ವಿಶ್ವದಾಖಲೆ ಬರೆದ ರಾಮಾಯಣ ಧಾರಾವಾಹಿ ಪ್ರಸಾರ ಮುಕ್ತಾಯ

By Kannadaprabha NewsFirst Published May 3, 2020, 2:33 PM IST
Highlights

ಕೊರೋನಾ ಲಾಕ್‌ಡೌನ್‌ ವೇಳೆ ಜನರ ಬೇಸರ ನೀಗಿಸಲೆಂದು ಕೇಂದ್ರ ಸರ್ಕಾರ ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದ ರಮಾನಂದ್‌ ಸಾಗರ್‌ ನಿರ್ದೇಶನದ ‘ರಾಮಾಯಣ’ ಧಾರಾವಾಹಿ ಪ್ರಸಾರ ಶನಿವಾರ ಮುಕ್ತಾಯವಾಗಿದೆ. ಇದರೊಂದಿಗೆ ರಾಮಾಯಣ ಧಾರಾವಾಹಿ ಹೊಸ ಇತಿಹಾಸವೊಂದನ್ನೂ ರಚಿಸಿದೆ.

ನವದೆಹಲಿ (ಮೇ. 03):  ಕೊರೋನಾ ಲಾಕ್‌ಡೌನ್‌ ವೇಳೆ ಜನರ ಬೇಸರ ನೀಗಿಸಲೆಂದು ಕೇಂದ್ರ ಸರ್ಕಾರ ದೂರದರ್ಶನದಲ್ಲಿ ಪ್ರಸಾರ ಮಾಡುತ್ತಿದ್ದ ರಮಾನಂದ್‌ ಸಾಗರ್‌ ನಿರ್ದೇಶನದ ‘ರಾಮಾಯಣ’ ಧಾರಾವಾಹಿ ಪ್ರಸಾರ ಶನಿವಾರ ಮುಕ್ತಾಯವಾಗಿದೆ. ಇದರೊಂದಿಗೆ ರಾಮಾಯಣ ಧಾರಾವಾಹಿ ಹೊಸ ಇತಿಹಾಸವೊಂದನ್ನೂ ರಚಿಸಿದೆ.

33 ವರ್ಷಗಳ ಹಿಂದೆ ಅಂದರೆ 1987ರಲ್ಲಿ 70ಕ್ಕೂ ಹೆಚ್ಚು ಕಂತುಗಳಲ್ಲಿ ಪ್ರಸಾರವಾಗಿದ್ದ ಧಾರಾವಾಹಿಯನ್ನು ಜನರ ಬೇಡಿಕೆ ಮೇರೆಗೆ ದೂರದರ್ಶನ ಚಾನೆಲ್‌ನಲ್ಲಿ ಏ.16ರಿಂದ ನಿತ್ಯ 2 ಎಪಿಸೋಡ್‌ಗಳಂತೆ ಪ್ರಸಾರ ಮಾಡಲಾಗುತ್ತಿತ್ತು. ಇದನ್ನು ವಿಶ್ವದಾದ್ಯಂತ 7.7 ಕೋಟಿ ಜನ ವೀಕ್ಷಿಸುವ ಮೂಲಕ ವಿಶ್ವದಾಖಲೆ ನಿರ್ಮಾಣವಾಗಿತ್ತು. ಅದಾದ ಬಳಿಕ ದೂರದರ್ಶನ ಚಾನೆಲ್‌ನಲ್ಲಿ ಉತ್ತರ ರಾಮಾಯಣ ಪ್ರಸಾರ ಮಾಡಲಾಗುತ್ತಿತ್ತು. ಅದರ ಕಡೆಯ ಕಂತು ಶನಿವಾರ ಪ್ರಸಾರವಾಗುವುದರೊಂದಿಗೆ ರಾಮಾಯಣದ ಧಾರಾವಾಹಿ ಪ್ರಸಾರ ಮುಕ್ತಾಯವಾಗಿದೆ.

ರಾಮಾಯಣ ಈಗ ವಿಶ್ವದಲ್ಲೇ ನಂ.1 ಶೋ.!

ರಾಮಾಯಣ ಧಾರಾವಾಹಿ ಮುಕ್ತಾಯದ ಬೆನ್ನಲ್ಲೇ ರಮಾನಂದ್‌ ಸಾಗರ್‌ ಅವರ ಶ್ರೀಕೃಷ್ಣ ಧಾರಾವಾಹಿ ದೂರದರ್ಶನದಲ್ಲಿ ಪ್ರಸಾರವಾಗಲಿದೆ.

ಕೊರೋನಾ ಲಾಕ್‌ಡೌನ್‌ನ ಜನರ ಬೇಸರ ತಣಿಸಲು ಪುನಃ ಪ್ರಸಾರ ಮಾಡಲಾಗುತ್ತಿರುವ 3 ದಶಕಗಳ ಹಿಂದಿನ ಪೌರಾಣಿಕ ರಾಮಾಯಣ ಧಾರಾವಾಹಿಯು ಮತ್ತೊಮ್ಮೆ ಸೂಪರ್‌ಹಿಟ್‌ ಆಗಿದೆ. ಕಳೆದ ಶನಿವಾರ ಮತ್ತು ಭಾನುವಾರ ಪ್ರಸಾರವಾದ ಒಟ್ಟು 4 ಎಪಿಸೋಡ್‌ಗಳನ್ನು ಭರ್ಜರಿ 17 ಕೋಟಿ ಜನ ವೀಕ್ಷಿಸಿದ್ದಾರೆ. 

ಸೀತಾಪಹರಣ ಮಾಡಿದ್ದಕ್ಕೆ ಜನರ ಭಾವುಕರಾದ 'ರಾವಣ'!

 80ರ ದಶಕದಲ್ಲಿ ಜನರನ್ನು ಮೋಡಿ ಮಾಡಿದ್ದ ರಾಮಾಯಣ ಧಾರಾವಾಹಿ, ಇದೀಗ ಮರು ಪ್ರಸಾರದ ವೇಳೆಯೂ ಹೊಸ ಇತಿಹಾಸ ಸೃಷ್ಟಿಸಿದೆ. ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಡಿಡಿ ವಾಹಿನಿಯಲ್ಲಿ ರಾಮಾಯಣ ಧಾರಾವಾಹಿ ಮರು ಪ್ರಸಾರ ಆಗುತ್ತಿದ್ದು, ಏ.16ರಂದು ರಾತ್ರಿ 9 ಗಂಟೆಗೆ ಪ್ರಸಾರವಾದ ಕಂತನ್ನು 7.7 ಕೋಟಿ ಜನರು ವೀಕ್ಷಿಸಿದ್ದಾರೆ. ಈ ಮೂಲಕ ಭಾರತವಷ್ಟೇ ಅಲ್ಲ, ವಿಶ್ವದಲ್ಲೇ ಅತಿ ಹೆಚ್ಚು ಜನರು ವೀಕ್ಷಿಸಿದ ಧಾರಾವಾಹಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

click me!