
ಟಿವಿಯಲ್ಲಿ ಕಲ್ಟ್ ಸಿನಿಮಾ ನೋಡಿ..
ಸಿನಿಮಾ ಎನ್ನುವುದು ಸಿನಿರಸಿಕರ ಲೈಫ್‌ನ ಒಂದು ಅವಿಭಾಜ್ಯ ಅಂಗ.. ತುಂಬಾ ಸಮಯದಿಂದ ಯಾವುದಾದರೂ ಸಿನಿಮಾ ನೋಡಿಲ್ಲ ಎಂದರೆ ಚಡಪಡಿಸುವ ಹಲವರು ನಮ್ಮನಿಮ್ಮ ಮಧ್ಯೆಯೇ ಇದ್ದಾರೆ. ಅ ವಿಷಯದಲ್ಲಿ ಕನ್ನಡ ಸಿನಿಮಾ ಪ್ರೇಮಿಗಳೂ ಕೂಡ ಹೊರತಲ್ಲ. ಇದೀಗ ಸ್ಯಾಂಡಲ್‌ವುಡ್ ಸಿನಿಮಾಪ್ರಿಯರಿಗೆ ಸಖತ್ ಖುಷಿ ಕೊಡುವ ಸಮಾಚಾರವೊಂದು ಬಂದಿದೆ.. ಅದೇನು ನೋಡಿ..
ಹೌದು, ಅದಕ್ಕೆ ಉತ್ತರ ಕಲ್ಟ್ (Cult) ಸಿನಿಮಾ.. ಝೈದ್ ಖಾನ್, ರಚಿತಾ ರಾಮ್ ಹಾಗೂ ಮಲೈಕಾ ವಸುಪಾಲ್ ನಟನೆಯ 'ಕಲ್ಟ್' ಸಿನಿಮಾ ಇದೇ ವರ್ಷ ಜನವರಿ 23, 2026 ರಂದು ತೆರೆಗೆ ಬಂದಿತ್ತು. ಈ ಸಿನಿಮಾ ಒಂದು ರೋಮ್ಯಾಂಟಿಕ್ ಆಕ್ಷನ್ ಡ್ರಾಮಾ ಚಲನಚಿತ್ರ. ಇದು ಜುಲೈ 26, 2026ರಂದು ಮಧ್ಯಾಹ್ನ 3 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂಲಕ ಪ್ರಸಾರವಾಗುತ್ತಿದೆ.
ಕಲ್ಟ್ ಸಿನಿಮಾ (Cult Film) ಎಂದರೆ ವಿಶೇಷವಾದ, ಭಕ್ತರಂತೆ ಅಂಟಿಕೊಂಡಿರುವ ಸಣ್ಣ ಆದರೆ ತೀವ್ರವಾದ ಅಭಿಮಾನಿ ಬಳಗವನ್ನು ಹೊಂದಿರುವ ಚಲನಚಿತ್ರ. ಇವು ಸಾಮಾನ್ಯ ಚಿತ್ರಗಳಂತೆ ದೊಡ್ಡ ಮಟ್ಟದಲ್ಲಿ ಗೆಲ್ಲದಿದ್ದರೂ, ಕಾಲಕ್ರಮೇಣ ಅಪಾರ ಜನಪ್ರಿಯತೆ ಪಡೆಯುತ್ತವೆ. ಕನ್ನಡದಲ್ಲಿ ಅನಿಲ್ ಕುಮಾರ್ ನಿರ್ದೇಶನದ, ಜೈದ್ ಖಾನ್, ರಚಿತಾ ರಾಮ್ ಮತ್ತು ಮಲೈಕಾ ವಸುಪಾಲ್ ನಟಿಸಿರುವ 'ಕಲ್ಟ್' ಎಂಬ ಹೆಸರಿನ ಹೊಸ ರೋಮ್ಯಾಂಟಿಕ್ ಸಿನಿಮಾ ಈ ಕೆಟಗರಿಗೆ ಸೇರಿದ ಚಲನಚಿತ್ರವಾಗಿದೆ.
ತಾರಾಗಣ: ಝೈದ್ ಖಾನ್ (ಮಾಧವ), ರಚಿತಾ ರಾಮ್ (ಇಥಿ) ಮತ್ತು ಮಲೈಕಾ ವಸುಪಾಲ್ (ಗೀತಾ)
ನಿರ್ದೇಶಕರು: ಅನಿಲ್ ಕುಮಾರ್
ಸಂಗೀತ ನಿರ್ದೇಶಕರು: ಅರ್ಜುನ್ ಜನ್ಯ
ಕಥೆ: ಯುವಕರ ಪ್ರೀತಿ, ಸ್ನೇಹ ಮತ್ತು ಜೀವನದ ನೈಜ ಸನ್ನಿವೇಶಗಳ ಭಾವನಾತ್ಮಕ ಹಂದರವನ್ನು ಈ ಸಿನಿಮಾ ಹೊಂದಿದೆ.
ಕಲ್ಟ್ ಸಿನಿಮಾವನ್ನು ಸ್ಯಾಂಡಲ್‌ವುಡ್ ಸಿನಿಮಾ ವೀಕ್ಷಕರಲ್ಲಿ ಹಲವರು ಥಿಯೇಟರ್‌ಗಳಲ್ಲಿ ನೋಡಿರಬಹುದು. ಆದ್ರೆ ನೋಡಲಾಗದ ಬಹಳಷ್ಟು ಮಂದಿ ಈಗ ಮನೆಯಲ್ಲೇ ಕುಳಿತು ಈ ಕಲ್ಟ್ ಸಿನಿಮಾವನ್ನು ವೀಕ್ಷಿಸಬಹುದು. ರಚಿತಾ ರಾಮ್ ಸೇರಿದಂತೆ ಈ ಚಿತ್ರದಲ್ಲಿನ ಎಲ್ಲಾ ಕಲಾವಿದರ ಅಭಿನಯಕ್ಕೆ ಮತ್ತು ಸಿನಿಮಾ ಮೇಕಿಂಗ್ ಹಾಗೂ ಕಥೆಯ ಬಗ್ಗೆ ಸಾಕಷ್ಟು ಒಳ್ಳೆಯ ಅಭಿಪ್ರಾಯ ವ್ಯಕ್ತವಾಗಿತ್ತು.
ಇದೀಗ ಈ ಸಿನಿಮಾವನ್ನು ನೀವು 26 ಜುಲೈ 2026ರಂದು ಮಧ್ಯಾಹ್ನ 3 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ 'ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್' ಮೂಲಕ ವೀಕ್ಷಿಸಬಹುದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.