
‘ನಾನು ಕೇಳಿದ ಮೊದಲ ಕಥೆ ರಾಮಾಯಣ. ಬಹಳ ಚಿಕ್ಕವನಿದ್ದಾಗ ರಾತ್ರಿ ಮಲಗುವ ಮುಂಚೆ ಅಜ್ಜ ಈ ಕಥೆ ಹೇಳುತ್ತಿದ್ದರು. ಇಂದು ಅದೇ ಕಥೆಯನ್ನು ಜಗತ್ತಿನ ಮುಂದೆ ಹೇಳಲು ಹೊರಟಿದ್ದೇನೆ. ಅಜ್ಜ ಹೇಳಿದಾಗ ಮನಸ್ಸಲ್ಲಿ ಮೂಡಿದ್ದ ರಾವಣನ ಇಮೇಜ್, ಬದಲಾದ ಮನಸ್ಥಿತಿಯಲ್ಲಿ ಆತ ನನ್ನನ್ನು ಆವರಿಸಿದ ಬಗೆ ಈ ಪಾತ್ರಕ್ಕೆ ಜೀವ ತುಂಬಲು ಸಹಕಾರಿಯಾಯಿತು.’
ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿರುವ ಜಗತ್ಪ್ರಸಿದ್ಧ ‘ಸ್ಯಾನ್ ಡಿಯಾಗೋ ಕಾಮಿಕ್ ಕಾನ್’ ಉತ್ಸವದ ಮಾಧ್ಯಮ ಸಂದರ್ಶನದಲ್ಲಿ ಯಶ್ ಹೇಳಿದ ಮಾತುಗಳಿವು. ಈ ಫೆಸ್ಟಿವಲ್‌ನಲ್ಲಿ ಯಶ್‌ಗೆ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿತು. ಅನೇಕ ಅಭಿಮಾನಿಗಳು ‘ಟಾಕ್ಸಿಕ್’ ಸಿನಿಮಾದ ಸೂಪರ್ ಹಿಟ್ ಡೈಲಾಗ್ ‘ಡ್ಯಾಡಿ ಈಸ್ ಹೋಂ’ಅನ್ನು ಗಟ್ಟಿ ದನಿಯಲ್ಲಿ ಹೇಳಿ ಗಮನಸೆಳೆದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್, ‘ರಾವಣನ ಪಾತ್ರಕ್ಕಾಗಿ ಬಾಡಿ ಟ್ರಾನ್ಸ್‌ಫಾರ್ಮೇಶನ್ ಮಾಡಿದ್ದೇನೆ. ಆ ಪಾತ್ರವನ್ನು ಜೀವಿಸಲು ಬೇಕಾದ ಮೈಕಟ್ಟನ್ನು ರೂಪಿಸುವುದು ನಟನಾಗಿ ನನ್ನ ಕರ್ತವ್ಯ. ಅದಕ್ಕಿಂತಲೂ ಮೂರು ಲೋಕದ ಒಡೆಯ, ಮಹಾನ್ ಬುದ್ಧಿವಂತ, ಸಾಹಸಿ, ಕಲಾವಿದ ಎಲ್ಲವೂ ಆಗಿರುವ ರಾವಣನ ಆರೋಗೆನ್ಸ್ ಲೆವೆಲ್ ಎಷ್ಟಿರಬಹುದು, ಆತನ ಯೋಚನೆಗಳು ಹೇಗಿರಬಹುದು ಎಂಬುದನ್ನು ಕಂಡುಕೊಂಡು ಪಾತ್ರಕ್ಕಿಳಿಸುವುದು ಚಾಲೆಂಜಿಂಗ್ ಆಗಿತ್ತು. ಹೆಚ್ಚು ಕಡಿಮೆ ಸಮಾನ ಬಲಶಾಲಿಗಳಾದ ಇಬ್ಬರ ಮುಂದೆ ಸಮಾನವಾದ ಚಾಲೆಂಜ್ ಬಂದಾಗ ಇಬ್ಬರೂ ಅದಕ್ಕೆ ಸ್ಪಂದಿಸುವ ಬಗೆ ಹೇಗೆ ಎನ್ನುವುದು ಹೈಲೈಟ್’ ಎಂದರು.
‘ಅಭಿಮಾನಿಗಳೊಂದಿಗೆ ಅಮೆರಿಕಾ ನೆಲದಲ್ಲಿ ಸಿನಿಮಾವನ್ನು ಸೆಲೆಬ್ರೇಟ್ ಮಾಡುವುದು ಎಗ್ಸೈಟಿಂಗ್ ಅನುಭವ. ಈ ಇಂಟರ್‌ನೆಟ್ ಯುಗದಲ್ಲಿ ಪ್ರತೀ ಕಥೆಗೂ ಗ್ಲೋಬಲ್ ಲೆವೆಲ್‌ಗೆ ತಲುಪುವ ಸಾಧ್ಯತೆ ಇರುತ್ತದೆ. ಅದನ್ನು ನಾವು ಎಕ್ಸ್‌ಪ್ಲೋರ್ ಮಾಡಬೇಕಿದೆ. ರಾಮಾಯಣದ ಕಥೆ ಸಾವಿರಾರು ವರ್ಷ ಹಳೆಯದಾದರೂ ಇದರಲ್ಲಿರುವ ಕಂಟೆಂಟ್ ಮನುಷ್ಯನ ಭಾವನೆ, ಚಿಂತನೆಗಳಿಗೆ ಸಂಬಂಧಿಸಿದ್ದು. ಕಾಲ ಕಾಲಕ್ಕೆ ಪ್ರತಿಯೊಬ್ಬರಿಗೂ ಕನೆಕ್ಟ್ ಆಗುವ ಗುಣದಿಂದ ಇಲ್ಲಿಯವರೆಗೆ ಹರಿದುಬಂದಿದೆ. ಜನರಿಗೆ ಗೊತ್ತಿರುವ ಅವರ ಬದುಕಿನ ಭಾಗವೇ ಆಗಿರುವ ಮಹಾಕಾವ್ಯವನ್ನು ಅವರಿಗೆ ಕನ್ವಿನ್ಸ್ ಆಗುವ ರೀತಿ ಪ್ರಸ್ತುತಪಡಿಸುವುದು ಸಣ್ಣ ಸವಾಲಲ್ಲ’ ಎಂದೂ ಯಶ್ ಹೇಳಿದರು.
ಯಶ್ ‘ರಾಮಾಯಣ’ ಚಿತ್ರದ ಟ್ರೇಲರ್ ಬಿಡುಗಡೆ ಮುಂದೂಡಲಾಗಿದೆ. ಜು.24ರಂದು ಅಮೆರಿಕಾದಲ್ಲಿ ಟ್ರೇಲರ್ ಬಿಡುಗಡೆ ಆಗುತ್ತದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ‘ರಾಮಾಯಣ’ ಭಾಗ 1 ಚಿತ್ರದ ಟ್ರೇಲರ್ ಬಿಡುಗಡೆ ಆಗುತ್ತಿಲ್ಲ ಎಂದು ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.