ರಾವಣನ ಜೊತೆ ರಕುಲ್ ಕಾಣಿಸಿಕೊಂಡ ಆ ದೃಶ್ಯಕ್ಕೆ ಪ್ರೇಕ್ಷಕರು ಫಿದಾ: ರಾಮಾಯಣದಲ್ಲಿ ಶೂರ್ಪನಖಿ ಹವಾ!

Published : Nov 05, 2026, 07:22 PM IST
Rakul Preet Singh

ಸಾರಾಂಶ

ರಾಮಾಯಣದಲ್ಲಿ ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್ ಎಂಟ್ರಿಗೆ ಪ್ರೇಕ್ಷಕರು ಫಿದಾ! ಕಡಿಮೆ ಸ್ಕ್ರೀನ್ ಟೈಮ್‌ನಲ್ಲೇ ನಟಿ ಮಾಡಿದ ಮೋಡಿ ಏನು? ಯಶ್ ಜೊತೆಗಿನ ದೃಶ್ಯಗಳಿಗೆ ಸಿಗುತ್ತಿರುವ ಮೆಚ್ಚುಗೆ ಎಷ್ಟರಮಟ್ಟಿಗಿದೆ? ಇಲ್ಲಿದೆ ಸಂಪೂರ್ಣ ವಿವರ.

ರಾಮಾಯಣ ಸಿನಿಮಾದಲ್ಲಿ ಶೂರ್ಪನಖಿ ಪಾತ್ರದ ಮೂಲಕ ರಕುಲ್ ಪ್ರೀತ್ ಸಿಂಗ್ ಪ್ರೇಕ್ಷಕರ ಮನಗೆದ್ದಿದ್ದಾರೆ. ಅವರ ಲುಕ್, ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಅದ್ಭುತ ನಟನೆಗೆ ನೆಟ್ಟಿಗರು ಫಿದಾ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ 'ರಾಮಾಯಣ' ಸಿನಿಮಾ ಇಂದು ಥಿಯೇಟರ್‌ಗಳಲ್ಲಿ ರಿಲೀಸ್ ಆಗಿದೆ.

ನಮಿತ್ ಮಲ್ಹೋತ್ರಾ ನಿರ್ಮಾಣದ ಈ ಚಿತ್ರದಲ್ಲಿ ರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ, ರಾವಣನಾಗಿ ಯಶ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಇವರ ಜೊತೆಗೆ ರಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಅದ್ಭುತ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ತೀಕ್ಷ್ಣ ನಟನೆಯಿಂದ ರಕುಲ್ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

ಶೂರ್ಪನಖಿ ಪಾತ್ರದಲ್ಲಿ ರಕುಲ್ ಪ್ರೀತ್ ಸಿಂಗ್ ಅವರ ಲುಕ್ ಹಾಗೂ ನಟನೆ ಪ್ರೇಕ್ಷಕರಿಗೆ ಸಖತ್ ಇಷ್ಟವಾಗಿದೆ. ಕಡಿಮೆ ಸ್ಕ್ರೀನ್ ಟೈಮ್ ಇದ್ದರೂ, ತಮ್ಮ ನಟನೆಯಿಂದ ಅವರು ದೊಡ್ಡ ಇಂಪ್ಯಾಕ್ಟ್ ಮಾಡಿದ್ದಾರೆ ಎಂದು ಫ್ಯಾನ್ಸ್ ಹೊಗಳುತ್ತಿದ್ದಾರೆ. ಅಭಿಮಾನಿಯೊಬ್ಬರು, "ರಕುಲ್ ಪ್ರೀತ್ ಸಿಂಗ್ ಅವರ ನಟನೆ ಅದ್ಭುತವಾಗಿದೆ! ಅವರ ಸ್ಕ್ರೀನ್ ಪ್ರೆಸೆನ್ಸ್ ಹಾಗೂ ಶೂರ್ಪನಖಿ ಪಾತ್ರಕ್ಕೆ ಅವರು ತಂದಿರುವ ತೀವ್ರತೆ ನಿಜಕ್ಕೂ ಇಷ್ಟವಾಯಿತು" ಎಂದು ಬರೆದುಕೊಂಡಿದ್ದಾರೆ.

ಪ್ರಭಾವ ಬೀರುವುದು ಸುಲಭವಲ್ಲ

ಮತ್ತೊಬ್ಬರು, "ಶೂರ್ಪನಖಿಯಾಗಿ ರಕುಲ್ ಅವರನ್ನು ನೋಡಿ ಖುಷಿಯಾಯ್ತು! ಅವರ ಸೌಂದರ್ಯ ಹಾಗೂ ನಟನೆಯ ಮೇಲಿನ ಶ್ರದ್ಧೆ ಮೆಚ್ಚುವಂತದ್ದು" ಎಂದಿದ್ದಾರೆ. ಇನ್ನೊಬ್ಬ ಫ್ಯಾನ್, "ನನಗೆ ಶೂರ್ಪನಖಿ ಪಾತ್ರವೇ ಹೈಲೈಟ್ ಎನಿಸಿತು. ಕಡಿಮೆ ಸಮಯದಲ್ಲಿ ಇಷ್ಟೊಂದು ಪ್ರಭಾವ ಬೀರುವುದು ಸುಲಭವಲ್ಲ, ಆದರೆ ರಕುಲ್ ಅದನ್ನು ಅದ್ಭುತವಾಗಿ ಮಾಡಿದ್ದಾರೆ" ಎಂದು ಟ್ವೀಟ್ ಮಾಡಿದ್ದಾರೆ.

ರಾವಣನಾಗಿ ನಟಿಸಿರುವ ಯಶ್ ಹಾಗೂ ರಕುಲ್ ಒಟ್ಟಿಗೆ ಕಾಣಿಸಿಕೊಂಡಿರುವ ದೃಶ್ಯಗಳಿಗೂ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇಬ್ಬರ ಕಾಂಬಿನೇಷನ್ ಹಾಗೂ ದೃಶ್ಯದ ವೈಭವವನ್ನು ಪ್ರೇಕ್ಷಕರು ಕೊಂಡಾಡುತ್ತಿದ್ದಾರೆ. "ರಾವಣ ಹಾಗೂ ಶೂರ್ಪನಖಿಯಾಗಿ ಯಶ್ ಮತ್ತು ರಕುಲ್ ಅವರನ್ನು ಒಟ್ಟಿಗೆ ನೋಡುವುದೇ ಒಂದು ಹಬ್ಬ ಇಬ್ಬರ ಪ್ರೆಸೆನ್ಸ್ ಹಾಗೂ ದೃಶ್ಯದ ಗ್ರ್ಯಾಂಡ್ಯೂರ್ ಎದ್ದು ಕಾಣುತ್ತದೆ" ಎಂದು ಅಭಿಮಾನಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಕ್ಯಾ ಬಾತ್ ಹೈ!

ಮತ್ತೊಬ್ಬರು, "ಶೂರ್ಪನಖಿಯಾಗಿ ರಕುಲ್ ಪ್ರೀತ್ ಸಿಂಗ್... ಕ್ಯಾ ಬಾತ್ ಹೈ! ಅವರ ಸೌಂದರ್ಯ ಹಾಗೂ ಇಂಪ್ಯಾಕ್ಟ್‌ಫುಲ್ ನಟನೆ ರಾಮಾಯಣದ ಮರೆಯಲಾಗದ ಕ್ಷಣಗಳಲ್ಲಿ ಒಂದು" ಎಂದಿದ್ದಾರೆ. ರಾಮನಾಗಿ ರಣಬೀರ್ ಕಪೂರ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಜೊತೆಗಿನ ರಕುಲ್ ದೃಶ್ಯಗಳಿಗೂ ಪ್ರಶಂಸೆ ವ್ಯಕ್ತವಾಗಿದೆ. ಇನ್ನು ತಮ್ಮ ಸೌಂದರ್ಯ, ಹಾವಭಾವ ಹಾಗೂ ಅದ್ಭುತ ನಟನೆಯಿಂದ ರಕುಲ್ ಪ್ರೀತ್ ಸಿಂಗ್ ಶೂರ್ಪನಖಿ ಪಾತ್ರಕ್ಕೆ ಜೀವ ತುಂಬಿದ್ದಾರೆ.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಟ ಜೈಜಗದೀಶ್​ಗೆ ಇದೇನಾಯ್ತು? ವ್ಹೀಲ್​ಚೇರ್​ನಲ್ಲಿನ ವಿಡಿಯೋ ನೋಡಿ ಅಭಿಮಾನಿಗಳು ಶಾಕ್​
Karna Serial- ಈ ನಿತ್ಯಾಗೆ ಸ್ವಲ್ಪವೂ ಬುದ್ಧಿ ಇಲ್ಲ: ನಟಿ ನಮ್ರತಾ ಗೌಡ ಮೇಲೆ ವೀಕ್ಷಕರು ಗರಂ