ಸ್ಯಾಂಡಲ್‌ವುಡ್ ರಾಕಿಂಗ್ ಕಪಲ್ ಮುದ್ದಾದ ಮಕ್ಕಳು -ಐರಾ ಹಾಗೂ ಜೂನಿಯರ್ ಈಗ ಸ್ಯಾಂಡಲ್‌ವುಡ್ ಸ್ಟಾರ್ ಕಿಡ್ಸ್ . ಹಾಗಾದರೆ ಈಗ ಯಶ್-ರಾಧಿಕಾ ದಿನಚರಿ ಹೇಗಿರುತ್ತದೆ?
ಕನ್ನಡ ಚಿತ್ರರಂಗದ ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಲಾಕ್‌ಡೌನ್‌ನಿಂದ ಮನೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಚಿತ್ರೀಕರಣ ಹಾಗೂ ಇತರೆ ಸಿನಿ ಕಾರ್ಯಕ್ರಮಗಳು ರದ್ದಾಗಿರುವ ಕಾರಣ ಮಕ್ಕಳ ಜೊತೆ ಯಶ್ ಟೈಂ ಪಾಸ್ ಮಾಡುತ್ತಿದ್ದಾರೆ.
ಯಶ್-ರಾಧಿಕಾ ಪುತ್ರನ ಪೋಟೋ ರಿವೀಲ್; ಗುರುವಾರದ ಧಮಾಕ!
ಕೆಜಿಎಫ್ 2 ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದ ಯಶ್ ಈಗ ಮಗಳ ಜೊತೆ ಮೋಸ್ಟ್ ಮೆಮೋರಬಲ್ ಟೈಂ ಸ್ಪೆಂಡ್ ಮಾಡುತ್ತಿದ್ದಾರೆ. ಏಪ್ರಿಲ್ 30ಕ್ಕೆ 6 ತಿಂಗಳು ತುಂಬಿರುವ ಖುಷಿಯಲ್ಲಿ ಜೂನಿಯರ್ ರಾಕಿ ಬಾಯ್ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸುವ ಮೂಲಕ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟರು. ದಂಪತಿಗಳಿಬ್ಬರು ಮನೆಯಲ್ಲಿಯೇ ಇದ್ದರೂ ಕೈ ತುಂಬಾ ಕೆಲಸ ತುಂಬಿದೆ. ಹೀಗೆಂದು ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ.
'ಇದು ವಂಡರ್‌ಫುಲ್ ಫೇಸ್. ಮಕ್ಕಳು ಸಂತೋಷವನ್ನು ಮಾತ್ರವಲ್ಲದೆ ನಮ್ಮ ಇನ್ನೊಂದು ಮುಖವನ್ನು ಬಹಿರಂಗ ಮಾಡುತ್ತಾರೆ. ನಾನು ಈ ಸಮಯವನ್ನು ಅವರೊಟ್ಟಿಗೆ ಸಂತೋಷದಿಂದ ಕಳೆಯುತ್ತಿರುವೆ. ಐರಾ ಬಗ್ಗೆ ಹೇಳೋದೆ ಬೇಡ. ದಿನಾ ನನಗೆ ಊಟ ಮಾಡಿಸುವುದನ್ನು ಮಿಸ್ ಮಾಡುವುದಿಲ್ಲ. ನನ್ನ ಮಗಳಿಗಿಂತ ತಾಯಿ ಥರ ನೋಡಿಕೊಳ್ಳುತ್ತಿದ್ದಾಳೆ' ಎಂದು ಯಶ್ ಮಾತನಾಡಿದ್ದಾರೆ.
'ನನ್ನ ಮಗ ಈ ವಯಸ್ಸಿನಲ್ಲೇ ತುಂಬಾ ಡಿಮ್ಯಾಂಡಿಂಗ್. ನಾವು ಮಲಗುವವರೆಗೂ ಅವನು ಮಲಗುವುದಿಲ್ಲ. ನಾನು ರಾಧಿಕಾ ಇಬ್ಬರು ಇದ್ದರೆ ಮಾತ್ರ ಅವನು ಮಲಗುವುದು. ಅವನ ನಿದ್ದೆ ಟೈಂ ಆಗಿದ್ದರೂ ನಮಗಾಗಿ ಕಾದು ನಿದ್ದೆ ಮಾಡುತ್ತಾನೆ. ಆದರೆ ಮಧ್ಯ ರಾತ್ರಿ ಎದ್ದರೆ ಯಾರೂ ಯೋಚಿಸಿದಷ್ಟು ಜೋರಾಗಿ ಸದ್ದು ಮಾಡುತ್ತಾನೆ' ಎಂದು ಹೇಳಿಕೊಂಡಿದ್ದಾರೆ.
'ಐರಾ ಎಲ್ಲಾ ಕಡೆ ಓಡಾಡುತ್ತಿರುತ್ತಾಳೆ. ಲಾಕ್‌ಡೌನ್‌ನಿಂದ ನಾವು ಎಲ್ಲಿಯೂ ಹೋಗುತ್ತಿಲ್ಲ ಎಂದು ಆಕೆ ನೋಡುತ್ತಾಳೆ. ಯಾರಾದರೂ ಬಾಗಿಲು ಓಪನ್ ಮಾಡಿದರೆ ಸಾಲು ಶೂಸ್ ತೆಗೆದುಕೊಂಡು ಹೊರಡುತ್ತಾಳೆ. ಐರಾ ತುಂಬಾ ಓಪನ್ ಗಾಳಿಯಲ್ಲಿ ಇರಲು ಇಷ್ಟ ಪಡುತ್ತಾಳೆ. ಆಕೆ ಹೊಸ ದಿನಚರಿ ಶುರುವಾದ ನಂತರ ದಿನವೂ ವಾಕ್ ಕರೆದುಕೊಂಡು ವಿಭಿನ್ನವಾಗಿ ಟೈಂ ಸ್ಪೆಂಡ್ ಮಾಡಬೇಕು' ಎಂದು ಯಶ್ ತಮ್ಮ ಮಕ್ಕಳ ಬಗ್ಗೆ ಮಾತನಾಡಿದ್ದಾರೆ.
ಇನ್ನು ಇಬ್ಬರೂ ಮಕ್ಕಳನ್ನು ಮ್ಯಾನೇಜ್ ಮಾಡುವುದರಲ್ಲಿ ಬ್ಯುಸಿಯಾಗಿರುವ ರಾಧಿಕಾ ಪಂಡಿತ್ 'ನನ್ನ ನಿದ್ದೆ ಸೈಕಲ್ ಬದಲಾಗಿದೆ ಹಾಗೂ ಕೆಲವೊಮ್ಮೆ ಫುಲ್ ಸುಸ್ತಾಗುತ್ತದೆ. ಮಕ್ಕಳು ಬರುವ ಮೊದಲು ನಾವು ತುಂಬಾ ಟೈಂ ಕಳೆಯುತ್ತಿದ್ದೆವು , ಒಟ್ಟಾಗಿ ಸಿನಿಮಾ ವೀಕ್ಷಿಸುತ್ತಿದ್ದೆವು . ಆದರೆ ಈಗ ಮಕ್ಕಳನ್ನು ನೋಡಿಕೊಳ್ಳುವುದರಲ್ಲಿ ಬ್ಯುಸಿಯಾಗಿದ್ದೇವೆ. ಯಾವಾಗ್ಲೂ ಅವರಿಗೂ ಮನೋರಂಜನೆ ಬೇಕು. ಐರಾ ನೋಡಿದನ್ನೆಲ್ಲಾ ಎಳೆದು ಬಾಯಿಗೆ ಹಾಕಿಕೊಳ್ಳುತ್ತಾಳೆ ಹಾಗೂ ಎಲ್ಲಂದರಲ್ಲಿ ಹತ್ತಲು ಪ್ರಯತ್ನ ಪಡುತ್ತಾಳೆ .ಜೂನಿಯರ್ ಕೂಡ ಈಗ ಅದನ್ನೇ ಮಾಡಲು ಶುರು ಮಾಡಿದ್ದಾನೆ.ಹಾಗಾಗಿ ಟಿವಿ ರಿಮೋರ್ಟ್ ಎಲ್ಲವೂ ಅವರಿಗೆ ಸಿಗದ ಹಾಗೆ ಎತ್ತಿಟ್ಟಿದ್ದೇವೆ . ಯಶ್ ಒಟ್ಟಿಗೆ ಇರುವುದಕ್ಕೆ ಎಲ್ಲವೂ ಸುಲಭ ಎಂದೆನಿಸುತ್ತಿದೆ. ಐರಾ ಫುಲ್ ಖುಷಿಯಾಗಿದ್ದಾಳೆ ' ಎಂದು ರಾಧಿಕಾ ಮಾತನಾಡಿದ್ದಾರೆ.