
ಆಂಧ್ರ ಪ್ರದೇಶ: ಪವನ್ ಕಲ್ಯಾಣ್ ಪ್ರಸ್ತುತ ಆಂಧ್ರ ಪ್ರದೇಶ ಉಪಮುಖ್ಯಮಂತ್ರಿ, ಪ್ರಭಾವಿ ರಾಜಕಾರಣಿ. ಅವರ ಮಾಜಿ ಪತ್ನಿ ಮತ್ತು ನಟಿ ರೇಣು ದೇಸಾಯಿ ಪವನ್ ಕಲ್ಯಾಣ್‌ಗೆ ಸಂಬಂಧಿಸಿದ ಅಚ್ಚರಿ ವಿಚಾರವೊಂದನ್ನ ಬಾಯಿ ಬಿಟ್ಟಿದ್ದಾರೆ. ಇತ್ತೀಚೆಗೆ ನಡೆದ ವಿಶುವಲ್ ಟಾಕ್ಸ್ ಪಾಡ್‌ಕಾಸ್ಟ್‌ನಲ್ಲಿ ತಮ್ಮ ಹಳೆಯ ದಿನಗಳನ್ನ ನೆನಪಿಸಿಕೊಂಡು, ಪವನ್ ಕಲ್ಯಾಣ್‌ಗಾಗಿ ವಸ್ತ್ರ ವಿನ್ಯಾಸಕಿಯಾಗಿ ಕೆಲಸ ಮಾಡಿದ್ದ ಅನುಭವನ್ನು ಹಂಚಿಕೊಂಡಿದ್ದಾರೆ.
ಪವನ್ ಕಲ್ಯಾಣ್ ಸ್ಟೈಲೀಶ್ ಆಗಿ ಕಾಣಬೇಕು ಎಂಬ ಕಾರಣಕ್ಕೆ ಬಟ್ಟೆ ಖರೀದಿಸಲು ಲಂಡನ್‌ಗೆ ಹೋಗುತ್ತಿದ್ದೆ. ಅಲ್ಲಿನ ಪ್ರಸಿದ್ಧ ಸೆಲ್ಫ್ರಿಡ್ಜಸ್ ಮಾಲ್‌ನಲ್ಲಿ ನಾನು ಪವನ್ ಅವರಿಗಾಗಿ ಬಟ್ಟೆ ಹುಡುಕುತ್ತಿದ್ದೆ. ಅದೇ ಸಮಯದಲ್ಲಿ ಬಾಲಿವುಡ್‌ನ ಖ್ಯಾತ ನಿರ್ದೇಶಕ ಕರಣ್ ಜೋಹರ್, ನಟ ಶಾರುಖ್ ಖಾನ್ ಅವರಿಗಾಗಿ ಬಟ್ಟೆಗಳನ್ನು ಆಯ್ಕೆ ಮಾಡಲು ಅಲ್ಲಿಗೆ ಬರುತ್ತಿದ್ದರು. ಈ ವೇಳೆ ನಾವು ಹಲವು ಬಾರಿ ಮುಖಾಮುಖಿಯಾಗಿದ್ದೇವೆ ಎಂಬ ವಿಚಾರವನ್ನ ತಿಳಿಸಿದ್ದಾರೆ.
ಪವನ್ ಕಲ್ಯಾಣ್ 'ಬಾಲು' ಸಿನಿಮಾದಲ್ಲಿ ವಿಶಿಷ್ಟ ಪ್ಯಾಂಟ್‌ಗಳನ್ನ ಧರಿಸಿದ್ದರು. ಅವರು ಅಂದಿನ ಯುವಕರಲ್ಲಿ ತುಂಬಾನೇ ಕ್ರೇಜ್ ಹುಟ್ಟಿಸಿತ್ತು. ಈ ಪ್ಯಾಂಟ್‌ಗಳ ಹಿಂದಿನ ಕಥೆ ಹೇಳಿದ ರೇಣು ದೇಸಾಯಿ, ಇಟಲಿಯ ಮಿಲಾನ್ ನಗರದ ಅಂಗಡಿಯಲ್ಲಿ ಈ ಬಟ್ಟೆಗಳನ್ನ ಖರೀದಿಸಲಾಗಿತ್ತು. ಆ ಪ್ಯಾಂಟ್‌ಗಳನ್ನು ಎರಡನೇ ಮಹಾಯುದ್ಧದ ಕಾಲದ ನೈಜ ಬಟ್ಟೆಯಿಂದ ತಯಾರಿಸಲಾಗಿತ್ತು. ಇಡೀ ಜಗತ್ತಿನಲ್ಲಿ ಅಂತಹ ಕೇವಲ ಐದು ಪ್ಯಾಂಟ್‌ಗಳನ್ನು ಮಾತ್ರ ಹೊಲಿಯಲಾಗಿತ್ತು. ಒಂದೊಂದು ಪ್ಯಾಂಟ್ ಬೆಲೆ ಆ ಕಾಲದಲ್ಲೇ ಸುಮಾರು 75,000 ರೂಪಾಯಿ ಆಗಿತ್ತು ಎಂದು ರೇಣು ದೇಸಾಯಿ ತಿಳಿಸಿದ್ದಾರೆ.
ಆ ಐದು ಪ್ಯಾಂಟ್‌ಗಳಲ್ಲಿ ಒಂದನ್ನು ವಿಶ್ವವಿಖ್ಯಾತ ಫುಟ್‌ಬಾಲ್ ಆಟಗಾರ ಡೇವಿಡ್ ಬೆಕ್‌ಹ್ಯಾಮ್ ಖರೀದಿಸಿದ್ದರು. ನಾನು ಕೆಲವು ತಿಂಗಳ ಹಿಂದೆಯೇ ಮುಂಗಡವಾಗಿ ಹಣ ನೀಡಿ ಆ ಪ್ಯಾಂಟ್‌ಗಳನ್ನು ಪಡೆದುಕೊಂಡಿದ್ದೆ. ಅಂದು ಇಂದಿನಂತೆ ದೊಡ್ಡ ಕೊರಿಯರ್ ವ್ಯವಸ್ಥೆಗಳಿಲ್ಲದ ಕಾರಣ.. ಕೇವಲ ಆ ಪ್ಯಾಂಟ್‌ಗಳನ್ನು ತರಲೆಂದೇ ನಾನು ಮತ್ತೊಮ್ಮೆ ಮಿಲಾನ್‌ಗೆ ವಿಮಾನದಲ್ಲಿ ತೆರಳಿದೆ ಎಂದು ತಿಳಿಸಿದ್ದರೆ.
ಇನ್ನು ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಮೊದಲ ಬಾರಿಗೆ ಪುರಿ ಜಗನ್ನಾಥ್ ನಿರ್ದೇಶನದ 'ಬದ್ರಿ' ಸಿನಿಮಾದ ಚಿತ್ರೀಕರಣದ ವೇಳೆ ಭೇಟಿಯಾದರು. ನಂತರ ಅವರಿಬ್ಬರ ನಡುವೆ ಪ್ರೀತಿ ಬೆಳೆಯಿತು. ಬಳಿಕ ಪವನ್ ಕಲ್ಯಾಣ್ ನಿರ್ದೇಶಿಸಿದ ಜಾನಿ ಚಿತ್ರದಲ್ಲೂ ಇಬ್ಬರೂ ಒಟ್ಟಿಗೆ ನಟಿಸಿದರು. ಈ ಸಿನಿಮಾಗೆ ರೇಣು ಪ್ರೊಡಕ್ಷನ್ ಡಿಸೈನ್ ಮತ್ತು ಕಾಸ್ಟ್ಯೂಮ್ ಡಿಸೈನ್ ಜವಾಬ್ದಾರಿ ಹೊತ್ತಿದ್ದರು. ಜನವರಿ 28, 2009 ರಂದು ಆರ್ಯ ಸಮಾಜ ಪದ್ಧತಿಯಂತೆ ಇಬ್ಬರೂ ವಿವಾಹವಾದರು. ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದಾಗಿ 2011 ರಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ, 2012 ರಲ್ಲಿ ಅಧಿಕೃತವಾಗಿ ಬೇರ್ಪಟ್ಟರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.