4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ ಸಂಬಳ? ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು?

Published : Apr 04, 2026, 12:18 PM IST
ramayana ravan yash

ಸಾರಾಂಶ

ನಿತೇಶ್ ತಿವಾರಿ ನಿರ್ದೇಶನದ, 4 ಸಾವಿರ ಕೋಟಿ ಬಜೆಟ್‌ನ 'ರಾಮಾಯಣ' ಸಿನಿಮಾದಲ್ಲಿ ನಟಿಸುತ್ತಿರುವ ಕಲಾವಿದರ ಸಂಭಾವನೆ ವಿವರಗಳು ಬಹಿರಂಗಗೊಂಡಿವೆ. ಶ್ರೀರಾಮನ ಪಾತ್ರಧಾರಿ ರಣಬೀರ್ ಕಪೂರ್, ರಾವಣನಾಗಿ ನಟಿಸುತ್ತಿರುವ ಯಶ್ ಹಾಗೂ ಸೀತೆ ಪಾತ್ರದಲ್ಲಿರುವ ಸಾಯಿ ಪಲ್ಲವಿ ಸೇರಿದಂತೆ ಪ್ರಮುಖ ಕಲಾವಿದರು ಪಡೆದ ಕೋಟಿ ಕೋಟಿ ಸಂಭಾವನೆಯ ಸಂಪೂರ್ಣ ಮಾಹಿತಿ ಇಲ್ಲಿದೆ.

ರಾಕಿಂಗ್ ಸ್ಟಾರ್​ ಯಶ್​ ಹಾಗು ರಣಬೀರ್​ ಕಪೂರ್​ ನಟನೆಯ ಸಿನಿಮಾ ರಾಮಾಯಣ. ಇದು ಇಡೀ ವಿಶ್ವವೇ ಬೆಳ್ಳಿತೆರೆ ಮೇಲೆ ನೋಡೋದಕ್ಕೆ ಕಾತರದಿಂದ ಕಾಯ್ತಾ ಇರೋ ಹಿಂದುಸ್ತಾನದ ಮಹಾಕಾವ್ಯ. ಈ ರಾಮಾಯಣಕ್ಕೆ ಖರ್ಚಾಗುತ್ತಿರೋದು ಬರೋಬ್ಬರಿ 4 ಸಾವಿರ ಕೋಟಿ ಅಂತ ನಿರ್ದೇಶಕರೇ ಹೇಳಿಕೊಂಡಿದ್ದಾರೆ. ಇದೀಗ ಟೀಸರ್​ ಬಿಡುಗಡೆ ಆಗಿದ್ದು, ಈ ಸಿನಿಮಾದಲ್ಲಿ ನಟಿಸಿದ ಕಲಾವಿಧರ ಸಂಭಾವನೆಯ ಲೀಸ್ಟ್​ ಕೂಡ ರಿವಿಲ್ ಆಗಿದೆ. ಹಾಗಾದ್ರೆ ರಾಮಾಯಣಕ್ಕೆ ಯಾರು ಏಷ್ಟೆಲ್ಲಾ ಸಂಭಾವನೆ ಪಡೆದಿದ್ದಾರೆ. ಈ ಸಿನಿಮಾ ಬಜೆಟ್​​ 4 ಸಾವಿರ ಕೋಟಿ ಆಗೋದಕ್ಕೆ ಕಾರಣ ಏನು ನೋಡೋಣ ಬನ್ನಿ..

4 ಸಾವಿರ ಕೋಟಿ ಬಜೆಟ್‌ನ ರಾಮಾಯಣದಲ್ಲಿ ಯಾರಿಗೆಷ್ಟು ಕೋಟಿ?

ರಾಮಾಯಣ. ಭಾರತೀಯ ಚಿತ್ರರಂಗ ಇತಿಹಾಸದಲ್ಲೇ ಅತ್ಯಂತ ಅದ್ದೂರಿ ಬಜೆಟ್‌ನಲ್ಲಿ ತಯಾರಾಗ್ತಿರುವ ಸಿನಿಮಾ. ಈ ರಾಮಾಯಣದ ಟೀಸರ್​ ರಿಲೀಸ್ ಆಗಿದೆ. ಟೀಸರ್​ ನೋಡಿದವರು ಅಬ್ಬಬ್ಬಾ ಅಂತ ಥ್ರಿಲ್​ ಆಗಿದ್ದಾರೆ. ದೇಶ ವಿದೇಶಗಳಲ್ಲಿ ನಮ್ಮ ಮಹಾಕಾವ್ಯದ ಕಥೆಯನ್ನ ಕೊಂಡಾಡುತ್ತಿದ್ದಾರೆ. ಈ ಸಿನಿಮಾ ಬಜೆಟ್​ 4 ಸಾವಿರ ಕೋಟಿ ಅಂತ ಗೊತ್ತಾಗಿದೆ. ಸಿನಿಮಾ ಮೇಕಿಂಗ್ ನೋಡಿದ್ರೆ ಇಷ್ಟೊಂದು ಹಣ ಖರ್ಚಾಗಿರೋದು ಡೌಟೆ ಇಲ್ಲ ಅನ್ನಿಸುತ್ತೆ.

ಯಶ್​​​ ಕಟ್ಟಿರೋ ರಾಮಾಯಣದಲ್ಲಿ ಘಟಾನುಘಟಿ ಕಲಾವಿದರ ದಂಡು!

ಭಾರತೀಯ ಚಿತ್ರರಂಗದ ಮತ್ತೊಂದು ಮೆಗಾಮೂವಿ ರಾಮಾಯಣ. ಈ ಸಿನಿಮಾಗೆ ನಟ ಯಶ್ ಕೂಡ ನಿರ್ಮಾಪಕ. ಈ ಸಿನಿಮಾದ ಬಜೆಟ್ 4 ಸಾವಿರ ಕೋಟಿ ಅಂತ ನಿರ್ದೇಶಕರು ಹೇಳಿದಾಗ್ಲೆ, ಯಾಕಿಷ್ಟು ಬಂಡವಾಳ ಅಂತ ಆಶ್ಚರ್ಯ ಆಗಿತ್ತು. ಈಗ ಅದರ ಗುಟ್ಟು ರಿವಿಲ್ ಆಗಿದೆ. ಯಶ್​ ನಿರ್ಮಾಣ ಮಾಡುತ್ತಿರೋ ರಾಮಾಯಣದಲ್ಲಿ ಘಟಾನುಘಟಿ ಕಲಾವಿದರಿದ್ದಾರೆ. ಶ್ರೀರಾಮನ ಪಾತ್ರದಿಂದ ಹಿಡಿದು ರಾವಣನ ಪಾತ್ರದವರೆಗೆ ಪ್ರತಿಯೊಬ್ಬ ಕಲಾವಿದರೂ ಕೋಟಿ ಕೋಟಿ ಹಣವನ್ನು ಜೇಬಿಗಿಳಿಸಿದ್ದಾರೆ.

ಶ್ರೀರಾಮನ ಪಾತ್ರಕ್ಕೆ ರಣಬೀರ್ ಕಪೂರ್ ಪಡೆದಿದ್ದೆಷ್ಟು ಗೊತ್ತಾ..?

ಸಿನಿಮಾದಲ್ಲಿ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಪಾತ್ರ ರಣಬೀರ್ ಕಪೂರ್ ರದ್ದು. ಅಲ್ಲಿಗೆ ಈ ಕತೆಯ ಹೀರೋ ರಣಬೀರ್​​. ಮಹಾಪುರುಷನ ರೋಲ್‌ಗೆ ರಣಬೀರ್​ ಅಚ್ಚುಕಟ್ಟಾಗಿ ಸೂಟ್ ಆಗಿದ್ದಾರೆ ಅಂತ ಗೊತ್ತಾಗಿದ್ದೇ ಈ ಟೀಸರ್‌ನಿಂದ. ರಾಮ ಅಂದ್ರೆ ಈಗ ರಣಬೀರ್​ ಕಣ್ಣ ಮುಂದೆ ಬರ್ತಾರೆ. ಈ ರೋಲ್ ಮಾಡೋದಕ್ಕೆ ಕಪೂರ್​ ಕುಡಿ ಪಡೆದ ಸಂಭಾವನೆ ಕೇಳಿದ್ರೆ ಆಶ್ಚರ್ಯ ಆಗುತ್ತೆ. ರಣಬೀರ್‌ಗೆ 150 ಕೋಟಿ ಸಂಭಾವನೆ ಕೊಡಲಾಗಿದೆಯಂತೆ.

ರಾಮಾಯಣ ಸಿನಿಮಾ ಎರಡು ಪಾರ್ಟ್​​ ಆಗಿ ತೆರೆಗೆ ಬರ್ತಾ ಇದೆ. ಈ ವರ್ಷದ ದೀಪಾವಳಿ ಹಬ್ಬಕ್ಕೆ ಮೊದಲ ಭಾಗ ಬಿಡುಗಡೆ ಆಗುತ್ತೆ. ರಾಮನಾಗಿರೋ ರಣಬೀರ್​ ಕಪೂರ್‌ಗೆ ಮೊದಲ ಭಾಗಕ್ಕೆ 75 ಕೋಟಿ ಎರಡನೇ ಪಾರ್ಟ್‌ಗೆ 75 ಕೋಟಿಯಂತೆ ಸಂಭಾವನೆ ಕೊಡಲಾಗುತ್ತಿದೆಯಂತೆ.

ರಾಕಿಂಗ್ ಸ್ಟಾರ್​ ಯಶ್ ಸಂಭಾವನೆ ಎಷ್ಟು..?

ಇದೇ ನಮ್ಮ ಕನ್ನಡಿಗರಿಗಿರೋ ಕುತೂಹಲ. ರಾಮಾಯಣದಲ್ಲಿ ಲಂಕೇಶ್ವರ ರಾವಣ ಆಗೋದಕ್ಕೆ ಯಶ್‌ಗೆ ಎಷ್ಟು ಸಂಭಾವನೆ ಸಿಕ್ಕಿರಬಹುದು ಅನ್ನೋ ಕುತೂಹಲ. ಈ ಸಿನಿಮಾದ ಪ್ರತಿ ಭಾಗಕ್ಕೆ ಯಶ್​ 50 ಕೋಟಿ ಸಂಭಾವನೆ ಪಡೆದಿದ್ದಾರಂತೆ. ಇದರ ಜೊತೆಗೆ ಸಿನಿಮಾದ ಸಹ ನಿರ್ಮಾಪಕ ಆಗಿರೋದ್ರಿಂದ ಬರೋ ಲಾಭದಲ್ಲೂ ಯಶ್‌ಗೆ ಪಾಲು ಸಿಗಲಿದೆ. ಅಲ್ಲಿಗೆ ಎಲ್ಲರಿಗಿಂತಾ ಹೆಚ್ಚು ಲಾಭ ಯಶ್​​​ ಅಕೌಂಟ್​ ಸೇರಲಿದೆ.

ಸೀತಾದೇವಿ ಸಾಯಿ ಪಲ್ಲವಿಗೆ ಸಿಕ್ಕಿದೆ ಕೋಟಿ ಕೋಟಿ ದುಡ್ಡು..!

ರಾಮಾಯಣದಲ್ಲಿ ಸೀತಾ ದೇವಿ ರೋಲ್‌ಗೆ ಭಾರಿ ಡಿಮ್ಯಾಂಡ್​ ಇತ್ತು. ಈ ರೋಲ್​ ಮಾಡೋದಕ್ಕೆ ಬಂದು ಹೋದವರು ಒಬ್ಬಿಬ್ಬರಲ್ಲ. ಆದ್ರೆ ಫೈನಲ್ ಆಗಿದ್ದು ಮಾತ್ರ ನ್ಯಾಚ್ಯೂರಲ್​ ಬ್ಯೂಟಿ ಸಾಯಿ ಪಲ್ಲವಿ. ಸೀತೆಯಾಗಿ ಮಿಂಚುತ್ತಿರೋ ಸಾಯಿ ಪಲ್ಲವಿಗೆ 12 ಕೋಟಿ ಹಣ ಕೊಡಲಾಗಿದೆ. ಸಾಯಿ ಪಲ್ಲವಿ ಸಾಮಾನ್ಯವಾಗಿ 2 ರಿಂದ 3 ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ರಾಮಾಯಣಕ್ಕೆ ಮಾತ್ರ ಭಾರಿ ಮೊತ್ತ ಬಾಚಿದ್ದಾರೆ ಸಾಯಿ ಪಲ್ಲವಿ. ಈಕೆ ನೋಡೋಕು ತೇಟ್ ಸೀತೆ ಹಾಗೆ ಕಾಣ್ತಿದ್ದಾರೆ.

ಹನುಮಂತನ ಪಾತ್ರಕ್ಕೆ ಭರ್ಜರಿ ಡಿಮ್ಯಾಂಡ್..!

‘ಗದರ್ 2’ ನಂತರ ಸನ್ನಿ ಡಿಯೋಲ್ ಅವರ ಬೇಡಿಕೆ ಹೆಚ್ಚಾಗಿತ್ತು. ರಾಮಾಯಣದಲ್ಲಿ ಹನುಮಂತನ ಪಾತ್ರಕ್ಕಾಗಿ ಸನ್ನಿ ಡಿಯೋಲ್‌​ಗೆ ಆಫರ್ ಮಾಡಿದ್ರು. ಕೊನೆಗೆ ಎರಡೂ ಪಾರ್ಟ್‌ನ ರಾಮಾಯಣಕ್ಕೆ 30 ಕೋಟಿ ಸಂಭಾವನೆ ಪಡೆದು ಹನುಮನ ರೋಲ್ ಮಾಡುತ್ತಿದ್ದಾರಂತೆ ಸನ್ನಿ ಡಿಯೋಲ್.

ಇನ್ನುಳಿದಂತೆ ಕಿರುತೆರೆಯ ಖ್ಯಾತ ನಟ ರವಿ ದುಬೆ ಲಕ್ಷ್ಮಣನ ಪಾತ್ರಕ್ಕಾಗಿ ಸುಮಾರು 15 ಕೋಟಿ ರೂಪಾಯಿ ಪಡೆದ್ರೆ, ಕೈಕೇಯಿ ರೋಲ್ ಮಾಡುತ್ತಿರೋ ಲಾರಾ ದತ್ತಾ 3 ಕೋಟಿ, ದಶರಥ ಮಹಾರಾಜ ಪಾತ್ರದಾರಿ ಅರುಣ್ ಗೋವಿಲ್ 1 ಕೋಟಿ ರೂಪಾಯಿ ಸಂಭಾವನೆ ಕೊಡಲಾಗಿದೆಯಂತೆ.

ಶೂರ್ಪನಖಿ ಆದ ರಾಕುಲ್ ಪ್ರೀತ್ ಸಿಂಗ್..!

ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ರೋಲ್ ಮಾಡೋದು ಯಾರು ಅನ್ನೋ ಚರ್ಚೆ ಇತ್ತು. ಅದಕ್ಕೆ ಈಗ ಉತ್ತರ ಸಿಕ್ಕಿದೆ. ಹಾಟ್ ಬ್ಯೂಟಿ ರಾಕುಲ್ ಪ್ರೀತ್ ಸಿಂಗ್​ ಶೂರ್ಪನಖಿ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಒಟ್ನಲ್ಲಿ ರಾಮಾಯಣದಲ್ಲಿ ಬರೋ ಪ್ರತಿ ಪಾತ್ರಗಳು ಕಣ್ಣಿಗೆ ಹಬ್ಬದಂತೆ ಕಾಣೋದ್ರಲ್ಲಿ ಡೌಟೇ ಇಲ್ಲ.

ಇನ್ನು ರಾಮಾಯಣ ಮೇಕಿಂಗ್ ಗೆ ಸಾವಿರಾರು ಕೋಟಿ ಸುರಿಯಲಾಗುತ್ತಿದೆ. ನಮಿತ್ ಮಲ್ಹೋತ್ರಾ ನಿರ್ಮಾಣದ, ದಂಗಲ್ ಡೈರೆಕ್ಟರ್ ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ 8 ಬಾರಿ ಆಸ್ಕರ್ ಪಡೆದಿರೋ DNEG ಕಂಪನಿ, ಈ ಸಿನಿಮಾದ VFX ಜವಾಬ್ದಾರಿ ವಹಿಸಿಕೊಂಡಿದ್ದು, ನಿರ್ಮಾಣದಲ್ಲೂ ಕೈ ಜೋಡಿಸಿದ್ದಾರೆ. ಹೀಗಾಗಿ ಸಿನಿಮಾದಲ್ಲಿ ವಿಎಫ್ ಎಕ್ಸ್​ ಕೆಲಸಕ್ಕೇ ನೂರಾರು ಕೋಟಿ ಖರ್ಚಾಗಲಿದೆ. ಈ ಮೂಲಕ ಹಿಂದು ದಿವ್ಯ ಪುರಾಣ ಭಾರತದ ಅತ್ಯಂತ ದುಭಾರಿ ಸಿನಿಮಾ ಆಗಿದೆ.

ವಿಜಯ್ ಪಟೆದಾರ್, ಏಷ್ಯಾನೆಟ್ ಸುವರ್ಣ ನ್ಯೂಸ್

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಸೀಕ್ರೆಟ್ ಬಹಿರಂಗ: ಹೈದರಾಬಾದ್‌ನಲ್ಲಿ ಪ್ರಿಯಾಂಕಾ ಚೋಪ್ರಾ ಈ ಮಹಾ ಗುಟ್ಟು ಕೊನೆಗೂ ರಟ್ಟಾಯ್ತು!
ದರ್ಶನ್ ಜೈಲು ಸೇರಿ 365 ದಿನ, ಜಾಮೀನು ಯಾವಾಗ? ರೇಣುಕಾಸ್ವಾಮಿ ಸಹವಾಸ, ದಾಸ 365 ದಿನ ವನವಾಸ.!