ್ ಅವರ ಹೆಸರು ಹೇಳದೆ ಓರ್ವ ನಟಿ ನನ್ನನ್ನು 4 ಸಿನಿಮಾದಿಂದ ತೆಗೆದುಹಾಕುವಂತೆ ಮಾಡಿದ್ದಳು ಎಂದು ಆರೋಪಿಸಿದ್ದರು. ಆಕೆ ತನ್ನ ಇನ್‌ಫ್ಲುಯೆನ್ಸ್ ಬಳಸಿ ನನಗೆ ನಾಲ್ಕು ಸಿನಿಮಾ ಸಿಗದ ಹಾಗೆ ಮಾಡಿದ್ದಳು ಎಂದಿದ್ದರು. 90ರ ದಶಕದಲ್ಲಿ ಬಾಲಿವುಡ್ ಆಳಿದ ನಟಿಯರ ಪೈಕಿ ರವೀನಾ ಕೂಡ ಒಬ್ಬರು. ಹೀಗಾಗಿ ಸಂದರ್ಶನದ ಸಮಯದಲ್ಲಿ ರವೀನಾ ಅವರಿಗೆ 90ರ ದಶಕದ ಯಾವ ನಟಿಯರ ಜೊತೆ ಒಳ್ಳೆಯ ಬಾಂಧವ್ಯವಿದೆ ಎಂದು ಪ್ರಶ್ನೆ ಮಾಡಲಾಗಿತ್ತು. ಆ ಸಮಯದಲ್ಲಿ ಈ ವಿಷಯವನ್ನು ರವೀನಾ ಬಹಿರಂಗಪಡಿಸಿದ್ದರು. ಜೂಹಿ ಚಾವ್ಲಾ, ಮಾಧುರಿ ದೀಕ್ಷಿತ್, ಶಿಲ್ಪಾ ಶೆಟ್ಟಿ, ಕಾಜೊಲ್, ರಾಣಿ ಮುಖಜರ್ಜಿ, ನೀಲಂ, ಮನೀಷ್ ಕೊಯಿರಾಲಾ (Maneesha Koirala) ಅವರ ಜೊತೆ ಉತ್ತಮ ಬಾಂಧವ್ಯ ಇದೆ ಎಂದು ಹೇಳಿ ಕರಿಷ್ಮಾ ಅವರ ಹೆಸರನ್ನು ಹೇಳದೇ ಆಕೆ ತಮಗೆ ಅನ್ಯಾಯ ಮಾಡಿದುದಾಗಿ ಹೇಳಿದ್ದರು.
ಆದರೆ ಆ ನಟಿ ಕರಿಷ್ಮಾ ಕಪೂರ್ ಎಂದು ಈಗ ಬಹಿರಂಗವಾಗಿದೆ. ಆಕೆ ನನ್ನ ವಿಚಾರವಾಗಿ ತುಂಬ ಅಭದ್ರತೆಯಿಂದ ಇದ್ದಳು. ನಾಲ್ಕು ಸಿನಿಮಾಗಳಿಂದ ನನ್ನನ್ನು ತೆಗೆದು ಹಾಕುವಂತೆ ಮಾಡಿದ್ದಳು. ನಾನು ಆಕೆಯ ಜೊತೆ ಒಂದು ಸಿನಿಮಾ ಮಾಡಬೇಕಾಗಿ ಬಂತು. ಆ ನಟಿ ನಿರ್ಮಾಪಕರಿಗೂ, ಹೀರೋಗೂ ಕ್ಲೋಸ್ ಆಗಿದ್ದರು. ಈ ತರ ಎಲ್ಲ ಆಗತ್ತೆ, ಆದರೆ ನನ್ನ ಹತ್ರ ಈ ರೀತಿ ಆಟ ಆಡೋಕೆ ಆಗಲ್ಲ ಎಂದು ರವೀನಾ ಹೇಳಿದ್ದರು.
ಅಷ್ಟಕ್ಕೂ ಆಗಿರೋದು ಏನೆಂದರೆ, ರವೀನಾ ಮತ್ತು ಅಜಯ್ ದೇವಗನ್ (Ajay Devagan) ನಡುವೆ ಕುಚ್ ಕುಚ್ ಇತ್ತು. ಇವರಿಬ್ಬರೂ ಡೇಟಿಂಗ್ ಮಾಡುತ್ತಿದ್ದರು. ಆದರೆ ಇದೇ ವೇಳೆ ಅಜಯ್ ಅವರ ಕಣ್ಣು ಕರಿಷ್ಮಾ ಅವರ ಮೇಲೆ ಬಿತ್ತು. ಅವರು ಕರಿಷ್ಮಾ ಜೊತೆ ಡೇಟಿಂಗ್ (Dating) ಮಾಡಲು ಶುರು ಮಾಡಿದರು. ಇದರಿಂದಾಗಿ ಈ ಇಬ್ಬರು ನಟಿಯರ ಮಧ್ಯೆ ಪೈಪೋಟಿ, ಅಸೂಯೆಗಳ ಜಗಳ ಶುರುವಾಗಿತ್ತು. ಪಾರ್ಟಿಯೊಂದರಲ್ಲಿ (Party) ರವೀನಾ ಮತ್ತು ಕರಿಷ್ಮಾ ಕ್ಯಾಮೆರಾಕ್ಕೆ ಪೋಸ್ ಕೊಡುವ ಸಂದರ್ಭ ಬಂದಾಗ ಇಬ್ಬರೂ ದೂರ ಹೋಗಿದ್ದಾಗಲೇ ಇಬ್ಬರ ನಡುವಿನ ತಿಕ್ಕಾಟದ ಅರಿವಾಗಿತ್ತು. 'ಅಗತ್ಯ ಬಿದ್ದರೆ ನಾನು ಪೊರಕೆ ಜೊತೆ ಪೋಸ್ ಕೊಡ್ತೀನಿ. ಕರೀಷ್ಮಾ, ನಾನು ಸ್ನೇಹಿತರಲ್ಲ. ಕೆಲಸದ ವಿಷಯ ಬಂದಾಗ ಈ ರೀತಿ ಅಹಂಕಾರದ ಸಮಸ್ಯೆಗೆ ನಾನು ತಲೆಕೆಡಿಸಿಕೊಳ್ಳೋದಿಲ್ಲ" ಎಂದು ರವೀನಾ ಹೇಳಿದ್ದರು. ಈಗ ಎಲ್ಲವೂ ಸ್ಪಷ್ಟವಾಗಿ ಬಹಿರಂಗಗೊಂಡಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.