
ಮುಂಬೈ (ನ.07) ರಾಮಾಯಣ ಸಿನಿಮಾ ದೇಶ ವಿದೇಶಗಳಲ್ಲಿ ಬಿಡುಗಡೆಯಾಗಿದೆ. ಶ್ರೀರಾಮನಾಗಿ ರಣೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಸೇರಿದಂತೆ ಸ್ಟಾರ್ ತಾರಗಣ ಹೊಂದಿರುವ ರಾಮಾಯಣ ಬಾಕ್ಸ್ ಆಫೀಸ್‌ನಲ್ಲೂ ದಾಖಲೆ. ಕಲೆಕ್ಷನ್ ಮಾಡಿದೆ. ಬರೋಬ್ಬರಿ 4000 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ರಾಮಾಯಣ ಸಿನಿಮಾದ ಎರಡನೇ ಪಾರ್ಟ್ ಮುಂದಿನ ವರ್ಷ ಬಿಡುಗಡೆಯಾಗಲಿದೆ. ರಾಮಾಯಣ ಸಿನಿಮಾ ಭರ್ಜರಿ ಯಶಸ್ಸು ಗಳಿಸಿದೆ. ಇದರ ನಡುವೆ ರಣಬೀರ್ ಕಪೂರ್ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಕೆಲವೇ ವರ್ಷದಲ್ಲಿ ನಟನೆಗೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ.
ಶ್ರೀರಾಮನ ಪಾತ್ರದಲ್ಲಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ರಣಬೀರ್ ಕಪೂರ್ ನಟನೆಯಿಂದ ನಿವೃತ್ತಿ ಮಾತು ಅಭಿಮಾನಿಗಳಿಗೆ ಆಘಾತವಾಗಿದೆ. ಈ ಕುರಿತು ಸಂದರ್ಶನದಲ್ಲಿ ರಣಬೀರ್ ಕಪೂರ್ ಅಚ್ಚರಿ ಹೇಳಿಕೆ ನೀಡಿದ್ದಾರೆ. ನನ್ನ ವಯಸ್ಸು 44. ಇತ್ತೀಚಿನ ವರ್ಷಗಳಲ್ಲಿ ನಾನು 100 ರಿಂದ 125 ದಿನ ಕೆಲಸ ಮಾಡುತ್ತೇನೆ. ಇನ್ನುಳಿದ ದಿನ ಸಾಕಷ್ಟು ಸಮಯ ನನ್ನ ಬಳಿ ಇದೆ. ಸದ್ಯ ಸಹಿ ಹಾಕಿರುವ ಕೆಲ ಸಿನಿಮಾಗಳನ್ನು ಮುಗಿಸಬೇಕು. ಬಳಿಕ ನಟನೆಯಿಂದ ನಿವೃತ್ತಿ ಹೇಳುವುದಾಗಿ ರಣಬೀರ್ ಕಪೂರ್ ಹೇಳಿದ್ದಾರೆ.
ಮುಂದಿನ ಒಂದು ದಶಕ ನಾನು ನಟನಾಗಿ ಇರುತ್ತೇನೆ. ಮುಂದಿನ ಒಂದು ದಶಕ ನಟನಾಗಿ ನಾನು ಮುಂದುವರಿಯಬಹುದು. ಬಳಿಕ ಸಂಪೂರ್ಣವಾಗಿ ನಿರ್ದೇಶಕನಾಗಿ ತೊಡಗಿಸಿಕೊಳ್ಳಲು ಬಯಸಿದ್ದೇನೆ. ನನಗೆ ವಯಸ್ಸಾಯಿತು ಅನ್ನೋ ಕಾರಣಕ್ಕೆ ನಟನೆಯಿಂದ ದೂರ ಸರಿಯುತ್ತಿಲ್ಲ. ಸೃಜನಶೀಲತೆಯಿಂದ ಇರಲು ನಾನು ಬಯಸುತ್ತೇನೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ರಾಮಾಯಣ 2, ಆ್ಯನಿಮಲ್ 2, ಬ್ರಹ್ಮಾಸ್ತ್ರ ಪಾರ್ಟ್ 2 ಸೇರಿದಂತೆ ಕೆಲ ಪ್ರಮುಖ ಸಿನಿಮಾ ಬಳಿಕ ನಟನೆಗೆ ಗುಡ್ ಬೈ ಹೇಳುವುದಾಗಿ ಹೇಳಿದ್ದಾರೆ. ಈ ಸಿನಿಮಾದ ನಟನೆ ಬಳಿಕ ನಿರ್ದೇಶನದಲ್ಲಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಕಳೆದ ಎರಡು ತಿಂಗಳಿನಿಂದ ಸಿನಿಮಾ ಸ್ಕ್ರೀನ್‌ಪ್ಲೇ ಬರೆಯಲು ಆರಂಭಿಸಿದ್ದೇನೆ. ಹೊಸ ಕತೆ ಸೃಷ್ಟಿಸುವುದು, ಸಿನಿಮಾಗೆ ಹೊಂದಿಸಿಕೊಳ್ಳುವುದು, ಬರಹ, ಸಾಹಿತ್ಯ ಎಲ್ಲವೂ ಕಷ್ಟ. ಸಾಕಷ್ಟು ಕಲಿಯಲು ಇದೆ. ಮುಂದಿನ 2 ರಿಂದ 3 ವರ್ಷದಲ್ಲಿ ನಿರ್ದೇಶಕನಾಗಿ ಎಂಟ್ರಿಕೊಡಲು ಬಯಸಿರುವುದಾಗಿ ರಣಬೀರ್ ಕಪೂರ್ ಹೇಳಿದ್ದಾರೆ.
ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ಪೂರೈಸಬೇಕಿದೆ. ಇದಕ್ಕಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಹಲವು ಸವಾಲುಗಳನ್ನು ಸ್ವೀಕರಿಸಬೇಕಿದೆ ಎಂದು ರಣಬೀರ್ ಕಪೂರ್ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.