Manoj Kumar: ಪ್ರೇಮದ ಊರಲಿ ಆ ಎರಡು ಪಾತ್ರ ಮೆಚ್ಚಿದ್ದ ಡೈರೆಕ್ಟರ್; ಮನಬಿಚ್ಚಿ ಭಾವುಕರಾದ ಮನೋಜ್ ಕುಮಾರ್!

Published : Nov 07, 2026, 09:59 PM IST
Premada Oorali

ಸಾರಾಂಶ

ಪ್ರೇಮದ ಊರಲಿ ಸಿನಿಮಾದ ಯಶಸ್ಸಿನ ಕುರಿತು ಮಾತನಾಡಿದ ನಿರ್ದೇಶಕ ಮನೋಜ್ ಕುಮಾರ್, ತಮ್ಮನ್ನು ಹೆಚ್ಚು ಕಾಡಿದ ನಾಗಣ್ಣ ಮತ್ತು ವಸಂತ ಪಾತ್ರಗಳ ಹಿಂದಿನ ರಹಸ್ಯ ಹಾಗೂ ನೋವನ್ನು ಹಂಚಿಕೊಂಡಿದ್ದಾರೆ. ತಂಗಿಯ ಸಾವಿನ ರಹಸ್ಯ ಹೊತ್ತ ನಾಗಣ್ಣ ಮತ್ತು ಪ್ರೀತಿಯನ್ನು ತ್ಯಾಗ ಮಾಡಿದ ವಸಂತಳ ಅಸಹಾಯಕತೆಯನ್ನು ಅವರು ವಿವರಿಸಿದ್ದಾರೆ.

'ಪ್ರೇಮದ ಊರಲಿ' ಸಿನಿಮಾದ ಜರ್ನಿ ಹಾಗೂ ಸಕ್ಸಸ್ ಕುರಿತು ನಡೆದ ಸಂದರ್ಶನವೊಂದರಲ್ಲಿ, ನಿರ್ದೇಶಕ ಮನೋಜ್ ಕುಮಾರ್ ಅವರಿಗೆ ಒಂದು ಪ್ರಶ್ನೆ ಎದುರಾಗುತ್ತದೆ. "ಈ ಇಡೀ ಸಿನಿಮಾದಲ್ಲಿ ನಿಮ್ಮನ್ನು ಬಹಳವಾಗಿ ಕಾಡಿದ ಪಾತ್ರಗಳು ಯಾವುವು? ಎಂದು ಸಂದರ್ಶಕರು ಕೇಳಿದಾಗ, ನಿರ್ದೇಶಕರು ಕ್ಷಣಕಾಲ ಭಾವುಕರಾಗುತ್ತಾರೆ. ನಂತರ ತಮ್ಮ ಹೃದಯಕ್ಕೆ ತೀರ ಹತ್ತಿರವಾದ ಆ ಎರಡು ಪ್ರಮುಖ ಪಾತ್ರಗಳಾದ 'ನಾಗಣ್ಣ' (ರಂಗಾಯಣ ರಘು) ಮತ್ತು 'ವಸಂತ'ಳ ಪಾತ್ರದ ಹಿಂದಿನ ನೋವು, ಸಂಕಟಗಳನ್ನು ಮನಬಿಚ್ಚಿ ಹಂಚಿಕೊಳ್ಳುತ್ತಾರೆ.

ನಗುವ ಫೇಸ್ ಮಾಸ್ಕ್ ತೊಟ್ಟ 'ನಾಗಣ್ಣ'!

ನಾಗಣ್ಣನ ಪಾತ್ರ ತಮಗೆ ಯಾಕೆ ಅಷ್ಟೊಂದು ಇಷ್ಟ ಮತ್ತು ಅದು ಯಾಕೆ ಕಾಡುತ್ತದೆ ಎಂಬುದಕ್ಕೆ ನಿರ್ದೇಶಕರು ಕಥೆಯ ಆಳವಾದ ಆಯಾಮವನ್ನು ಬಿಚ್ಚಿಡುತ್ತಾರೆ. ಕಥೆಯಲ್ಲಿ ನಾಗಣ್ಣ ಮಾಡಿದ ಒಂದು ತಪ್ಪಿನಿಂದಾಗಿ ಅವನ ಸ್ವಂತ ತಂಗಿಯೇ ಜೀವ ಕಳೆದುಕೊಳ್ಳಬೇಕಾಗುತ್ತದೆ (ಈ ಸಸ್ಪೆನ್ಸ್ ಪ್ರೇಕ್ಷಕರಿಗೆ ಸೆಕೆಂಡ್ ಹಾಫ್‌ನಲ್ಲಿ ರಿವೀಲ್ ಆಗುತ್ತದೆ). ತನ್ನದೇ ತಪ್ಪಿನಿಂದ ತಂಗಿ ತೀರಿಹೋದಳು ಎನ್ನುವ ಜನ್ಮಭೂಮಿಯಷ್ಟು ದೊಡ್ಡ ನೋವು ಮತ್ತು ಅಪರಾಧ ಪ್ರಜ್ಞೆಯನ್ನು ನಾಗಣ್ಣ ಎದೆಯೊಳಗೇ ಇಟ್ಟುಕೊಂಡು ಬದುಕುತ್ತಿರುತ್ತಾನೆ.

ಮಗನಿಗಾಗಿ ಮುಚ್ಚಿಟ್ಟ ಕಣ್ಣೀರು!

ತಂಗಿಯನ್ನು ಕಳೆದುಕೊಂಡ ಆ ಮಹಾನ್ ದುಃಖವನ್ನು ಇಡೀ ಜಗತ್ತಿಗೆ ಎಲ್ಲೂ ತೋರ್ಪಡಿಸಿಕೊಳ್ಳದೆ, ಹೊರಗೆ ಸದಾ ಖುಷಿ-ಖುಷಿಯಾಗಿ ನಗುತ್ತಾ ತನ್ನ ಮಗ ಸಂತುವನ್ನು ಸಾಕುತ್ತಾನೆ. "ನನ್ನ ಮಗನಿಗೆ ಅಮ್ಮ ಇಲ್ಲದಿದ್ದರೂ, ಅವಳ ಆಸೆಯಂತೆಯೇ ನನ್ನ ಮಗನನ್ನು ಅತ್ಯುತ್ತಮವಾಗಿ ಬೆಳೆಸುತ್ತೇನೆ" ಎಂದು ಹಠ ತೊಟ್ಟು ಮಗನನ್ನು ಸಲಹುವ ನಾಗಣ್ಣನ ಜರ್ನಿ ಕಣ್ಣೀರು ತರಿಸುವಂತದ್ದು. ಕಥೆಯ ಒಂದು ಹಂತದಲ್ಲಿ ನಾಗಣ್ಣ ತನ್ನ ಇಡೀ ಸ್ವಾಭಿಮಾನವನ್ನು ಬದಿಗಿಟ್ಟು, ತನ್ನ ಮಗ ಸಂತುವಿನ ಹೆಂಡತಿಯ (ಹೀರೋಯಿನ್) ಕಾಲು ಹಿಡಿಯುವ ಪರಿಸ್ಥಿತಿ ಬರುತ್ತದೆ. ಆ ಸನ್ನಿವೇಶವನ್ನು ವಿವರಿಸುತ್ತಾ ನಿರ್ದೇಶಕರು, ಒಬ್ಬ ತಂದೆ ಮಗನಿಗಾಗಿ ಆ ಮಟ್ಟಕ್ಕೆ ಇಳಿದು ಕಾಲು ಹಿಡಿಯುವಾಗ, 'ಅಯ್ಯೋ ನನ್ನ ಜೀವನ ಇಷ್ಟೇನಾ?' ಅನ್ನಿಸಿಬಿಡುತ್ತದೆ. ಅದನ್ನು ಸೃಷ್ಟಿಸುವುದು ಮತ್ತು ಪರದೆಯ ಮೇಲೆ ನೋಡುವುದು ತುಂಬಾ ಕಷ್ಟವಿತ್ತು" ಎನ್ನುತ್ತಾರೆ.

ಹೆಣ್ಣಿನ ಅಸಲಿ ಅಸಹಾಯಕತೆ ವಿವರಿಸಿದ ವಸಂತ!

ಇನ್ನು ವಸಂತಳ ಪಾತ್ರದ ಬಗ್ಗೆ ಮಾತನಾಡಿದ ಮನೋಜ್ ಕುಮಾರ್, ಇವತ್ತಿನ ಸಮಾಜ ಹೆಣ್ಣುಮಕ್ಕಳನ್ನು ಎಷ್ಟು ಸುಲಭವಾಗಿ ಬ್ಲೇಮ್ ಮಾಡುತ್ತದೆ ಮತ್ತು ಅದರ ಹಿಂದಿನ ವಾಸ್ತವವೇನು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದ್ದಾರೆ. ಇವತ್ತಿನ ಕಾಲದಲ್ಲಿ ಗೊತ್ತಿದ್ದೋ, ಗೊತ್ತಿಲ್ಲದೆಯೋ ಯಾರಿಗಾದರೂ ಪ್ರೀತಿ ಆಗಿಬಿಡುತ್ತದೆ. ಆದರೆ ಹೆಣ್ಣುಮಕ್ಕಳ ವಿಷಯ ಬಂದಾಗ ಫ್ಯಾಮಿಲಿ ಸೆಂಟಿಮೆಂಟ್ ಅಡ್ಡ ಬರುತ್ತದೆ. ಹೆಣ್ಣುಮಕ್ಕಳು ಪ್ರೀತಿಸಿದವನನ್ನು ಬಿಟ್ಟು ಹೋಗುತ್ತಾರೆ ಎಂದರೆ ಅದಕ್ಕೆ ಅವರ ಅಮ್ಮನ ಒಂದು ಹನಿ ಕಣ್ಣೀರೋ ಅಥವಾ ಅಪ್ಪನ ಅಸಹಾಯಕತೆಯೋ ಕಾರಣವಾಗಿರುತ್ತದೆ. ಹೆತ್ತವರ ಕಣ್ಣೀರಿಗೆ ಕರಗಿ ಪರಿಸ್ಥಿತಿಗೆ ಶರಣಾಗಿ ಅವರು ಪ್ರೀತಿಯನ್ನು ತ್ಯಾಗ ಮಾಡಬೇಕಾಗುತ್ತದೆ ಎಂದು ವಸಂತಳು ಸಂತುನನ್ನು ಬಿಟ್ಟು ಹೋಗುವ ಸನ್ನಿವೇಶಕ್ಕೆ ನ್ಯಾಯ ಒದಗಿಸಿದ್ದಾರೆ.

ಸುಲಭವಾಗಿ ಮೋಸಗಾರ್ತಿ ಅನ್ನಬೇಡಿ!

ನಾಳೆ ದಿನ ಇವನು ನನಗೆ ತಾಳಿ ಕಟ್ಟಲ್ಲ ಅಂತ ಗೊತ್ತಾದರೆ ಯಾವ ಹೆಣ್ಣೂ ತನ್ನ ಮನಸ್ಸನ್ನು ಕೊಡುವುದಿಲ್ಲ. ಇಲ್ಲಿ ನಾಳೆ ಮದುವೆ ಆಗ್ತಾರೆ ಅನ್ನೋ ನಂಬಿಕೆಯಲ್ಲೇ ಪ್ರೀತಿಸಿರುತ್ತಾರೆ. ಆದರೆ ಪರಿಸ್ಥಿತಿಗಳು ಅವರನ್ನು ದೂರ ಮಾಡುತ್ತವೆ. ಪ್ರತಿ ಬಾರಿಯೂ ನಾವು 'ಅವಳು ಕೈಕೊಟ್ಟು ಹೋದಳು, ಬಿಟ್ಟು ಹೋದಳು, ಮೋಸ ಮಾಡಿದಳು' ಅಂತ ಎಷ್ಟು ಸುಲಭವಾಗಿ ಹೇಳಿಬಿಡುತ್ತೇವೆ. ಆದರೆ ವಸಂತಳದ್ದು ಆ ತರಹದ ಪಾತ್ರವಲ್ಲ" ಎಂದು ಹೆಣ್ಣಿನ ಪರವಾಗಿ ಮಾತನಾಡಿದ್ದಾರೆ. ಪ್ರೀತಿ ಕೈತಪ್ಪಿದ ಮೇಲೆ ವಸಂತ ಬೇರೆ ಜೀವನವನ್ನು ಆರಂಭಿಸುತ್ತಾಳೆ. ಆದರೆ ಮದುವೆಯಾದ ನಂತರ ಆಕೆ ತನ್ನ ಗಂಡನಿಗೆ ಮೋಸ ಮಾಡುವುದಿಲ್ಲ. ಆ ನೆನಪುಗಳನ್ನು ಬದಿಗಿಟ್ಟು ತನ್ನ ಸಂಸಾರದಲ್ಲಿ ಚೆನ್ನಾಗಿ ಬದುಕುತ್ತಾಳೆ ಎಂಬುದನ್ನು ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೀರಿಯಲ್​ ಖ್ಯಾತ ನಟನ ಕೈಹಿಡಿದ 'ಸಿಂಧು ಭೈರವಿ' ನಟಿ ಇಂಚರಾ: ಮದುವೆ ಕ್ಯೂಟ್​ ಫೋಟೋಸ್​ ಇಲ್ಲಿವೆ
Amruthadhaare Serial ಮುಗಿದೋಯ್ತು, ಮತ್ತೊಂದು ಪ್ರಾಜೆಕ್ಟ್​ ಜೊತೆ ಬರುವೆ: ನಟ ರಾಜೇಶ್​ ನಟರಂಗ ಭಾವುಕ